ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೃಹಿಣಿಯ ಜೀವ ಬಲಿ ಪಡೆದ ವಾಟ್ಸಪ್ ಸಂದೇಶ

|
Google Oneindia Kannada News

ಮೈಸೂರು, ಜೂ.24 : ವಾಟ್ಸಪ್ ಸಂದೇಶವೊಂದು ಗೃಹಿಣಿಯ ಜೀವವನ್ನು ಬಲಿತೆಗೆದುಕೊಂಡಿದೆ. 'ಯೂ ಆರ್ ಮೈ ಸ್ವೀಟ್ ಹಾರ್ಟ್' ಎಂದು ಬಂದ ಸಂದೇಶದಿಂದ ಪತಿ ಮತ್ತು ಪತ್ನಿ ನಡುವೆ ಜಗಳವಾಗಿದ್ದು, ಕೊನೆಗೆ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರಿನ ತಿಲಕ್‌ ನಗರದ ನಿವಾಸಿ ರೂಪೇಶ್ ಅವರ ಪತ್ನಿ ನವ್ಯಶ್ರೀ (24) ಆತ್ಮಹತ್ಯೆ ಮಾಡಿಕೊಂಡವರು. ದಾವಣಗೆರೆ ಮೂಲದವರಾದ ನವ್ಯಶ್ರೀ ಅವರ ವಿವಾಹ 14 ತಿಂಗಳ ಹಿಂದೆಯಷ್ಟೇ ರೂಪೇಶ್‌ ಜೊತೆ ನಡೆದಿತ್ತು. ರೂಪೇಶ್‌ ಸಿಎಫ್‌ಟಿಆರ್‌ಐನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದರು. [ಪಾಲಿಕೆಗೆ ಫಜೀತಿ ತಂದ ವಾಟ್ಸಪ್ ಸಂದೇಶ!]

whatsapp

ನವ್ಯಶ್ರೀ ತಂದೆ ನೀಡಿರುವ ದೂರಿನ ಅನ್ವಯ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವ್ಯಶ್ರೀ ಅವರಿಗೆ ವಾಟ್ಸಪ್ ಸಂದೇಶ ಕಳುಹಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಮೈಸೂರು ಪೊಲೀಸರಿಗೆ ವಾಟ್ಸಪ್ ಮೂಲಕ ದೂರು ಕೊಡಿ]

ಘಟನೆ ವಿವರ : ಜೂನ್ 21ರ ಭಾನುವಾರ ಸಂಜೆ ನವ್ಯಶ್ರೀ ಅವರ ಮೊಬೈಲ್‌ ಹಿಡಿದುಕೊಂಡು ರೂಪೇಶ್ ಆಟ ವಾಡುತ್ತಿದ್ದರು. ಈ ಸಮಯದಲ್ಲಿ 'ಯೂ ಆರ್ ಮೈ ಸ್ವೀಟ್ ಹಾರ್ಟ್' ಎಂಬ ವಾಟ್ಸಪ್ ಸಂದೇಶ ಬಂದಿದೆ. ಸಂದೇಶ ನೋಡಿ ಅನುಮಾನಗೊಂಡ ರೂಪೇಶ್‌ ಈ ಬಗ್ಗೆ ಪ್ರಶ್ನಿಸಿದ್ದಾರೆ. [ಹುಚ್ಚುತನದ ಪರಮಾವಧಿ, ವಾಟ್ಸಪ್ ಗ್ರೂಪ್ ಕಥೆ ನೋಡಿ]

ಸಂದೇಶದ ಕುರಿತು ನವ್ಯಶ್ರೀ ಅವರು ಎಷ್ಟು ಸ್ಪಷ್ಟನೆಗಳನ್ನು ಕೊಟ್ಟರೂ ರೂಪೇಶ್ ನಂಬಿರಲಿಲ್ಲ. ಪತ್ನಿಯೊಂದಿಗೆ ಮಾತುಬಿಟ್ಟಿದ್ದರು. ಸೋಮವಾರ ಮಧ್ಯಾಹ್ನ ಸಹ ನವ್ಯಶ್ರೀ ಪತಿಗೆ ಕರೆ ಮಾಡಿ ಮಾತನಾಡಿಸುವ ಪ್ರಯತ್ನ ಮಾಡಿದ್ದರು. ಮನೆಗೆ ಬಂದು ಮಾತನಾಡುತ್ತೇನೆ ಎಂದು ರೂಪೇಶ್ ಹೇಳಿದ್ದರು.

ರೂಪೇಶ್ ಸರಿಯಾಗಿ ಮಾತನಾಡಲಿಲ್ಲ ಎಂದು ಬೇಸತ್ತ ನವ್ಯಶ್ರೀ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂದೇಶ ಕಳುಹಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

English summary
A 24-year-old women committed suicide by hanging himself after she received whats-app messages. Mandi Mohalla police registered the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X