ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಾಜಕೀಯ : ಚಾಮರಾಜ ಕ್ಷೇತ್ರದ ಜೆಡಿಎಸ್ ಬಂಡಾಯ ಅಂತಿಮ ಘಟ್ಟಕ್ಕೆ!

|
Google Oneindia Kannada News

ಮೈಸೂರು, ಡಿಸೆಂಬರ್ 04 : 'ಚಾಮರಾಜ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಜನರು ನೋಡುತ್ತಿದ್ದಾರೆ. ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ' ಎಂದು ಜೆಡಿಎಸ್ ನಾಯಕ ಕೆ.ಹರೀಶ್ ಗೌಡ ಹೇಳಿದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರದ ಮೇಟಗಳ್ಳಿ ಗಣಪತಿ ದೇವಾಲಯದ ಬಳಿ ಭಾನುವಾರ ಕೆ.ಹರೀಶ್ ಗೌಡ ಹಿತೈಷಿಗಳು ಹಾಗೂ ಅಭಿಮಾನಿಗಳ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಹರೀಶ್ ಗೌಡ ಅವರು, 'ಚುನಾವಣೆಗೆ ಜೆಡಿಎಸ್ ಟಿಕೆಟ್ ಕೇಳಿದ್ದೇ ತಪ್ಪಾ?' ಎಂದು ಪಕ್ಷದ ನಾಯಕರನ್ನು ಪ್ರಶ್ನಿಸಿದರು.

ನಗರಾಧ್ಯಕ್ಷ ಸ್ಥಾನದಿಂದ ಹರೀಶ್ ಗೌಡ ವಜಾನಗರಾಧ್ಯಕ್ಷ ಸ್ಥಾನದಿಂದ ಹರೀಶ್ ಗೌಡ ವಜಾ

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಕ್ಷೇತ್ರಕ್ಕೆ 2018ರ ಚುನಾವಣೆ ಅಭ್ಯರ್ಥಿಯಾಗಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಘೋಷಣೆ ಮಾಡಲಾಗಿದೆ. ಕೆ.ಹರೀಶ್ ಗೌಡ ಅವರನ್ನು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ.

ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ!ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ!

ಈ ಬೆಳವಣಿಗೆಗಳ ಬಳಿಕ ಹರೀಶ್ ಗೌಡ ಅವರು ಅಭಿಮಾನಿಗಳು ಮತ್ತು ಹಿತೈಷಿಗಳ ಸಭೆ ನಡೆಸಿದರು. 'ನಾನು ಮಾಡಿರುವ ತಪ್ಪೇನು, ಕ್ಷೇತ್ರದಲ್ಲಿ ನಿಷ್ಕ್ರೀಯವಾಗಿದ್ದ ಪಕ್ಷವನ್ನು ಸಂಘಟನೆ ಮೂಲಕ ಚುರುಕುಗೊಳಿಸಿದ್ದೇ ತಪ್ಪಾ?' ಎಂದು ಪಕ್ಷದ ನಾಯಕರನ್ನು ಪ್ರಶ್ನಿಸಿದರು...

ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರೋ. ರಂಗಪ್ಪ ಕಣಕ್ಕೆಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರೋ. ರಂಗಪ್ಪ ಕಣಕ್ಕೆ

ಕ್ಷೇತ್ರದ ಜನರು ಬುದ್ಧಿವಂತರು

ಕ್ಷೇತ್ರದ ಜನರು ಬುದ್ಧಿವಂತರು

ಸಭೆಯಲ್ಲಿ ಮಾತನಾಡಿದ ಹರೀಶ್ ಗೌಡ ಅವರು, 'ಕ್ಷೇತ್ರದ ಜನರು ಬುದ್ಧಿವಂತರು. ಯಾವುದು ಸರಿ?, ಯಾವುದು ತಪ್ಪು? ಎಂಬುದನ್ನು ಜನರು ಅವಲೋಕಿಸುತ್ತಾರೆ. ನಗರ ಜಿಲ್ಲಾಧ್ಯಕ್ಷ ಸ್ಥಾನದಿಂದ ನನ್ನನ್ನು ವಜಾಮಾಡಿದ್ದು ನಿಮಗೆ ತಿಳಿದಿದೆ' ಎಂದರು.

ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ

ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ

'ನನಗೆ ಯಾವುದೇ ಅಧಿಕಾರವಿಲ್ಲದಿದ್ದರೂ ಇಷ್ಟೊಂದು ಜನರು ಸಭೆಗೆ ಬಂದಿದ್ದೀರಿ, ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕ್ಷೇತ್ರದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ' ಎಂದು ಹರೀಶ್ ಗೌಡ ಹೇಳಿದರು.

ಜೆಡಿಎಸ್‌ಗೆ ಬಂಡಾಯದ ಬಿಸಿ

ಜೆಡಿಎಸ್‌ಗೆ ಬಂಡಾಯದ ಬಿಸಿ

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ 'ಕುಮಾರಪರ್ವ ಸಮಾವೇಶ' ನಡೆದಾಗ, ಕ್ಷೇತ್ರದ ಮುಂದಿನ ಚುನಾವಣೆ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಬಂಡಾಯ ಆರಂಭವಾಗಿದೆ. ಕೆ.ಹರೀಶ್ ಗೌಡ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಅಧ್ಯಕ್ಷ ಸ್ಥಾನದಿಂದ ವಜಾ

ಅಧ್ಯಕ್ಷ ಸ್ಥಾನದಿಂದ ವಜಾ

ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ ಕೆ.ಹರೀಶ್ ಗೌಡ ಅವರು ಬೆಂಬಲಿಗರ ಸಭೆ ನಡೆಸಿದ್ದರು. ಇದರಿಂದಾಗಿ ಎಚ್.ಡಿ.ದೇವೇಗೌಡರು ಹರೀಶ್ ಗೌಡ ಅವರನ್ನು ನಗರ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದರು. ಈ ಬೆಳವಣಿಗೆ ಬಳಿಕ ಮತ್ತೊಮ್ಮೆ ಸಭೆ ನಡೆಸಿದ್ದಾರೆ.

ಹರೀಶ್ ಗೌಡ ಬೆಂಬಲಿಗರು ಹೇಳುವುದೇನು?

ಹರೀಶ್ ಗೌಡ ಬೆಂಬಲಿಗರು ಹೇಳುವುದೇನು?

ಜೆಡಿಎಸ್ ನಾಯಕರಿಗೆ ಕೆ.ಹರೀಶ್ ಗೌಡ ಬೆಂಬಲಿಗರ ಪ್ರಶ್ನೆಗಳು.

English summary
What is my fault K.Harish Gowda asked JDS leaders. Harish Gowda dismissed from Mysuru city JDS president post. Harish Gowda is a ticket aspirant from Chamaraja constituency. Party announced Prof K.S.Rangappa as candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X