ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಾಣಿ ವಿಲಾಸ ಕೇಂದ್ರದಲ್ಲಿ ನಡೆಯುತ್ತಿದೆಯೇ ಅವ್ಯವಹಾರ?

By Yashaswini
|
Google Oneindia Kannada News

ಮೈಸೂರು, ಜುಲೈ 27 : ಮೈಸೂರು ನಗರದ ಪೈಪ್ಲೈನ್ ಗಳಲ್ಲಿ ನೀರು ಸೋರಿಕೆಯನ್ನು ತಡೆಗಟ್ಟಲು ಓರ್ವ ಗುತ್ತಿಗೆದಾರನಿಗೆ ಮೈಸೂರು ನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದಿಂದ ನಿಯಮ ಉಲ್ಲಂಘಿಸಿ 3.42 ಕೋಟಿ ಸಂದಾಯ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

201 ಬಾರಿ ಸಂಚಾರ ಉಲ್ಲಂಘಿಸಿದ ಮೈಸೂರಿನ ಭೂಪ!201 ಬಾರಿ ಸಂಚಾರ ಉಲ್ಲಂಘಿಸಿದ ಮೈಸೂರಿನ ಭೂಪ!

2012ರ ಆಗಸ್ಟ್ ತಿಂಗಳಿನಿಂದ 2015ರ ಅಕ್ಟೋಬರ್ 31ರವರೆಗೆ ಗುತ್ತಿಗೆದಾರನಿಗೆ 34250648 ರೂ.ಗಳನ್ನು ಪಾವತಿಸಲಾಗಿದೆ. ಮೈಸೂರಿನ ವರ್ತುಲ ರಸ್ತೆಯ ಅಕ್ಕಪಕ್ಕದ ಬಡಾವಣೆ ಹಾಗೂ ಮೂಡಾ ಬಡಾವಣೆಗಳ ಕೊಳವೆ ಮಾರ್ಗದಲ್ಲಿ ನೀರು ಸೋರಿಕೆಯನ್ನು ತಡೆಗಟ್ಟುವ ಕಾಮಗಾರಿಗಾಗಿ ಈ ಮೊತ್ತವನ್ನು ಪಾವತಿಸಲಾಗಿದ್ದು, ಕಾಮಗಾರಿ ಮಾಡದೇ ಈ ಮೊತ್ತದ ಹಣ ಪಡೆಯಲಾಗಿದೆ ಎಂಬ ದೂರುಗಳಿದೆ.

What is happening in the VaniVila Water Supply Center in Mysore?

1 ಲಕ್ಷ ರೂಗಳಿಗಿಂತ ಮೇಲ್ಪಟ್ಟ ಕಾಮಗಾರಿಗೆ ಟೆಂಡರ್ ಕರೆಯಬೇಕು ಎಂಬ ನಿಯಮವಿದ್ದರೂ ಇದನ್ನು ಉಲ್ಲಂಘಿಸಿ ಅಧಿಕಾರಿಗಳು ಮೈಸೂರಿನ ಧ್ಯಾನ್ ಅಸೋಸಿಯೇಟ್ಸ್ಸ ನ ಟಿ. ವಾಸುದೇವ ಬ ಗುತ್ತಿಗೆದಾರರಿಗೆ ಸತತವಾಗಿ 3 ವರುಷಗಳ ಕಾಲ ಕಾಮಗಾರಿಯನ್ನು ನಿಯಮ ಬಾಹಿರವಾಗಿ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದು, ಇದರಲ್ಲಿ ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು ನೇರ ಶಾಮೀಲಾಗಿದ್ದಾರೆ.

ಅದು ಮಾತ್ರವಲ್ಲದೆ 2016ರ ಪ್ರಿಲ್ 20 ರಿಂದ ಮೇ 19ರವರೆಗೆ ಮೈಸೂರು ನಗರದ ಕೊಳಗೆ ಮಾರ್ಗಗಳಲ್ಲಿ ನೀರು ಸೋರಿಕೆ ತಡೆಗಟ್ಟುವ ಕಾಮಗಾರಿಯ ಗುತ್ತಿಗೆಯನ್ನು ನಡೆಸಲು ತಿಂಗಳಿಗೆ 1922876 ರೂಗಳಿಗೆ ಇ - ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್ ಪಡೆದಿರುವ ವಾಸುದೇವ ಅವರಿಗೆ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರಿಯಿಂದ ಕೆಲಸದ ಆದೇಶವನ್ನು ನೀಡಲಾಗಿದೆ. ಕೇವಲ 1 ತಿಂಗಳಿಗೆ ಮಾತ್ರ ಕೆಲಸದ ದೇಶ ನೀಡಿರುವ ಅಧಿಕಾರಿಗಳು, ಈ ಕೆಲಸಕ್ಕೆ ಒಪ್ಪಂದವನ್ನು 365 ದಿನಗಳಿಗೆ ನಿಯಮ ಬಾಹಿರವಾಗಿ ಮಾಡಿಕೊಂಡಿದ್ದಾರೆ.

What is happening in the VaniVila Water Supply Center in Mysore?

ಗುತ್ತಿಗೆದಾರರಿಗೆ ಹಣ
ಅದೇ ರೀತಿ ಗುತ್ತಿಗೆದಾರನಿಗೆ ಹಣವನ್ನೂ ಸಹ ಪಾವತಿಸುತ್ತಿದ್ದಾರೆ. ಈ ಗುತ್ತಿಗೆಯನ್ನು ನೀಡಿದಾಗ ಅಧಿಕಾರಿಗಳು ನಗರ ಪಾಲಿಕೆ ಕೌನ್ಸಿಲ್ ಸಭೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮೈಸೂರು ನಗರದಲ್ಲಿ ನೀರು ಸೋರಿಕೆ ತಡೆಗಟ್ಟುವ ಕಾಮಗಾರಿಯನ್ನು ಎಷ್ಟು ಪ್ರಮಾಣದಲ್ಲಿ ಮಾಡುತ್ತದೋ ಅಷ್ಟು ಹಣವನ್ನು ಬಿಲ್ ಮಾಡಿ ಗುತ್ತಿಗೆದಾರನಿಗೆ ನೀಡಲಾಗುತ್ತದೆ ಎಂದು ಕೌನ್ಸಿಲ್ ಸಭೆಯ ಗಮನಕ್ಕೆ ತಂದು ಅನುಮೋದನೆ ಪಡೆದಿದ್ದ ಅಧಿಕಾರಿಗಳು, ಗುತ್ತಿಗೆದಾರ ಎಷ್ಟೇ ಕೆಲಸ ಮಾಡಿದ್ದರೂ ಆತನಿಗೆ ತಿಂಗಳಿಗೆ 1922876 ರೂ ನೀಡುವುದಾಗಿ ಕರಾರು ಮಾಡಿಕೊಂಡು ಕೌನ್ಸಿಲ್ ದಿಕ್ಕು ತಪ್ಪಿಸಿದ್ದಾರೆ. ದೂರುಗಳು ಬಂದ ವೇಳೆಯಲ್ಲಿ ಸಕಾಲಕ್ಕೆ ಸ್ಪಂದಿಸದಿದ್ದರೆ ಅಂತಹ ಪ್ರಕರಣಗಳಲ್ಲಿ ಪ್ರತಿ ದಿನಕ್ಕೆ 500 ರೂ ದಂಡ ಪಾವತಿಸಿ ಅದನ್ನು ಆಯಾ ತಿಂಗಳ ಬಿಲ್ ನಲ್ಲಿ ಕಡಿತಗೊಳಿಸಲಾಗುವುದು ಎಂದು ಕರಾರು ಪತ್ರದಲ್ಲಿ ತಿಳಿಸಲಾಗಿದೆಯಾದರೂ, ಈವರೆಗಿನ ಗುತ್ತಿಗೆದಾರನಿಗೆ ದಂಡ ವಿಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾದರೆ ಈತ ಎಲ್ಲಾ ದೂರುಗಳನ್ನು ಸಲಾಲದಲ್ಲಿ ಸರಿಪಡಿಸಿದ್ದಾನೆಯೇ ? ಎಂಬ ಪ್ರಶ್ನೆ ಉದ್ಭವಿಸಿದೆ.

ಅದು ಮಾತ್ರವಲ್ಲದೆ 2012ರಿಂದ ಈವರೆಗಿನ ಒಬ್ಬನೇ ಗುತ್ತಿಗೆದಾರನಿಗೆ ಈ ಕಾಮಗಾರಿಯನ್ನು ವಾಣಿವಿಲಾಸ ನೀರು ಸರಬರಾಜು ಕಾರ್ಯನಿರ್ವಹಿಸುತ್ತಿದೆ. ಅಂದರೆ ಮೈಸೂರು ನಗರದಿಂದಾಗಲೀ ಅಥವಾ ರಾಜ್ಯದ ಇತರೆ ಭಾಗದಿಂದ ಯಾವುದೇ ಗುತ್ತಿಗೆದಾರನೂ ನೀರು ಸೋರಿಕೆ ತಡೆಗಟ್ಟುವ ಕಾಮಗಾರಿಯನ್ನು ನಿರ್ವಹಿಸಲು ಅರ್ಹನಾಗಿಲ್ಲವೇ ? ಅಥವಾ ಯಾವ ಗುತ್ತಿಗೆದಾರನೂ ಈ ಕಾಮಗಾರಿಯ ಟೆಂಡರ್ ನಲ್ಲಿ ಭಾಗವಹಿಸಿರಲಿಲ್ಲವೇ? ಎಂಬ ಪ್ರಶ್ನೆಗಳು ಸಾರ್ವಜನಿಕವಲಯದಲ್ಲಿ ಕೇಳಿಬಂದಿದೆ.

What is happening in the VaniVila Water Supply Center in Mysore?

ಉನ್ನತ ಮಟ್ಟದ ತನಿಖೆ ನಡೆಯಲಿ
2012ರಿಂದ 2015ರ ಅಕ್ಟೋಬರ್ ತಿಂಗಳವರೆಗೆ ಟೆಂಡರ್ ಕರೆಯದೆಯೇ ಈ ಗುತ್ತಿಗೆದಾರನಿಗೆ ಕಾಮಗಾರಿ ನೀಡಲಾಗಿತ್ತು, ಆನಂತರ 2016ರ ಏಪ್ರಿಲ್ ತಿಂಗಳಿನಿಂದ ಕಾಮಗಾರಿ ಗುತ್ತಿಗೆ ಪಡೆಯಲು ಇ -ಪ್ರೋಕ್ಯೂರ್ ಮೆಂಟ್ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ನಾಲ್ವರು ಗುತ್ತಿಗೆದಾರರು ಭಾಗವಹಿಸಿದ್ದರು, ಕಡಿಮೆ ಮೊತ್ತವನ್ನು ದಾಖಲಿಸಿದ ಗುತ್ತಿಗೆದಾರನಿಗೆ ಕಾಮಗಾರಿಯನ್ನು ನೀಡಬೇಕೆಂಬುದು ನಿಯಮ.

ದೂರು ಬಂದ ತಕ್ಷಣ ಕೆಲಸ ಮಾಡುವಾಗ ಹಾಗೂ ಮುಗಿದ ನಂತರ ಡಿಜಿಟಲ್ ಕ್ಯಾಮರಾದಲ್ಲಿ ಫೋಟೋ ತೆಗೆದು ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ -ಮೇಲ್ ಗೆ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕು ಎಂಬ ಕರಾರಿನಲ್ಲಿ ತಿಳಿಸಿದೆಯಾದರೂ, ಇದು ಕಾರ್ಯಗತವಾಗಿಲ್ಲ ಎಂದು ಮೂಲಗಳು ತಿಳಿಸಿದೆ.
ಈ ಅವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದರೆ ಇದರ ಫಲಾನುಭವಿಗಳು ಯಾರು ? ಎಂಬುದು ಬೆಳಕಿಗೆ ಬರುತ್ತದೆ.ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸುವುದುಏ ಎಂಬುದನ್ನು ಕಾದು ನೋಡಬೇಕಿದೆ.

English summary
A case has been for allegedly paying Rs 3.42 crore to the contractor from the Mysore City Corporation's Water Supply and Water Supply Workshop to prevent water leakage in the pipelines of Mysore city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X