ಪ್ರತಾಪ್ ಸಿಂಹ ವರ್ತನೆ ಬಗ್ಗೆ ಸಿದ್ದರಾಮಯ್ಯ ನುಡಿಮುತ್ತುಗಳು!

Posted By:
Subscribe to Oneindia Kannada
   ಪ್ರತಾಪ್ ಸಿಂಹಾರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

   ಮೈಸೂರು, ಡಿಸೆಂಬರ್ 04: "ಸಂಸದ ಪ್ರತಾಪ್ ಸಿಂಹ ಅವರೇ, ವಾಹನ ಚಾಲನೆ ಮಾಡಿಕೊಂಡು ಬಂದು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳ ಮೇಲೆ ನುಗ್ಗಿಸಿರುವುದು ಅಪರಾಧ. ನೆಲದ ಕಾನೂನನ್ನು ಜನಪ್ರತಿನಿಧಿಗಳೇ ಉಲ್ಲಂಘನೆ ಮಾಡಿದರೆ ಹೇಗೆ?" ಇದು ಪ್ರತಾಪ್ ಸಿಂಹ ವರ್ತನೆಗೆ ಸಿದ್ದರಾಮಯ್ಯ ಪ್ರಶ್ನೆ!

   ಖಡಕ್ ಅಧಿಕಾರಿಗಳೆಂಬ ಸೋಗು ಬಿಡಿ: ಚನ್ನಣ್ಣನವರ್ ಗೆ ಸಿಂಹ ಟಾಂಗ್

   ಮೈಸೂರಿನ ಹುಣಸೂರಿನಲ್ಲಿ ಹನುಮ ಜಯಂತಿ ಸಂದರ್ಭದಲ್ಲಿ ನಿಷೇಧಾಜ್ಞೆ ಇದ್ದರೂ ಹಿಂದು ಸಂಘಟನೆ ಕಾರ್ಯಕರ್ತರು ಮೆರವಣಿಗೆ ಹೊರಟಾಗ, ತಡೆದ ಪೊಲೀಸರ ಮೇಲೆ ಆಕ್ರೋಶಗೊಂಡ ಸಂಸದ ಪ್ರತಾಪ್ ಸಿಂಹ ಬ್ಯಾರಿಕೇಡ್ ಗಳನ್ನು ಗುದ್ದಿ, ಕಾರು ಓಡಿಸಿ ಮತ್ತಷ್ಟು ವಿವಾದ ಸೃಷ್ಟಿಸಿದ್ದರು. ಈ ಸಂಬಂಧ ಅವರನ್ನು ಪೊಲೀಸರು ವಶಕ್ಕೆ ಪಡೆದು, ಕ್ರಿಮಿನಲ್ ಕೇಸ್ ದಾಖಲಿಸಿದ್ದರು.

   ಪ್ರತಾಪ್ ಸಿಂಹ ಬಿಡುಗಡೆ, ಡಿ 4.ರಂದು ಹುಣಸೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

   ಈ ವಿವಾದಕ್ಕೆ ಸಂಬಂಧಿಸಿದಂತೆ, ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಪೊಲೀಸರ ಮತ್ತು ಕರ್ನಾಟಕ ಸರ್ಕಾರದ ಕ್ರಮವನ್ನು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ನಂತರ ಪ್ರತಾಪ್ ಸಿಂಹ ವರ್ತನೆಯನ್ನು ಖಂಡಿಸಿದ್ದ ಸಿದ್ದರಾಮಯ್ಯ, ಸಾಲು ಸಾಲು ಟ್ವೀಟ್ ಗಳ ಮೂಲಕ, ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ನಿಮಗೆ ಕೊಟ್ಟವರ್ಯಾರು ಎಂದು ಪ್ರಶ್ನಿಸಿದ್ದಾರೆ.

   ಸಂಸದ ಪ್ರತಾಪ ಸಿಂಹ ವಿರುದ್ಧ ಕ್ರಿಮಿನಲ್ ಕೇಸ್, ಡಿ.4 ಹುಣಸೂರು ಬಂದ್

   ಪ್ರತಾಪ್ ಸಿಂಹ ಅವರ ವರ್ತನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದುರಿಸಿದ ನುಡಿಮುತ್ತುಗಳು ಇಲ್ಲಿವೆ...

   ನೆಲದ ಕಾನೂನು ಉಲ್ಲಂಘಿಸಿದ್ದು ಏಕೆ?

   "ಸಂಸದ ಪ್ರತಾಪ್ ಸಿಂಹ ಅವರೇ, ವಾಹನ ಚಾಲನೆ ಮಾಡಿಕೊಂಡು ಬಂದು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳ ಮೇಲೆ ನುಗ್ಗಿಸಿರುವುದು ಅಪರಾಧ. ನೆಲದ ಕಾನೂನನ್ನು ಜನಪ್ರತಿನಿಧಿಗಳೇ ಉಲ್ಲಂಘನೆ ಮಾಡಿದರೆ ಹೇಗೆ?"

   ಪೊಲೀಸರ ಜವಾಬ್ದಾರಿ ಏನು?

   ಪೊಲೀಸರ ಜವಾಬ್ದಾರಿ ಏನು?

   ನಾವು ಹನುಮ ಜಯಂತಿ, ಮೆರವಣಿಗೆ ಮಾಡಬೇಡಿ ಎಂದು ಹೇಳಿಲ್ಲ. ಅದಕ್ಕಾಗಿ ಮಾರ್ಗವನ್ನೂ ನಿಗದಿಪಡಿಸಲಾಗಿತ್ತು. ಆದರೆ, ನಾವು ಹೇಳಿದ ಮಾರ್ಗದಲ್ಲೇ ಮೆರವಣಿಗೆ ಹೋಗಬೇಕು ಎಂದು ಸಂಸದರು ಹೇಳುವುದಾದರೆ ಪೊಲೀಸರ ಜವಾಬ್ದಾರಿ ಏನು ?

   ಸಂಸದರೇ ಕಾನೂನು ಕೈಗೆತೆಗೆದುಕೊಳ್ಳಬೇಕೆ?

   ಸಂಸದರೇ ಕಾನೂನು ಕೈಗೆತೆಗೆದುಕೊಳ್ಳಬೇಕೆ?

   ಸಂಸದರಾಗಲಿ, ಶಾಸಕರಾಗಲಿ ತಾವೇ ಮಾಡಿದ ಕಾನೂನಿಗೆ ಗೌರವ ಕೊಡದಿದ್ದರೆ ಜನ ಸಾಮಾನ್ಯರು ಹೇಗೆ ಗೌರವ ಕೊಡುತ್ತಾರೆ. ಸಂಸದರೇ ಕಾನೂನು ಕೈಗೆ ತೆಗೆದುಕೊಂಡದ್ದು ನೋಡಿ ಜನರೂ ಅವರನ್ನೇ ಅನುಕರಿಸಿದರೆ ಕಾನೂನು ಸುವ್ಯವಸ್ಥೆ ಏನಾಗಬೇಕು ?

   ರಾಜಕೀಯಕ್ಕೆ ಬಳಸಿಕೊಳ್ಳಬೇಡಿ

   ರಾಜಕೀಯಕ್ಕೆ ಬಳಸಿಕೊಳ್ಳಬೇಡಿ

   ಹನುಮ ಜಯಂತಿ, ರಾಮನವಮಿಗಳನ್ನು ನಾವೂ ಆಚರಿಸುತ್ತೇವೆ. ಅವರೊಬ್ಬರೇ ಅಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಪರಸ್ಪರ ಎತ್ತಿ ಕಟ್ಟಿ ಸಾಮರಸ್ಯ ಹಾಳು ಮಾಡುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ.

   ಇದೇನಾ ಬಿಜೆಪಿ ಪಕ್ಷದ ಸಂಸ್ಕೃತಿ ?

   ಇದೇನಾ ಬಿಜೆಪಿ ಪಕ್ಷದ ಸಂಸ್ಕೃತಿ ?

   ಸಂಸದರೇ ವಾಹನ ಚಾಲನೆ ಮಾಡಿಕೊಂಡು ಬಂದು ಬ್ಯಾರಿಕೇಡ್ ಗಳ ಮೇಲೆ ನುಗ್ಗಿಸಿಕೊಂಡು ಹೋಗುವುದನ್ನು ಯಡಿಯೂರಪ್ಪ ಒಪ್ಪುವರೇ ? ಅದು ಕಾನೂನಿನ ಉಲ್ಲಂಘನೆ ಅಲ್ಲವೇ ?ತುಮಕೂರಿನಲ್ಲಿ ಬಿಟಿವಿ ವರದಿಗಾರರ ಮೇಲೆ ಬಿಜೆಪಿಯವರು ಹಲ್ಲೆ ಮಾಡಿದ್ದಾರೆ. ಇದೇನಾ ಆ ಪಕ್ಷದ ಸಂಸ್ಕೃತಿ ?

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Hanuma Jayanti parade dispute in Hunsur in Mysuru on Dec 3rd. Karnataka chief minister Siddaramaiah blames Mysuru Kodagu member of parliament, BJP's Pratap Simha, in twitter for his rude behaviour.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ