ಮೈಸೂರು ದಸರಾ ಗಜಪಡೆಗಳಿಗೆ ಭಾರದ ತಾಲೀಮು ಆರಂಭ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 12: ನಾಡ ಹಬ್ಬ ದಸರೆಯ ಆಕರ್ಷಕ ಜಂಬೂಸವಾರಿಯಲ್ಲಿ ಸಾಗುವ ದಸರಾ ಗಜಪಡೆಗಳ ಮೊದಲ ತಂಡಕ್ಕೆ ಭಾರ ಹೊರುವ ತಾಲೀಮು ಆರಂಭವಾಗಿದೆ.

ಇದುವರೆಗೆ ಅರ್ಜುನ ನೇತೃತ್ವದ ಬಲರಾಮ, ಅಭಿಮನ್ಯು, ಗಜೇಂದ್ರ, ಕಾವೇರಿ ಮತ್ತು ವಿಜಯ ಗಜಪಡೆಗಳು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಯಾವುದೇ ಭಾರವಿಲ್ಲದೆ ಹಾಗೆಯೇ ಸಾಗಿ ಬರುತ್ತಿದ್ದವಾದರೂ ಭಾನುವಾರದಿಂದ ಅರ್ಜುನನಿಗೆ ಮರಳಿನ ಮೂಟೆಗಳನ್ನು ಹೊರಿಸಿ ತಾಲೀಮು ಆರಂಭಿಸಲಾಗಿದೆ.[ದಸರಾ ಸಂಭ್ರಮಕ್ಕಾಗಿ ಅರಮನೆ ಪ್ರವೇಶಿಸಿದ ಎರಡನೇ ಗಜಪಡೆ]

Dasara-elephant

ಅಂಬಾರಿ ಹೊರುವ 'ಅರ್ಜುನ' ಸೇರಿದಂತೆ ಇತರೆ ಆನೆಗಳಿಗೆ ನಿಧಾನವಾಗಿ ಭಾರವನ್ನು ಹೆಚ್ಚಿಸುವ ಮೂಲಕ ಹೊರುವ ಅಭ್ಯಾಸ ಮಾಡಿಸಲಾಗುತ್ತಿದೆ. ಉಸುಕಿನ ಮೂಟೆಯನ್ನು ಬೆನ್ನಿಗೆ ಕಟ್ಟಿ ಬಳಿಕ ಅದರ ಮೇಲೆ ಮರಳಿನ ಮೂಟೆಗಳನ್ನು ಹೊರಿಸಿ, ಭಾರವನ್ನು ಅವುಗಳ ಅನುಭವಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ.

ಈ ಭಾರ ಕಟ್ಟಲು ಸುಮಾರು ಒಂದೂವರೆ ಗಂಟೆಯಾದರೂ ಬೇಕು. ಅಷ್ಟೇ ಅಲ್ಲ, ಚೆನ್ನಾಗಿ ತಿಳಿದಿರುವ ಮಾವುತರು ಮತ್ತು ಕಾವಾಡಿಗಳು ಬೇಕೇ ಬೇಕು. ಅನುಭವ ಇಲ್ಲದೇ ಹೋದರೆ ಇದನ್ನು ಕಟ್ಟುವುದು ಅಸಾಧ್ಯದ ಮಾತು.[ದಸರಾಕ್ಕೆ ಗೋಲ್ಡನ್ ಚಾರಿಯಟ್ ಸಂಚಾರ, ದರ ಪಟ್ಟಿ]

elephant practice

ಅರ್ಜುನ ಭಾನುವಾರ ಭಾರ ಹೊತ್ತು ನಡೆದರೆ, ಆತನ ಹಿಂದೆ ಇತರ ಆನೆಗಳು ಹೆಜ್ಜೆ ಹಾಕಿದವು. ರಾಜ ಮಾರ್ಗದಲ್ಲಿ ನಡೆದ ಗಜಪಡೆಗಳು ಬನ್ನಿಮಂಟಪದವರೆಗಿನ ಸುಮಾರು ಐದು ಕಿ.ಮೀ.ನಷ್ಟು ದೂರವನ್ನು ಕ್ರಮಿಸಿ ಬಂದವು. ಇನ್ನು ಮುಂದೆ ಗಜಪಡೆಗಳು ತಾಲೀಮು ಕಠಿಣವಾಗಲಿದ್ದು, ದಿನದಿಂದ ದಿನಕ್ಕೆ ಅಂಬಾರಿ ಹೊರುವ ಅರ್ಜುನನ ಬೆನ್ನಿನ ಮೇಲೆ ಭಾರವೂ ಹೆಚ್ಚಾಗಲಿದೆ.

ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಈ ನಮ್ದಾವನ್ನು ಗೋಣಿಚೀಲ ಮತ್ತು ಬಿಳಿ ಕಾಟನ್ ಬಟ್ಟೆಯಿಂದ ಹೊಲಿದಿರುತ್ತಾರೆ. ಇದರಲ್ಲಿ ತೆಂಗಿನ ನಾರು ತುಂಬಿಸಲಾಗಿರುತ್ತದೆ.[ದಸರಾ ಆನೆ ಮಾವುತ, ಕಾವಾಡಿಗರ ಆರೋಗ್ಯ ತಪಾಸಣೆ]

Dasara practice

ಅದರ ಮೆತ್ತನೆ ಹೊದಿಕೆ ಮೇಲೆ 'ಗಾದಿ' ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು 300 ಕೆ.ಜಿ ಇರುತ್ತದೆ. ಈ ದೊಡ್ಡ ಗೋಣಿ ಚೀಲದಲ್ಲಿ ತುಂಬಿರುವುದು ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲು. ಇದನ್ನು ಸುಮಾರು 80ರಿಂದ 90 ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ.

ಅದರ ಮೇಲೆ ಮತ್ತೊಂದು ಬಟ್ಟೆಯನ್ನು ಹೊದಿಸಲಾಗುತ್ತದೆ. ಅದಕ್ಕೆ ಇವರ ಭಾಷೆಯಲ್ಲಿ ಛಾಪು ಎನ್ನುತ್ತಾರೆ. ಇದು ಸಹ ತೆಂಗಿನ ನಾರನ್ನು ತುಂಬಿ, ಹತ್ತಿ ಬಟ್ಟೆಯಿಂದ ಹೊಲಿದದ್ದೇ ಆಗಿದೆ. ಚಾಪಿನ ಮೇಲೆ ತೊಟ್ಟಿಲ ರೀತಿಯ ದೊಡ್ಡ ವಸ್ತುವನ್ನು ಇಡಲಾಗುತ್ತದೆ. ಇದಕ್ಕೆ ಮಾವುತರು ಚಾರ್ಜಾಮಾ ಅನ್ನುತ್ತಾರೆ.[ಕವಿ ಚನ್ನವೀರ ಕಣವಿರವರಿಗೆ ಮೈಸೂರು ದಸರಾಗೆ ಆಹ್ವಾನ]

Palace

ಈ ಮೂರನ್ನೂ ಸೇರಿಸಿ ಆನೆಯ ಹಿಂಭಾಗದಿಂದ 'ದುಮುಚಿ' ಎಂಬ ರಬ್ಬರ್ ಮತ್ತು ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗ ಬಿಗಿಯಲಾಗುತ್ತದೆ. ಚಾರ್ಜಾಮಾದ ಮೇಲೆ ಸುಮಾರು 75 ರಿಂದ 80 ಕೆಜಿ. ತೂಕದ ಮರಳಿನ ಮೂಟೆಗಳನ್ನು ಹೊರಿಸಲಾಗುತ್ತದೆ. ಇದು ದಿನ ಕಳೆದಂತೆ ಹೆಚ್ಚುತ್ತಾ ಹೋಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
By putting weight, practice started for Dasara elephants in Mysuru. Weighted sand guunybags put on elephants, On a day to day practice weight of sand will increase. It is a method take one and half hour to knot sand filled gunnybags to elephants.
Please Wait while comments are loading...