ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಜೆಪಿ ಕ್ಯಾಶ್ ಲೆಸ್ ಪಕ್ಷ, ಮೈಸೂರಿನಲ್ಲಿ ಧೂಳೆಬ್ಬಿಸಿದ ಉಪ್ಪಿ

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಪ್ರೆಸ್ ಮೀಟ್ ನಲ್ಲಿ ಉಪ್ಪಿ ಹೇಗ್ ಮಾತಾಡ್ತಾರೆ ನೋಡಿ | Oneindia Kannada

ಮೈಸೂರು, ಡಿಸೆಂಬರ್ 1: ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವ ಪಕ್ಷ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ). ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದೇನೆ. ಇಚ್ಛೆಯುಳ್ಳವರು ನಮ್ಮೊಂದಿಗೆ ಕೈಜೋಡಿಸಲು ಮುಕ್ತವಾಗಿ ಆಹ್ವಾನಿಸುತ್ತಿದ್ದೇನೆ ಎಂದು ನಟ- ನಿರ್ದೇಶಕ ಉಪೇಂದ್ರ ಕರೆ ನೀಡಿದರು.

ಉಪೇಂದ್ರ ಪ್ರಜಾಕೀಯ ಪಕ್ಷದ ಬಗ್ಗೆ ಯದುವೀರ್ ಒಡೆಯರ್ ಹೇಳಿದ್ದೇನು?ಉಪೇಂದ್ರ ಪ್ರಜಾಕೀಯ ಪಕ್ಷದ ಬಗ್ಗೆ ಯದುವೀರ್ ಒಡೆಯರ್ ಹೇಳಿದ್ದೇನು?

ಪಕ್ಷ ಸ್ಥಾಪನೆಯಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ದೇಶದ ದುರ್ವ್ಯವಸ್ಥೆ ನೋಡಿಕೊಂಡು ಸುಮ್ಮನಿರಲಾರದೆ ರಾಜಕೀಯವನ್ನು ತಳಹದಿಯಿಂದಲೇ ಸಂಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ಕೆಪಿಜೆಪಿ ಸ್ಥಾಪಿಸಿದ್ದೇನೆ. ಇದಕ್ಕೆ ಜನ ಸೇವೆ ಮಾಡೋ ಇಚ್ಛೆಯುಳ್ಳವರು ಕೈ ಜೋಡಿಸಬಹುದು ಎಂದು ಆಹ್ವಾನ ನೀಡಿದರು.

ನಗ್ನ ಸತ್ಯ ಬಯಲಿಗೆಳೆಯಲು ಉಪೇಂದ್ರರಿಂದ ವೆಬ್ ಸೈಟ್ನಗ್ನ ಸತ್ಯ ಬಯಲಿಗೆಳೆಯಲು ಉಪೇಂದ್ರರಿಂದ ವೆಬ್ ಸೈಟ್

ದೇಶದ ಪ್ರಜೆಯಾಗಿ ನನ್ನ ಅಭಿಮತ, ವ್ಯವಸ್ಥೆಯೇ ಸರಿಯಿಲ್ಲ ಎಂದು ಭರವಸೆ ಕಳೆದುಕೊಂಡಿದ್ದೇ ನನ್ನಲ್ಲಿಯೂ ನಿರಾಶೆ ಮೂಡಿತ್ತು. ಆದರೆ ಭರವಸೆ ಕಳೆದುಕೊಳ್ಳಬಾರದೆಂದು ಈ ಪಕ್ಷ ಸ್ಥಾಪಿಸಿದ್ದೇನೆ. ಹಳ್ಳಿ ಹಳ್ಳಿಗಳ್ಳಿಯೂ ಅಭ್ಯರ್ಥಿಗಳು ಅತಿ ಉತ್ಸಾಹ ತೋರುತ್ತಿದ್ದಾರೆ. ಸಂಬಳಕ್ಕೆ ದುಡಿಯುವರು ಬನ್ನಿ, ಕೆಲಸ ಮಾಡುವರು ಬನ್ನಿ, ನಾಯಕರಾಗುವವರು ಬರುವುದು ಬೇಡ ಎಂದರು.

ಪ್ರಜಾಕೀಯದ ಬೆಳಕಿನ ದಾರಿಯಲ್ಲಿ ಉಪೇಂದ್ರ ಎಂಬ ಭರವಸೆಪ್ರಜಾಕೀಯದ ಬೆಳಕಿನ ದಾರಿಯಲ್ಲಿ ಉಪೇಂದ್ರ ಎಂಬ ಭರವಸೆ

ಯಾರು ಬೇಕಾದರೂ ಬರಬಹುದು. ರಾಜಕೀಯ ಕಷ್ಟ ಎನ್ನುವುದು ಮನಸ್ಸಿನಿಂದ ತೆಗೆದು ಹಾಕಿ. ಭರವಸೆ ಕಳೆದುಕೊಳ್ಳಬೇಡಿ. ಪ್ರಜ್ಞಾವಂತರು ಮೌನ ವಹಿಸಬೇಡಿ, ಯುವಜನರು ಮತದಾನ ಮಾಡಿ, 5 ವರ್ಷಕ್ಕೊಮ್ಮೆ ಸಿಗುವ ಅವಕಾಶವನ್ನು ಸದ್ವಿನಿಯೋಗ ಪಡಿಸಿಕೊಳ್ಳಿ. ರಾಜ್ಯ, ದೇಶದ ವಿಷಯದಲ್ಲಿ ಸಮಯ ಮೀಸಲಿರಿಸಿ, ತಾತ್ಸಾರ ಮಾಡಿದರೆ ಕೆಟ್ಟ ಸಮಾಜದೊಂದಿಗೆ ಬದುಕುವ ದೌರ್ಬಾಗ್ಯ ಬರುವುದು ಎಂದು ಎಚ್ಚರಿಸಿದರು.

ರಾಜಕೀಯದಲ್ಲಿ ಜಾತಿ ಹಾವಳಿ

ರಾಜಕೀಯದಲ್ಲಿ ಜಾತಿ ಹಾವಳಿ

ನಾನು ಮಾಡುವೆ ಎನ್ನುವುದು ರಾಜಕೀಯ, ಎಲ್ಲರೂ ಸೇರಿ ಮಾಡುವುದು ಪ್ರಜಾಕೀಯ. ನಾಯಕನಿಂದಲೇ ಎಲ್ಲ ಬದಲಿಸಲು ಸಾಧ್ಯವಿಲ್ಲ, ವ್ಯವಸ್ಥೆಯಲ್ಲಿರುವ ಡೊಂಕನ್ನು ತಿದ್ದುವರು ಬೇಕು. ಜನ ಸಾಮಾನ್ಯರು ಜಾತಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜಕೀಯದಲ್ಲಿ ಜಾತಿ ಹಾವಳಿ ಹೆಚ್ಚಿದೆ. ರಾಜಕಾರಣಿಗಳು ಮಾತ್ರ ಜಾತಿಯಾಧಾರಿತವಾಗಿ ಆಡಳಿತ ನಡೆಸುವರು ಎಂದು ಕುಹಕವಾಡಿದರು.

ನಮ್ಮದು ಕ್ಯಾಶ್ ಲೆಸ್ ಪಕ್ಷ

ನಮ್ಮದು ಕ್ಯಾಶ್ ಲೆಸ್ ಪಕ್ಷ

ಜಾತಿ, ಹಣ ಬಲದಿಂದಲೇ ರಾಜಕೀಯ ಮಾಡಬಹುದು ಎಂಬ ಪರಿಕಲ್ಪನೆ ತಪ್ಪು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಗಳ ಪೂರಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸಿ, ಸಮಾಜವನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕಿದೆ. ಹಾಗಾಗಿ ಕೆಪಿಜೆಪಿ ಪಕ್ಷವನ್ನು ಹುಟ್ಟು ಹಾಕಲಾಗಿದೆ. ನಮ್ಮದು ಕ್ಯಾಶ್ ಲೆಸ್ ಪಕ್ಷ ಎಂದರು.

ಬಯ್ಯುವುದರಲ್ಲಿ ಕಾಲ ಕಳೆಯುವವರು ಬೇಡ

ಬಯ್ಯುವುದರಲ್ಲಿ ಕಾಲ ಕಳೆಯುವವರು ಬೇಡ

ಇಲ್ಲಿ ಬರುವವರು ಮೊದಲು ನೇರವಾಗಿ ಜನರ ಮಧ್ಯೆ ಕೆಲಸ ಮಾಡಿರುವ ಅನುಭವವನ್ನು ಹೊಂದಿರಬೇಕು. ಜನರ ಕಷ್ಟಗಳಿಗೆ ಸ್ಪಂದನೆ, ಕ್ಷೇತ್ರಗಳ ಸಮಸ್ಯೆ, ಸಂವಿಧಾನ ಆಶಯಗಳ ಅನುಷ್ಠಾನ ಸೇರಿದಂತೆ ಎಲ್ಲ್ ವಿಷಯಗಳ ಬಗ್ಗೆ ಅರಿವಿರಬೇಕು. ಸತ್ಯವನ್ನೇ ಪ್ರತಿಪಾದಿಸುವ ಮೌಲ್ಯಾಧಾರಿತ ಮನಸ್ಥಿತಿಯನ್ನು ಹೊಂದಿರುವಂತಹ ಸೃಜನಶೀಲ ವ್ಯಕ್ತಿಗಳು ರಾಜಕೀಯಕ್ಕೆ ಬರುವುದು ಅವಶ್ಯಕವಾಗಿದೆ. ಪರಸ್ಪರ ಟೀಕೆ ಹಾಗೂ ಬಯ್ಯುವುದರಲ್ಲಿ ಕಾಲ ಕಳೆಯದೆ ಪಾರದರ್ಶಕವಾಗಿ ಕೆಲಸ ಮಾಡುವವರಿಗೆ ಸ್ವಾಗತವಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣ, ಟಿವಿ ಮಾಧ್ಯಮ ಮೂಲಕ ಪ್ರಚಾರ

ಸಾಮಾಜಿಕ ಜಾಲತಾಣ, ಟಿವಿ ಮಾಧ್ಯಮ ಮೂಲಕ ಪ್ರಚಾರ

ಇತ್ತೀಚಿನ ದಿನಗಳಲ್ಲಿ ಬಹಿರಂಗ ಸಭೆಗಳಿಗೂ ಹೆಚ್ಚಿನ ಹಣ ನೀಡಿ, ಸಾವಿರಾರು ಮಂದಿಯನ್ನು ಸೇರಿಸಿ ಭಾಷಣ ಮಾಡುವ ಕಾಲ ಬದಲಾಗಿದೆ. ದೇಶ- ವಿದೇಶಗಳಲ್ಲಿ ಸಾಮಾಜಿಕ ಜಾಲ ತಾಣ, ಟಿವಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಇದಕ್ಕೆ ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಇಂತಹ ವ್ಯವಸ್ಥೆ ನಮ್ಮಲ್ಲಿಯೂ ಮಾಡಬಹುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಹಾರರ್, ಸಸ್ಪೆನ್ಸ್ ಸಿನಿಮಾ ಮಾಡ್ತಿಲ್ಲ

ಹಾರರ್, ಸಸ್ಪೆನ್ಸ್ ಸಿನಿಮಾ ಮಾಡ್ತಿಲ್ಲ

ವಿಚಾರವಂತ, ಸಮಾನ ಮನಸ್ಥಿತಿಯುಳ್ಳ, ಜನರ ಸಮಸ್ಯೆಗೆ ಸದಾ ಮಿಡಿಯುವಂತಹ ವ್ಯಕ್ತಿಗಳು ಕೆಪಿಜೆಪಿಗೆ ಸೇರಬಹುದು. ರಾಜಕೀಯದಲ್ಲಿ ಏನಾದರೂ ಬದಲಾವಣೆ ತರಬೇಕೆಂಬ ಆಶಯದೊಂದಿಗೆ ಈ ಕೆಲಸಕ್ಕೆ ಕೈ ಹಾಕಿದ್ದೇನೆ. ನಾನು ಹಾರರ್ ಹಾಗೂ ಸಸ್ಪೆನ್ಸ್ ಸಿನಿಮಾ ಮಾಡುತ್ತಿಲ್ಲ, ಇದು ಸತ್ಯವನ್ನೇ ಪ್ರತಿಪಾದಿಸುವ ಪಕ್ಷ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

English summary
We need labourers and not leaders, commoners with a service oriented mindset people can join Karnataka Pragnavatha Janata Party (KPJP), said by Kannada Actor Upendra in mysuru on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X