ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದ ಕಸಕ್ಕೆ ಕರ್ನಾಟಕದ ಗಡಿಯೇ ತೊಟ್ಟಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 08: ಕೇರಳದ ತ್ಯಾಜ್ಯಕ್ಕೆ ಕರ್ನಾಟಕ ಕಸದ ತೊಟ್ಟಿಯಾಗುತ್ತಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಕಾರಣ ಕೇರಳದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ತಂದು ಗಡಿಭಾಗಗಳಲ್ಲಿ ಸುರಿಯಲಾಗುತ್ತಿದೆ.

ಕೆಲವರ್ಷಗಳ ಹಿಂದೆ ಕೊಡಗಿನ ಗಡಿಭಾಗದ ಅರಣ್ಯದಲ್ಲಿ ಇಂತಹ ಪ್ರಕರಣ ನಡೆದಿತ್ತು. ಇದೀಗ ಆಸ್ಪತ್ರೆಯಲ್ಲಿ ಬಳಸುವ ಸಿರಂಜ್ ಗಳು ಮತ್ತು ಔಷಧೀಯ ಅನುಪಯುಕ್ತ ಪದಾರ್ಥಗಳು ಮತ್ತು ದನಗಳ ಮೂಳೆ, ತ್ಯಾಜ್ಯಗಳನ್ನು ಕೇರಳದಿಂದ ಎಚ್.ಡಿ.ಕೋಟೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸುರಿದು ಪರಿಸರವನ್ನು ಹಾಳು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಎಚ್.ಡಿ.ಕೋಟೆ ತಾಲೂಕಿನ ಗಡಿಭಾಗ ಬಾವಲಿ ಗ್ರಾಮದಲ್ಲಿ ಪಕ್ಕದ ಕೇರಳ ರಾಜ್ಯದಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ವಸ್ತುಗಳನ್ನು ತುಂಬಿಕೊಂಡು ಮೈಸೂರಿಗೆ ಬರುತ್ತಿದ್ದ ಎರಡು ಲಾರಿಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಅಧಿಕಾರಿಗಳು ಮತ್ತು ಬೀಚನಹಳ್ಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ಚಾಲಕರಿಬ್ಬರನ್ನು ಬಂಧಿಸಿದ್ದಾರೆ.

Waste from Kerala being dumped in Karnataka-Kerala border

ಮೈಸೂರಿನ ಮಹಮ್ಮದ್ ಸಮೀರ್ ಮತ್ತು ತಮಿಳುನಾಡು ಮೂಲದ ಅಶೋಕ್ ಕುಮಾರ್ ಬಂಧಿತರಾಗಿದ್ದಾರೆ. ಮೈಸೂರಿನ ಮಹಮ್ಮದ್ ಸಮೀರ್ ಮತ್ತು ತಮಿಳುನಾಡು ಮೂಲದ ಅಶೋಕ್ ಕುಮಾರ್, ಇಬ್ಬರೂ ಸ್ವಂತ ಲಾರಿ ಹೊಂದಿದ್ದು, ಕೋಲಾರ ಜಿಲ್ಲೆಯ ಕೋಲಾರ ಮಿಲಿಟರಿ ಕ್ಯಾಂಟೀನ್ ನಿಂದ ಮದ್ಯವನ್ನು ಕೇರಳ ರಾಜ್ಯದ ಕೊಚ್ಚಿನ್ ಗೆ ಸಾಗಾಣೆ ಮಾಡಿ, ಅಲ್ಲಿಂದ ಮರಳಿ ಬರುವಾಗ ಲಾರಿಯಲ್ಲಿ ತ್ಯಾಜ್ಯವನ್ನು ತುಂಬಿಸಿಕೊಂಡು ಬಂದು ಅರಣ್ಯ ವ್ಯಾಪ್ತಿ ಗ್ರಾಮಗಳಲ್ಲಿ ಸುರಿಯಲು ಮುಂದಾಗಿದ್ದರು. ಆದರೆ ಅದಕ್ಕೆ ಮುನ್ನವೇ ಪೊಲೀಸರಿಗೆ ಸಿಕ್ಕಿಬಿದ್ದಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಕೇರಳದಿಂದ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸುವ ಬೃಹತ್ ಜಾಲವೇ ಕಾರ್ಯನಿರ್ವಹಿಸುತ್ತಿರುವ ಶಂಕೆಯಿದೆ. ಅರಣ್ಯ ವ್ಯಾಪ್ತಿಯಲ್ಲಿ ಈಗಾಲೂ ಅಲ್ಲಲ್ಲಿ ತ್ಯಾಜ್ಯ ತುಂಬಿದ ಚೀಲಗಳು ಕಂಡು ಬರುತ್ತಿದ್ದು ಕೇರಳಿಗರು ಕರ್ನಾಟಕವನ್ನು ಕಸದ ತೊಟ್ಟಿ ಮಾಡಿಕೊಂಡಿದ್ದಾರಾ ಎಂಬ ಸಂಶಯ ಮೂಡುತ್ತಿದೆ. ಗಡಿಯಲ್ಲಿ ತಪಾಸಣೆ ಮಾಡುವ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಿದೆ.

English summary
Wastes from slaughterhouses and other places from Kerala is being illegally dumped in H.D Kote taluk of Mysuru and all over Karnataka-Kerala border highway. Karnataka State Pollution Control Board (KSPCB) is yet to act on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X