ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆಗೆ ಹೊಸ ವಿವಿಪ್ಯಾಟ್ ಮತ ಯಂತ್ರಗಳು

ಉಪಚುನಾವಣೆಯಲ್ಲಿ ಮತದಾನದ ಸಂದರ್ಭದಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಯುವುದಕ್ಕೆ ಮತ್ತು ಪಾರದರ್ಶಕ ಚುನಾವಣೆ ನಡೆಸುವುದಕ್ಕಾಗಿ ವಿವಿಪಿಎಟಿ ಯಂತ್ರಗಳನ್ನು ಬಳಸಿಕೊಳ್ಳಲಾಗುವುದೆಂದು ಚುನಾವಣಾ ಆಯೋಗ ಹೇಳಿದೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 23 : ಏಪ್ರಿಲ್ 9, ಭಾನುವಾರ ನಡೆಯಲಿರುವ ಬಹುನಿರೀಕ್ಷಿತ ಗುಂಡ್ಲುಪೇಟೆ- ನಂಜನಗೂಡು ಉಪಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯುವುದಕ್ಕೆ ಮಾರ್ಚ್ 24 ಕೊನೆಯ ದಿನವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಮತ ಖಾತರಿಪಡಿಸಿಕೊಳ್ಳುವ ಸಲುವಾಗಿ ವಿವಿಪ್ಯಾಟ್ (VVPAT) ಎಂಬ ನೂತನ ಮತದಾನ ಯಂತ್ರದ ಬಳಸಬೇಕೆಂದು ಚುನಾವಣಾ ಆಯೋಗ ನಿರ್ಧರಿಸಿದೆ.

ಚುನಾವಣಾ ಅಕ್ರಮಗಳನ್ನು ತಡೆಯುವುದಕ್ಕೆ ಮತ್ತು ಪಾರದರ್ಶಕ ಚುನಾವಣೆ ನಡೆಸುವುದಕ್ಕಾಗಿ ಈ ಯಂತ್ರಗಳನ್ನು ಬಳಸಿಕೊಳ್ಳಲಾಗುವುದೆಂದು ಚುನಾವಣಾ ಆಯೋಗ ಹೇಳಿದೆ. ಏಪ್ರಿಲ್ 13 ಗುರುವಾರದಂದು ಹೊರಬೀಳುವ ಫಲಿತಾಂಶಗಳು ನಾಲ್ಕು ದಿನಗಳ ಕಾಲ ಇದೇ ಮತಪೆಟ್ಟಿಗೆಯಲ್ಲಿ ಭದ್ರವಾಗಿರಲಿವೆ.[ಸಿದ್ದರಾಮಯ್ಯನವರೇ ನಿಮ್ಮನ್ನು ಪರ್ಮನೆಂಟಾಗಿ ಜೈಲಿಗೆ ಕಳಿಸ್ತೀನಿ, ಬಿಎಸ್ವೈ]

ಏನಿದು ವಿವಿಪಿಎಟಿ…?

ಏನಿದು ವಿವಿಪಿಎಟಿ…?

ಮತದಾರ ತಾನು ಹಾಕಿದ ಮತವನ್ನು ಎಲೆಕ್ಟ್ರಾನಿಕ್ ಯಂತ್ರದಲ್ಲಿ ಖಾತರಿಸಿಪಡಿಸಿಕೊಳ್ಳಲು ಹಾಗೂ ಅಕ್ರಮಗಳನ್ನು ತಡೆಗಟ್ಟಲು ಈ ಬಾರಿ ಈ ಸಾಧನವನ್ನು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಾರಿಗೆ ತರಲು ಚುನಾವಣಾ ಆಯೋಗ ಸಜ್ಜಾಗಿದೆ. ಹೌದು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಎಂಬ ಯಂತ್ರವನ್ನು 2 ಉಪಚುನಾವಣಾ ಕ್ಷೇತ್ರದಲ್ಲಿ ಬಳಸುವಂತೆ ಅಧಿಕಾರಿಗೆ ಸೂಚನೆ ನೀಡಲಾಗಿದೆ.[ಉಪಚುನಾವಣೆ: ಎರಡು ನಾಮಪತ್ರ ತಿರಸ್ಕೃತ]

ಉ.ಪ್ರ. ಚುನಾವಣೆಯಲ್ಲಿ ಬಳಕೆಯಾದ ಯಂತ್ರ

ಉ.ಪ್ರ. ಚುನಾವಣೆಯಲ್ಲಿ ಬಳಕೆಯಾದ ಯಂತ್ರ

ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಳಕೆಯಾಗಿದ್ದ ಈ ಯಂತ್ರಗಳು ಇನ್ನು ಐದಾರು ದಿನದಲ್ಲಿ ಮೈಸೂರಿಗೆ ಬಂದು ತಲುಪುವ ಸಾಧ್ಯತೆಗಳಿವೆ. ಈ ಹಿಂದೆ ಈ ಸಾಧನವನ್ನು ರಾಜ್ಯದ ಬಳ್ಳಾರಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಳಕೆ ಮಾಡಲಾಗಿತ್ತು.[ನಂಜನಗೂಡು ಉಪಚುನಾವಣೆ: ದಾಖಲಾಯ್ತು 14 ನಾಮಪತ್ರ]

ಈ ಯಂತ್ರ ಕೆಲಸ ನಿರ್ವಹಿಸೋದು ಹೇಗೆ..?

ಈ ಯಂತ್ರ ಕೆಲಸ ನಿರ್ವಹಿಸೋದು ಹೇಗೆ..?

ಇದು ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ. ಮತದಾರ ತಾನು ಮತ ಚಲಾವಣೆ ಮಾಡಿದ ಅಭ್ಯರ್ಥಿಯ ಕುರಿತಾದ ಗೊಂದಲವನ್ನು ನಿವಾರಿಸುವ ಸಾಧನ ಇದಾಗಿದೆ. ಅಂದರೆ ಮತ ಚಲಾವಣೆ ಬಳಿಕ ವಿವಿ ಪ್ಯಾಟ್ನಲ್ಲಿ 7 ಸೆಕೆಂಡ್ ಗಳ ಕಾಲ ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ಗೋಚರಿಸುವ ಕೆಲಸವನ್ನು ಇದು ಮಾಡುತ್ತದೆ.

ದೋಷ ಉಂಟಾದರೆ..?

ದೋಷ ಉಂಟಾದರೆ..?

ಅಷ್ಟೇ ಅಲ್ಲದೇ ಮತ ಯಂತ್ರದಲ್ಲಿ ದೋಷವುಂಟಾದಲ್ಲಿ ಮತ ಎಣಿಕೆ ಯಂತ್ರ ಅರ್ಥಾತ್ ವಿವಿಪಿಎಟಿ ಬಾಕ್ಸ್ ನಲ್ಲಿರುವ ದಾಖಲಾದ ಮತಗಳನ್ನು ಚುನಾವಣಾಧಿಕಾರಿ ಅನುಮತಿಯೊಂದಿಗೆ ಸಿಬ್ಬಂದಿ ತಕ್ಷಣಕ್ಕೆಎಣಿಕೆ ಮಾಡಬಹುದಾಗಿದೆ.

ಚುನಾವಣಾಧಿಕಾರಿಗಳಿಂದ ತರಬೇತಿ:

ಚುನಾವಣಾಧಿಕಾರಿಗಳಿಂದ ತರಬೇತಿ:

ಈ ಪದ್ಧತಿ ಹೊಸತಾದ್ದರಿಂದ ಮತದಾರ ಪ್ರಭುವಿಗೆ ತರಬೇತಿ ಕೊಡಲು ಚುನಾವಣಾ ಆಯೋಗ ಹಾಗೂ ಅಧಿಕಾರಿಗಳು ಸಜ್ಜಾಗಿದ್ದಾರೆ.
ಈ ಹಿನ್ನೆಲೆ ಇಬ್ಬರು ಅಧಿಕಾರಿಗಳಿಗೆ ಈಗಾಗಲೇ ನವದೆಹಲಿಯಲ್ಲಿ ವಿವಿಪಿಎಟಿ ಮತಯಂತ್ರದ ಕಾರ್ಯವೈಖರಿ ಕುರಿತಾಗಿ ತರಬೇತಿಯನ್ನು ಸಹ ನೀಡಲಾಗಿರುವುದು ವಿಶೇಷ. ಆ ಇಬ್ಬರು ಇಲ್ಲಿನ ಮತದಾರರಿಗೆ ಮತಯಂತ್ರದ ಬಳಕೆಯ ಕುರಿತಾಗಿ ಮಾಹಿತಿ ನೀಡಲಿದ್ದಾರೆ.

ಒಟ್ಟು 236 ಮತಗಟ್ಟೆಗಳಿಗೂ ಯಂತ್ರಗಳ ಬಳಕೆ :

ಒಟ್ಟು 236 ಮತಗಟ್ಟೆಗಳಿಗೂ ಯಂತ್ರಗಳ ಬಳಕೆ :

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿರುವ 236 ಮತಗಟ್ಟಿಗಳಿಗೂ ವಿವಿಪಿಎಟಿ ಯಂತ್ರಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು ಈ ನಿಟ್ಟಿನಲ್ಲಿ ನಾವೆಲ್ಲರೂ ಸರ್ವ ಸನ್ನದ್ಧರಾಗಿರುವುರುವುದಾಗಿ ಅಧಿಕಾರಿಗಳು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಉಪಚುನಾವಣೆಗಾಗಿಯೇ ಈಗಾಗಲೇ 355 ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ ಯಂತ್ರಗಳನ್ನು ತರಿಸುತ್ತಿದ್ದು, ಉಳಿದವುಗಳನ್ನು ಮೀಸಲಾಗಿರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲಿ ಲಭ್ಯವಿಲ್ಲ ಈ ಸಾಧನ :

ಕರ್ನಾಟಕದಲ್ಲಿ ಲಭ್ಯವಿಲ್ಲ ಈ ಸಾಧನ :

ರಾಜ್ಯದಲ್ಲಿ ಈ ಸಾಧನ ಸದ್ಯ ಎಲ್ಲಯೂ ಲಭ್ಯವಿಲ್ಲ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಹಯೋಗದೊಂದಿಗೆ ಸಿದ್ಧಗೊಂಡ ಸಾಧನವನ್ನು ನಮ್ಮ ರಾಜ್ಯದಲ್ಲಿ ಅವಶ್ಯವಿದ್ದಾಗ ಮಾತ್ರವೇ ಚುನವಣಾ ಆಯೋಗದ ಒಪ್ಪಂದದ ಮೇರೆಗೆ ಹೊರ ರಾಜ್ಯದಿಂದ ತರಿಸಿಕೊಳ್ಳಲಾಗುತ್ತದೆ.

English summary
Election commission has decided to bring VVPAT machines for Nanjangud and Gundlupet by election, which will be scheduled on April 9th. To avoid illegality in the by election EC took such decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X