ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ ಎಫ್ ಯೋಧನ ವಿಡಿಯೋ ಮಾಹಿತಿ ಇಲ್ಲ: ವಿಕೆ ಸಿಂಗ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 10: ಸೇನೆಯಲ್ಲಿ ಊಟ ಎನ್ನುವುದು ಬಹಳ ಮುಖ್ಯ ವಿಚಾರ. ಅಧಿಕಾರಿಗಳು ಏನು ತಿನ್ನುತ್ತಾರೋ ಅದನ್ನೇ ಸೈನಿಕರಿಗೂ ನೀಡುತ್ತಾರೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದರು. ಬಿಎಸ್‌ ಎಫ್ ಯೋಧರೊಬ್ಬರು ಮಾಡಿದ ಕಳಪೆ ಆಹಾರ ವಿತರಣೆ ಆರೋಪವನ್ನು ಮಂಗಳವಾರ ತಳ್ಳಿ ಹಾಕಿದರು.

ಕಳಪೆ ಊಟ ನೀಡುತ್ತಿರುವ ಬಗ್ಗೆ ಬಿಎಸ್‌ಎಫ್ ಯೋಧ ವಿಡಿಯೋ ಅಪ್‌ಲೋಡ್ ಮಾಡಿರುವ ಪ್ರಕರಣಕ್ಕೆಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯದ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಅಂತಹ ಘಟನೆ ನಡೆದಿದ್ದರೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಸದ್ಯ ಹರಿದಾಡುತ್ತಿರುವ ದೃಶ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.[ಬಿಎಸ್ಎಫ್ ಯೋಧನ ಬೆನ್ನಿಗೆ ನಿಂತ ಕ್ರೀಡಾ ತಾರೆಗಳು]

VK Singh has no information about bsf soldier allegation

ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಕಡೆ ಬಿಜೆಪಿ ಉತ್ತಮ ಸ್ಥಿತಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ಏನಾಗಲಿದೆ ಎನ್ನುವುದನ್ನು ಫಲಿತಾಂಶ ಬಂದ ಮೇಲೆ ಹೇಳುತ್ತೇನೆ. ಚುನಾವಣೆಗೆ ಸಮಯ ಇರುವುದರಿಂದ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.

ಪ್ರವಾಸಿ ಭಾರತೀಯ ದಿವಸ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ‌. ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಬೆಂಗಳೂರಿನಲ್ಲಿ ಆಯೋಜನೆ ಉತ್ತಮವಾಗಿತ್ತು ಎಂದರು.[ಬಿಎಸ್ಎಫ್ ಪ್ರಕರಣ: ಮೋದಿ ವಿರುದ್ಧ ಪಾಕ್ ಮಾಧ್ಯಮಗಳ ಪ್ರಹಾರ]

ನಂಜುಂಡೇಶ್ವರನ ದರುಶನ ಪಡೆದ ವಿ.ಕೆ.ಸಿಂಗ್ ದಂಪತಿ
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ವಿ.ಕೆ.ಸಿಂಗ್ ಭೇಟಿ ನೀಡಿದರು. ಪತ್ನಿ ಭಾರತಿ ಸಿಂಗ್ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಧಾನ್ಯಗಳನ್ನು ನೀಡುವ ಮೂಲಕ ನವಗ್ರಹ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಅರ್ಚಕರು ದಂಪತಿಗೆ ಪ್ರಸಾದ ವಿತರಿಸಿ, ಆಶೀರ್ವದಿಸಿದರು.[ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಯೋಧನ ವಿರುದ್ಧ ಬಿಎಸ್ಎಫ್ ಕಿಡಿ]

ಇನ್ನು ಇದೇ ವೇಳೆ ಮೈಸೂರಿನ ಚಾಮುಂಡಿ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯನ್ನು ಭೇಟಿಯಾದರು.

English summary
Central minister VK Singh said, he has no information about BSF soldier allegation on low quality food supply on Tuesday in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X