ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್‌ನಲ್ಲಿ ಬನ್ನಿ

|
Google Oneindia Kannada News

ಮೈಸೂರು, ಆಗಸ್ಟ್ 26 : ದೇಶದ ಐಷಾರಾಮಿ ರೈಲು ಸೇವೆ 'ಮಹಾರಾಜಾ ಗೋಲ್ಡನ್ ಚಾರಿಯಟ್' ಮೂಲಕ ಜನರು ಈ ಬಾರಿಯ ದಸರಾಕ್ಕೆ ಆಗಮಿಸಬಹುದು. ಪ್ರವಾಸೋದ್ಯಮ ಇಲಾಖೆ ದಸರಾ ಸಮಯದಲ್ಲಿ ಬೆಂಗಳೂರು-ಮೈಸೂರು ನಡುವೆ ಗೋಲ್ಡನ್ ಚಾರಿಯೇಟ್ ರೈಲು ಸಂಚಾರ ನಡೆಸಲು ಉದ್ದೇಶಿಸಿದೆ.

ಸುವರ್ಣರಥ (ಗೋಲ್ಡನ್ ಚಾರಿಯಟ್) ರೈಲು ಸೇವೆಯನ್ನು ಜನಪ್ರಿಯಗೊಳಿಸಲು ಮೈಸೂರು ದಸರಾ ಸಂದರ್ಭದಲ್ಲಿ ಅದನ್ನು ಓಡಿಸಲು ನಿರ್ಧರಿಸಲಾಗಿದೆ. ಕೆಎಸ್‌ಟಿಡಿಸಿ ಈ ಕುರಿತು ಯೋಜನೆ ಸಿದ್ಧಪಡಿಸುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಈ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.[ಸುವರ್ಣರಥ ವೆಬ್ ಸೈಟ್]

Visit Mysuru like a royal guest on Golden Chariot

ಅಕ್ಟೋಬರ್ 1 ರಿಂದ 11ರ ತನಕ 2016ನೇ ಸಾಲಿನ ಮೈಸೂರು ದಸರಾ ನಡೆಯಲಿದೆ. ಬೆಂಗಳೂರು-ಮೈಸೂರು ನಡುವೆ ಈ ಸಂದರ್ಭದಲ್ಲಿ ಸುವರ್ಣರಥ ಸಂಚಾರ ನಡೆಸಲಿದೆ. ಉಭಯ ನಗರಗಳ ನಡುವಿನ ರೈಲು ಜನರಿಂದ ತುಂಬಿ ಹೋಗಿರುತ್ತದೆ. ಆದ್ದರಿಂದ, ಸುವರ್ಣರಥ ಓಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.[ದಸರಾ ವಿಶೇಷ: ಮಾವುತರೆಂಬ ಗಜಪಡೆಯ ರಿಂಗ್ ಮಾಸ್ಟರ್]

ಬೆಂಗಳೂರು-ಮೈಸೂರು ನಡುವಿನ ಟಿಕೆಟ್ ದರಗಳು ಇನ್ನೂ ಅಂತಿಮಗೊಂಡಿಲ್ಲ. ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಆಗಮಿಸುವವರಿಗೆ ಜಂಬೂ ಸವಾರಿ ನೋಡಲು ಗೋಲ್ಡ್ ಪಾಸ್ ನೀಡಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಅವಕಾಶ ನೀಡಲಾಗುತ್ತದೆ.[ಮೈಸೂರು ದಸರಾ ಲಾಂಛನ, ವೆಬ್ ಸೈಟ್ ಅನಾವರಣ]

ಗೋಲ್ಡನ್ ಚಾರಿಯಟ್ ಸಂಚಾರದ ಕುರಿತ ಪ್ರಚಾರ ಆಗಸ್ಟ್ ಅಂತ್ಯದಿಂದ ಆರಂಭವಾಗಲಿದೆ. ಸಂಚಾರದ ದರ 30,000 ರೂ. ನಿಗದಿಪಡಿಸುವ ಸಾಧ್ಯತೆ ಇದೆ.

English summary
The Karnataka State Tourism Development Corporation (KSTDC) will launch the Dasara special package train tour on the Golden Chariot from October 1, 2016. Tourists can travel from Bengaluru to Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X