ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಮಾನವ ರೈಲು ಅಶೋಕಪುರಂ ರೈಲ್ವೆನಿಲ್ದಾಣದವರೆಗೆ ವಿಸ್ತರಣೆ

|
Google Oneindia Kannada News

ಮೈಸೂರು, ಜನವರಿ 16 : ಹುಬ್ಬಳ್ಳಿ - ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮೈಸೂರು ನಗರದ ರೈಲ್ವೆ ನಿಲ್ದಾಣದಿಂದ ಅಶೋಕಪುರಂ ರೈಲ್ವೆ ನಿಲ್ದಾಣದವರೆಗೆ ಇಂದಿನಿಂದ ವಿಸ್ತರಣೆಗೊಂಡಿದೆ.

ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ ಬದಲು ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ ಬದಲು

ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ ರೈಲಿಗೆ ಸಂಸದ ಪ್ರತಾಪ್ ಸಿಂಹ ಈ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. ಬೆಳಿಗ್ಗೆ 8.30 ಹುಬ್ಬಳ್ಳಿಯಿಂದ ಹೊರಡುವ ರೈಲು ರಾತ್ರಿ 10.49 ಕ್ಕೆ ಮೈಸೂರಿಗೆ ಅಗಮನ. ಬಳಿಕ 11.15 ಕ್ಕೆ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಬಂದು ಸೇರಲಿದೆ.

Vishwamanava express train will extended till asokpuram station

ಬೆಳಗ್ಗಿನ ಜಾವ 5.15 ಕ್ಕೆ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿಗೆ ವಿಶ್ವಮಾನವ ರೈಲು ಹೊರಡಲಿದೆ. ಇದೇ ವೇಳೆ ವಿಶ್ವಮಾನವ ರೈಲು ಮಾರ್ಗ ವಿಸ್ತರಣೆಗೆ ಹಸಿರು ನಿಶಾನೆ ತೋರಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭುರವರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದರು. ಅಲ್ಲದೆ ಅಶೋಕಪುರಂ ರೈಲ್ವೆ ನಿಲ್ದಾಣವನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ, ನಿಲ್ದಾಣಗಳು ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ, ನಿಲ್ದಾಣಗಳು

Vishwamanava express train will extended till asokpuram station

ಆಪರೇಷನ್ ಕಮಲಕ್ಕೆ ಕುರಿತಂತೆ ಮಾತನಾಡಿದ ಪ್ರತಾಪ್ ಸಿಂಹ, ತಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಯಾರೇ ಬಂದರು ಖಂಡಿತಾ ಸ್ವಾಗತ ಬಯಸುತ್ತೇವೆ. ಇನ್ನು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಬಂದಿರುವ ಬಗ್ಗೆ ರಾಜ್ಯದ ಮುಖಂಡರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

English summary
Hubballi – Mysuru express vishwamanva will extended to ashokpuram station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X