ಬತ್ತಿದ ಶಿಂಷಾ ನದಿ ಒಡಲು, ಚನ್ನಪಟ್ಟಣ ಜನತೆಯಿಂದ ಎಚ್ಚರಿಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚನ್ನಪಟ್ಟಣ,ಮಾರ್ಚ್,21: ಬೇಸಿಗೆ ಝಳದಿಂದ ಶಿಂಷಾ ನದಿ ನೀರು ಸಂಪೂರ್ಣ ಇಂಗಿದ್ದು, ಜೀವ ಹನಿಗಾಗಿ ಜನರು ಒದ್ದಾಡುತ್ತಿದ್ದಾರೆ. ಆದರೂ ಈ ನದಿ ನೀರನ್ನು ಪಕ್ಕದ ಮದ್ದೂರಿನ ಗ್ರಾಮದ ಕೆರೆಗಳಿಗೆ ಹರಿಸುತ್ತಿರುವ ಕ್ಷೇತ್ರದ ಶಾಸಕ ತಮ್ಮಣ್ಣ ಅವರ ಕ್ರಮವನ್ನು ಖಂಡಿಸಿದ ಮದ್ದೂರು ಜನತೆಗೆ ಕೊನೆಗೂ ಫಲ ಸಿಕ್ಕಿದೆ.

ಶಿಂಷಾನದಿಯಿಂದ ಪಕ್ಕದ ಮದ್ದೂರಿನ ಕೆರೆಗಳಿಗೆ ನೀರು ನೀಡುತ್ತಿರುವುದನ್ನು ಗಮನಿಸಿದ ನೂರಾರು ಜನರು ಇಗ್ಗಲೂರು ಶಿಂಷಾನದಿಯ ದೇವೆಗೌಡ ಬ್ಯಾರೆಜ್ ಬಳಿ ನೀರು ಸರಬರಾಜು ಮಾಡುತ್ತಿದ್ದ ಮೋಟಾರ್ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ಕೈಗೊಂಡ ಪರಿಣಾಮ ತಕ್ಷಣ ಅಲ್ಲಿನ ಇಂಜಿನಿಯರ್ ಗಳ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದ ಮೋಟಾರ್ ಗಳನ್ನು ನಿಲುಗಡೆ ಮಾಡಿದ್ದಾರೆ.[85 ಅಡಿಗೆ ಕುಸಿದ ಕೆಆರ್ ಎಸ್ ನೀರಿನ ಮಟ್ಟ]

Villagers take protest against water problem in Channapatna, Mysuru

ಘಟನೆಯ ವಿವರ:

ಶಿಂಷಾ ನದಿಯು ಮಂಡ್ಯ, ಚನ್ನಪಟ್ಟಣ ಜನರ ಜೀವನಕ್ಕೆ ಆಧಾರವಾಗಿದೆ. ಆದರೆ ಬೇಸಿಗೆಯ ಬೇಗೆಗೆ ಶಿಂಷಾ ನದಿಯ ಒಡಲು ಬರಿದಾಗುತ್ತಿದೆ. ಆದರೂ ಮದ್ದೂರು ಗ್ರಾಮದ ಜನರು ಹಾಗೂ ಅಲ್ಲಿನ ಕೆಲವು ರಾಜಕೀಯ ಮುಖಂಡರುಗಳು ಶಿಂಷಾ ನದಿ ನೀರನ್ನು ಮೋಟಾರು ವಾಹನಗಳ ಮೂಲಕ ಮದ್ದೂರಿನ ಜನತೆಗೆ ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದರು.[ಕಳಸಾ-ಬಂಡೂರಿಗಾಗಿ ಏ.18ರಂದು ಕರ್ನಾಟಕ ಬಂದ್]

ರಾಜಕೀಯ ಮುಖಂಡರುಗಳ ನೀತಿಯನ್ನು ಖಂಡಿಸಿದ ಚನ್ನಪಟ್ಟಣದ ಜನರು ಇಡೀ ಗ್ರಾಮವೇ ನೀರಿಲ್ಲದೆ ಬವಣೆ ಪಡುತ್ತಿರುವಾಗ ಪಕ್ಕದ ಮದ್ದೂರು ಗ್ರಾಮದ ಕೆರೆಗಳಿಗೆ ನೀರು ಬಿಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ'? ಎಂದು ಭಾನುವಾರ ಕೈಗೊಂಡ ಪ್ರತಿಭಟನೆಯಲ್ಲಿ ಪ್ರಶ್ನಿಸಿದ್ದಾರೆ. [ಜಲಾಶಯಗಳ ನೀರು ಕುಡಿಯುವ ನೀರಿಗಾಗಿ ಮಾತ್ರ]

ಕೊನೆಗೆ ಇವರ ಒತ್ತಾಯಕ್ಕೆ ಮಣಿದ ಪೊಲೀಸ್ ಅಧಿಕಾರಿಗಳು ಹಾಗೂ ಎಂಜಿನಿಯರ್ ಗಳು ನೀರು ಸರಬರಾಜು ಪ್ರಕ್ರಿಯೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದಾರೆ. ಆದರೆ ಈ ಘಟನೆ ಪುನಃ ಮರುಕಳಿಸಿದರೆ ಬೇರೆ ರೀತಿಯ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Channapattana taluk Iggaluru villagers protested against release of water to tanks in Maddur from Shimsha river, by blocking the vehicles on Mysuru road. Shimsha river, a tributary of river Cauvery, is almost dried up during this summer and people in Channapattana are facing huge water scarcity.
Please Wait while comments are loading...