ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಗನಕ್ಕೇರಿದ ತರಕಾರಿ ಬೆಲೆ ಇಳಿಯೋದ್ಯಾವಾಗ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 16 : ಬರದ ಬಿಸಿ ಜನರಿಗೆ ತಟ್ಟಿದೆ. ಈ ಬಾರಿ ಮಳೆ ಬಾರದಿರುವುದರಿಂದ ರೈತ ಕೈಕಟ್ಟಿ ಕುಳಿತು ಕೊಳ್ಳುವಂತಾಗಿದೆ. ಪರಿಣಾಮ ತರಕಾರಿ ದರ ಗಗನಕ್ಕೇರಿದೆ.

ದಿನನಿತ್ಯದ ಅಡುಗೆಗೆ ತರಕಾರಿ ಖರೀದಿಸುವವರು ತರಕಾರಿ ಬೆಲೆ ಕೇಳಿ ಬೆಚ್ಚಿ ಬೀಳುವಂತಾಗಿದೆ. ಟೊಮೆಟೊ 50 ರೂ., ಬೀನ್ಸ್ 120, ಸೌತೆಕಾಯಿ 100, ಕ್ಯಾರೆಟ್ 70, ನುಗ್ಗೆ 120 ಹೀಗೆ ಅಂಗಡಿಯಿಂದ ಅಂಗಡಿಗೆ ತರಕಾರಿಗಳ ಬೆಲೆ ಹೆಚ್ಚುತ್ತಲೇ ಹೋಗುತ್ತಿದೆ. [ತಾರಸಿ ತೋಟ ನಿರ್ಮಿಸಿ, ನಿಮ್ಮ ಮನೆಯನ್ನು ಹಚ್ಚ ಹಸುರಾಗಿಸಿ]

vegetable

ಕಡಿಮೆ ದರದಲ್ಲಿ ತರಕಾರಿ ಸಿಗುವುದೇ ಕಷ್ಟ ಸಾಧ್ಯವಾಗಿದೆ. ಆದ್ದರಿಂದ, ತರಕಾರಿ ಖರೀದಿಗೆ ಬರುವ ಗ್ರಾಹಕರು ಇಷ್ಟೊಂದು ರೇಟಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. [ಮೈಸೂರಲ್ಲಿ ಒಂದು ಕೆಜಿ ಅವರೆಕಾಯಿ ಬೆಲೆ ಎಷ್ಟು ಗೊತ್ತಾ?]

ಕೆಜಿ ಗಟ್ಟಲೆ ಖರೀದಿಸುತ್ತಿದ್ದವರು ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ತರಕಾರಿ ಮಾರಾಟಗಾರರಿಗೂ ನಷ್ಟವಾಗುತ್ತಿದೆ. ಇನ್ನು ಮದುವೆ, ಪೂಜೆ ಹೀಗೆ ಸಮಾರಂಭ ಮಾಡುವವರು ದುಪ್ಪಟ್ಟು ಹಣ ಕೊಟ್ಟಿ ತರಕಾರಿಕೊಳ್ಳುವುದು ಅನಿವಾರ್ಯವಾಗಿದೆ. [ವಿಶಿಷ್ಟ ರುಚಿಯ ಮಟ್ಟುಗುಳ್ಳ ತರಕಾರಿಗೆ 'ಕಾಂಡ ಕೊರಕ ರೋಗ']

ತರಕಾರಿ ಬೆಲೆ ಹೀಗೆಯೇ ಕೆಲವು ದಿನಗಳವರೆಗೆ ಇರತ್ತದೆ ಎನ್ನುತ್ತಾರೆ ವ್ಯಾಪಾರಿಗಳು. ಕೆಲವೆಡೆಗಳಲ್ಲಿ ತರಕಾರಿ ಇಷ್ಟರಲ್ಲೇ ಬರಬೇಕಿತ್ತು. ಆದರೆ, ಕೆಲವು ರೈತರು ಬೆಳೆದಿದ್ದ ತರಕಾರಿ ನೀರಿಲ್ಲದೆ ನೆಲಕಚ್ಚಿದೆ. ಮತ್ತೆ ಕೆಲವು ರೈತರು ನೀರಿಲ್ಲದ ಪರಿಣಾಮ ತರಕಾರಿ ಬೆಳೆಯುವುದನ್ನು ಕೈಬಿಟ್ಟಿದ್ದಾರೆ. ಇದರಿಂದಾಗಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

vegetables

ತಳ್ಳುಗಾಡಿಗಳಲ್ಲಿ ತರಕಾರಿ ಹಾಕಿಕೊಂಡು ಮನೆ ಮನೆ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ. ಅವರಿಂದ ಕಡಿಮೆ ದರದಲ್ಲಿ ಜನ ಕೇಳುತ್ತಾರೆ. ಹೆಚ್ಚಿನ ದರ ಹೇಳಿದರೆ ಬೇಡ ಅಂತಾರೆ. ಕಡಿಮೆ ದರದಲ್ಲಿ ಕೊಡುವಂತೆ ಚೌಕಾಸಿ ಮಾಡುತ್ತಾರೆ. ಇದರಿಂದ ನಮಗೆ ನಷ್ಟವಾಗುತ್ತದೆ ಎನ್ನುವುದು ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವರ ನೋವಿನ ಮಾತು.

ಇದೀಗ ಅಲ್ಲಲ್ಲಿ ಮಳೆಯಾಗಿದ್ದು, ರೈತರು ಹುಮ್ಮಸ್ಸಿನಿಂದಲೇ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲವೂ ಸರಿಹೋದರೆ ಉತ್ತಮ ಮಳೆಯಾಗಿ ಫಸಲು ಬಂದರೆ ತರಕಾರಿಯ ಸಂಕಷ್ಟ ನೀಗಬಹುದೇನೋ? ಅಲ್ಲಿ ತನಕ ದುಬಾರಿ ಬೆಲೆ ನೀಡಿ ತರಕಾರಿ ಖರೀದಿಸುವುದು ಅನಿವಾರ್ಯವಾಗಲಿದೆ.

English summary
Vegetables price hiked in Mysuru city. Result of the drought situation which led to a short supply, is badly affecting home budgets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X