ಪರಿಷತ್ ಚುನಾವಣಾ ಆಖಾಡಕ್ಕಿಳಿದ ವಾಟಾಳ್ ನಾಗರಾಜ್!

Posted By:
Subscribe to Oneindia Kannada

ಮೈಸೂರು, ಮೇ 24 : ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಿಂದ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಗೆ ಸೋಮವಾರ ಸಾರೋಟ್‌ನಲ್ಲಿ ಆಗಮಿಸಿದ ವಾಟಾಳ್ ನಾಗರಾಜ್ ಅವರು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಜೂನ್ 9ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. [ಪರಿಷತ್ತಿಗೆ ಸೋಮಣ್ಣ, ಸುಬ್ಬಣ್ಣ : ಯಾರಂತ ಗೊತ್ತಿಲ್ಲ ಕಣಣ್ಣ!]

vatal nagaraj

ಪ್ರೊ.ಭಗವಾನ್ ಕಣದಲ್ಲಿ : ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಕಣ ಕುತೂಹಲ ಮೂಡಿಸಿದೆ. ವಿಚಾರವಾದಿ, ವಿಮರ್ಶಕ ಪ್ರೊಫೆಸರ್ ಕೆ.ಎಸ್. ಭಗವಾನ್ ಅವರು ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. [ಪರಿಷತ್ ಚುನಾವಣೆ : ಏಳನೇ ಬಾರಿ ಅಖಾಡಕ್ಕಿಳಿದ ಹೊರಟ್ಟಿ]

19 ಅಭ್ಯರ್ಥಿಗಳು : ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೈ.ವಿ. ರವಿಶಂಕರ್ (ಬಿಜೆಪಿ), ಎಚ್.ಎನ್.ರವೀಂದ್ರ (ಕಾಂಗ್ರೆಸ್), ಕೆ.ಟಿ.ಶ್ರೀಕಂಠೇಗೌಡ (ಜೆಡಿಎಸ್), ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ) ಸೇರಿದಂತೆ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. [ಪರಿಷತ್ ಚುನಾವಣಾ ವೇಳಾಪಟ್ಟಿ]

ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಗೊ.ಮಧುಸೂದನ (ಬಿಜೆಪಿ) ಅವರ ಅವಧಿ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ. ಅವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ನಾಮಪತ್ರ ವಾಪಸ್ ಪಡೆಯಲು ಮೇ 26 ಕೊನೆಯ ದಿನ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Chaluvali Vatal Paksha president Vatal Nagaraj contesting for Legislative council elections scheduled on June 9, 2016. Vatal Nagaraj filed nomination from South graduate constituency.
Please Wait while comments are loading...