ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಕ್ತ ವಿವಿ ಮಾನ್ಯತೆ ರದ್ದಿಗೆ ವಾಸ್ತು ದೋಷ ಕಾರಣವೇ!?

By Yashaswini
|
Google Oneindia Kannada News

ಮೈಸೂರು, ನವೆಂಬರ್ 11: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ಕಳೆದುಕೊಳ್ಳಲು ಹೊಸ ಕಟ್ಟಡದ ವಾಸ್ತು ದೋಷ ಕಾರಣ ಎಂದು ಹಿರಿಯ ಅಧಿಕಾರಿಗಳು ಕಚೇರಿ ಅದಲು ಬದಲು ಮಾಡಿ ಇದೀಗ ಅಪಹಾಸ್ಯಕ್ಕೀಡಾಗಿದ್ದಾರೆ.

ಮಾನ್ಯತೆ ಕಳೆದುಕೊಳ್ಳಲು ಕಚೇರಿಯ ವಾಸ್ತು ಕಾರಣವೆಂದು ಕುಲಪತಿ ಮತ್ತು ಕುಲಸಚಿವರ ಕಚೇರಿಯನ್ನ ಅದಲು ಬದಲು ಮಾಡಿಕೊಂಡಿದ್ದಾರೆ. ವಾಸ್ತು ಮೊರೆ ಹೋದ ಕುಲಪತಿ ಪ್ರೊ.ಶಿವಲಿಂಗಯ್ಯ,ಕುಲಸಚಿವ ಡಾ.ಚಂದ್ರಶೇಖರ್ ಕಚೇರಿ ಅದಲು ಬದಲು ಮಾಡಿಕೊಂಡಿದ್ದಾರೆ. ಎನ್ನಲಾಗುತ್ತಿದೆ. ಕೋಟ್ಯಾಂತರ ರೂ ಖರ್ಚು ಮಾಡಿ ಕಟ್ಟಡಗಳನ್ನ ಕಟ್ಟಿಸಲಾಗಿದ್ದು, ಇದೀಗ ವಿವಿಯ ಹಿರಿಯ ಅಧಿಕಾರಿಗಳು ವಾಸ್ತು ದೋಷ ಎಂದು ಕಚೇರಿಯನ್ನ ಬದಲಿಸಿದ್ದಾರೆ.

Vastu is the reason behind KSOU lose accreditation?

ಇತ್ತ ಯುಜಿಸಿ ವಿರುದ್ಧ ಕೆಎಸ್ ಓಯು ಅಧಿಕಾರಿಗಳಿಂದ ದಾವೆ:
ಇನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಮಾನ್ಯತೆ ನೀಡಲು ಮೀನಾಮೇಷ ಎಣಿಸುತ್ತಿರುವ ಯುಜಿಸಿ ವಿರುದ್ದ ಕೆಎಸ್ ಓಯು ಅಧಿಕಾರಿಗಳು ಕಾನೂನು ಸಮರಕ್ಕೆ ನಿಂತಿದ್ದಾರೆ.

ಮಾತಿಗೆ ಬಗ್ಗದ ಯುಜಿಸಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಕೆಎಸ್ ಓಯು ಅಧಿಕಾರಿಗಳು, ಹೈಕೋರ್ಟ್ ಅಲ್ಲಿ ಯುಜಿಸಿ ವಿರುದ್ದ ದಾವೆ ಹೂಡಿದ್ದಾರೆ. ಕಳೆದ ಫೆಬ್ರವರಿಯಲ್ಲೇ ಮಾನ್ಯತೆಗೆ ಅರ್ಜಿ ಸಲ್ಲಿಸಿದ್ದರೂ ಯಾಕೆ ಮಾನ್ಯತೆ ನೀಡ್ತಿಲ್ಲ ಎಂದು ಪ್ರಶ್ನಿಸಿ ದಾವೆ ಹೂಡಿದ್ದಾರೆ.

ರಿಟ್ ಆಫ್ ಮ್ಯಾಂಡಮಸ್ ಮೂಲಕ ಅರ್ಜಿ ಸಲ್ಲಿಕೆಯಾಗಿದ್ದು, ಮಂಗಳವಾರ ಈ ಅರ್ಜಿ ವಿಚಾರಣೆಗೆ ಬರಲಿದೆ.ಕಳೆದ ಮೂರು ವರ್ಷಗಳಿಂದ ಕೆಎಸ್ ಓಯು ಮಾನ್ಯತೆ ಕಳೆದುಕೊಂಡಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಈ ವರ್ಷವಾದರೂ ಮಾನ್ಯತೆ ಪಡೆಯಲು ಕೆಎಸ್ ಓಯು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ.

English summary
Senior officials of Karnataka State Open University, have replaced the office. Due to the new building's archaic error(Vasthu) to lose exposure
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X