ವ್ಯಾಲೆಂಟೈನ್ಸ್ ಡೇ ಸ್ಪೆಷಲ್.. ಮೈಸೂರು ವರ, ಚೀನಾ ವಧುವಿನ ಪ್ರೇಮ್ ಕಹಾನಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 9: ವ್ಯಾಲೆಂಟೈನ್ ಡೇ ಸಮೀಪಿಸುತ್ತಿರುವಂತೆ ಅಪೂರ್ವ ಮದುವೆಯ ಸುದ್ದಿಯೊಂದು ಹೊರ ಬಿದ್ದಿದೆ. ಮೈಸೂರಿನ‌ ವರ ಮತ್ತು ಚೀನಾದ ವಧು ಪರಸ್ಪರ ಮದುವೆ ಆಗುವ ಮೂಲಕ ಪ್ರೀತಿ ಜಾತಿ, ಭಾಷೆ, ದೇಶವನ್ನೇ ಮೀರಿದ್ದು ಅಂತ ಸಾಬೀತು ಪಡಿಸಿದ್ದಾರೆ.

ಮೈಸೂರಿನ ನಾಯ್ಡು ನಗರದ ಡೇವಿಡ್‌ ಅನೋಕ್ ಹಾಗೂ ಚೀನಾದ ವಾಂಗ್ ಟಾಂಗ್ ನಗರದಲ್ಲಿ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರೂ ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ವಧು ಮತ್ತು ವರನ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಚರ್ಚ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ. [ಪ್ರೇಮಿಗಳಿಗಾಗಿ ಮಾತ್ರ : ಆ ಐನೂರು ರೂಪಾಯ್ ನಿನ್ನನ್ನೇ ನೋಡ್ತಾ ಇದೆ!]

Valentines day special.. Mysuru boy and China girl exchanged ring

ಡೇವಿಡ್ ಅನೂಕ್ ಚೀನಾದ ಸೈಲೆಂಟ್ ಓಜಾನ್ ಶಿಪ್ಟಿಂಗ್ ಕಂಪನಿಯಲ್ಲಿ 2011 ರಲ್ಲಿ ಕೆಲಸಕ್ಕೆ ಸೇರಿದ್ದರು. ಇದೇ ಕಂಪನಿಯಲ್ಲಿ ವಾಂಗ್ ಟಾಂಗ್ ಕೆಲಸ ಮಾಡುತ್ತಿದ್ದರು. ಇಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕೊನೆಗೆ ಇಬ್ಬರೂ ತಮ್ಮ ಕುಟುಂಬಸ್ಥರನ್ನು ಒಪ್ಪಿಸಿ ಅವರ ಸಮ್ಮುಖದಲ್ಲೇ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. [ಎಚ್ 1 ಎನ್1: ಮೈಸೂರಿನಲ್ಲಿ 27 ಶಂಕಿತ ಪ್ರಕರಣಗಳು ಪತ್ತೆ]

Valentines day special.. Mysuru boy and China girl exchanged ring

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In an interesting event China girl and Mysuru boy got married in Mysuru today, February 9. They proved that love is above the language, country and caste in their way of marriage.
Please Wait while comments are loading...