ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಕ್ತ ವಿವಿ ಬಗ್ಗೆ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು

|
Google Oneindia Kannada News

ಮೈಸೂರು, ಡಿಸೆಂಬರ್ 3: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀಕರಣ ಲೋಪಕ್ಕೆ ಹಿಂದಿನ ಕುಲಪತಿಗಳೇ ಕಾರಣ ಎಂಬ ರಾಜ್ಯಪಾಲರ ಹೇಳಿಕೆಯನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವಾಗತಿಸಿದ್ದಾರೆ.

ಕರಾಮುವಿ ಆವರಣದಲ್ಲಿ ನೂತನವಾಗಿ ಕಟ್ಟಿರುವ ಘಟಿಕೋತ್ಸವ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು, ಮುಕ್ತ ವಿವಿ ಮಾನ್ಯತೆ ರದ್ದಾದಾಗ, ಈ ಹಿಂದಿನ ಕುಲಪತಿ ಯುಜಿಸಿ ಜೊತೆಗೆ ಸರಿಯಾದ ರೀತಿ ಪತ್ರ ವ್ಯವಹಾರ ನಡೆಸಲು ವಿಫಲರಾದ ಕಾರಣ ಮಾನ್ಯತೆ ಸಮಸ್ಯೆ ಉದ್ಭವಿಸಿತ್ತು. ಆದರೆ ಹಾಲಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅವರ ಸತತ ಪ್ರಯತ್ನದ ಫಲವಾಗಿ ವಿವಿಗೆ ಮಾನ್ಯತೆ ದೊರಕಿದೆ ಎಂದು ಹೇಳಿದ್ದರು.

ಕೆಎಸ್ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನಕೆಎಸ್ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನ

ಈ ಹೇಳಿಕೆಯನ್ನು ಸ್ವಾಗತಿಸಿರುವ ಪ್ರೊ.ಕೆ.ಎಸ್.ರಂಗಪ್ಪ, ನನ್ನ ಅವಧಿಯಲ್ಲಿ ಕರಾಮುವಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ನನ್ನ ಕುಲಪತಿ ಅವಧಿ ಮುಗಿದ ಬಳಿಕ 6 ತಿಂಗಳುಗಳ ಕಾಲ ಯುಜಿಸಿ ಮಾನ್ಯತೆ ಇತ್ತು. ಆದರೆ ಆನಂತರ ಯುಜಿಸಿ ಮಾನ್ಯತೆ ಸಮಸ್ಯೆ ಎದುರಾಯಿತು. ಈ ಅಂಶವನ್ನು ಹಲವಾರು ಬಾರಿ ನಾನೇ ಸ್ವತಃ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದೆ.

Vajubhai Vala expressed appreciation about KSOU

ಆದರೀಗ ಇದೇ ಮೊದಲ ಬಾರಿಗೆ ಖುದ್ದು ರಾಜ್ಯಪಾಲರು ಇದೇ ಅಂಶವನ್ನು ಉಲ್ಲೇಖಿಸಿದ್ದಾರೆ. ಈ ಮೂಲಕವಾದರೂ ಅನಗತ್ಯವಾಗಿ ನನ್ನ ವಿರುದ್ಧ ಟೀಕೆ ಮಾಡುತ್ತಿದ್ದವರು ಸತ್ಯ ತಿಳಿದುಕೊಂಡರೆ ಸಾಕು ಎಂದಿದ್ದಾರೆ.

 ಕೆಎಸ್ಓಯು ದೂರ ಶಿಕ್ಷಣ ಕೋರ್ಸ್‌, ಹೆಚ್ಚು ಅರ್ಜಿ ಬಂದಿರುವುದು ಎಂ.ಕಾಂಗೆ! ಕೆಎಸ್ಓಯು ದೂರ ಶಿಕ್ಷಣ ಕೋರ್ಸ್‌, ಹೆಚ್ಚು ಅರ್ಜಿ ಬಂದಿರುವುದು ಎಂ.ಕಾಂಗೆ!

ಮುಕ್ತ ವಿವಿ ಆವರಣ ಹಾಗೂ ಘಟಿಕೋತ್ಸವ ಭವನದ ಬಗ್ಗೆಯೂ ರಾಜ್ಯಪಾಲರು ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ಸಂತಸಗೊಂಡಿರುವ ರಂಗಪ್ಪ ಅವರು, ಮುಕ್ತ ವಿವಿಗೆ ಹೊಸರೂಪ ನೀಡಬೇಕು ಎಂಬುದೇ ಕುಲಪತಿಯಾಗಿದ್ದ ನನ್ನ ಕನಸಾಗಿತ್ತು.

 ಕರ್ನಾಟಕ ಮುಕ್ತ ವಿವಿಯಲ್ಲಿ ಜನವರಿಯಿಂದ ಪಿಎಚ್‌.ಡಿ ಕರ್ನಾಟಕ ಮುಕ್ತ ವಿವಿಯಲ್ಲಿ ಜನವರಿಯಿಂದ ಪಿಎಚ್‌.ಡಿ

ಈ ನಿಟ್ಟಿನಲ್ಲಿ ಎದುರಾದ ಹಲವಾರು ತೊಡಕು, ಟೀಕೆಗಳಿಗೆ ಕಿವಿಗೊಡದೆ ವಿಶ್ವವಿದ್ಯಾನಿಲಯಕ್ಕೆ ಹೊಸ ರೂಪ ನೀಡಿದೆ. ಘಟಿಕೋತ್ಸವ ಭವನ ಸಹ ಸಂಪೂರ್ಣ ನಿರ್ಮಾಣಗೊಂಡು ಒಳಾಂಗಣ ವಿನ್ಯಾಸ ಕೆಲಸ ಮಾತ್ರ ಬಾಕಿ ಉಳಿದಿತ್ತು. ಅದನ್ನು ಪೂರ್ಣಗೊಳಿಸಿ ಭವನ ಉದ್ಘಾಟಿಸಬೇಕು ಎನ್ನುವಷ್ಟರಲ್ಲಿ ನನ್ನ ಅವಧಿ ಪೂರ್ಣಗೊಂಡಿತು. ಹಾಗಾಗಿ ಲೋಕಾರ್ಪಣೆಗೊಂಡಿರಲಿಲ್ಲ.

ಇದೀಗ ರಾಜ್ಯಪಾಲರು ಭವನ ಉದ್ಘಾಟಿಸಿ ಶ್ಲಾಘಿಸಿರುವುದಕ್ಕೆ ಸಾರ್ಥಕವಾದಂತಾಯಿತು ಎಂದರು.

English summary
Karnataka Governor Vajubhai Vala expressed appreciation about Karnataka State Open University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X