ಭೈರಪ್ಪನವರ 'ಉತ್ತರಕಾಂಡ'ಕ್ಕೆ ಕನ್ನ ಒಬ್ಬನ ವಿರುದ್ಧ ದೂರು

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 11: ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕಾದಂಬರಿ 'ಉತ್ತರಕಾಂಡ'ವನ್ನು ಯುವಕನೊಬ್ಬ ಅಕ್ರಮವಾಗಿ ಪ್ಲೇಸ್ಟೋರ್‌ನಲ್ಲಿ ಅಪ್ಲೋಡ್ ಮಾಡಿದ್ದು ಆತನ ವಿರುದ್ಧ ದೂರು ದಾಖಲಿಸಲಾಗಿದೆ.

ಆತ ಅಪ್‌ಲೋಡ್ ಮಾಡಿದ್ದ ಕಾದಂಬರಿಯ ಪ್ರತಿಯನ್ನು ಈಗಾಗಲೇ 819 ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಗೂಗಲ್ ಪ್ಲೇಸ್ಟೋರ್ ನಲ್ಲಿದ್ದ ಕಾದಂಬರಿಯನ್ನು ತೆಗೆದು ಹಾಕಲಾಗಿದ್ದು, ಪೊಲೀಸರು ಯುವಕನ ವಿರುದ್ಧ ಕೃತಿ ಹಕ್ಕು ಸ್ವಾಮ್ಯ ಉಲ್ಲಂಘನೆಯ ಪ್ರಕರಣ ದಾಖಲಿಸಿದ್ದಾರೆ.

ಬಿಸಿಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಭೈರಪ್ಪ 'ಉತ್ತರಕಾಂಡ'

ಪ್ರಕರಣದ ಹಿನ್ನೆಲೆ
ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ರಚಿಸಿರುವ ಉತ್ತರಕಾಂಡ ಕಾದಂಬರಿ 2017ರಲ್ಲಿ ಬಿಡುಗಡೆಯಾಗಿದ್ದು, ಈ ಕಾದಂಬರಿ 330 ಪುಟಗಳನ್ನ ಒಳಗೊಂಡಿದೆ. ಕಾದಂಬರಿಯ ಪ್ರತಿಯೊಂದು ಹಾಳೆಯನ್ನ ಮೊಬೈಲ್‌ನಲ್ಲಿ ಫೋಟೋ ತೆಗೆದು ಕನ್ನಡ ಅದನ್ನು ಆಪ್ ಆಗಿ ರೂಪಿಸಿ ಪ್ಲೇಸ್ಟೋರ್‌ಗೆ ಅಪ್‌ಲೋಡ್ ಮಾಡಿದ್ದನು.

Uttarakhand novel book uploaded in mobile app

ಈ app ಉಚಿತವಾಗಿ ಪ್ಲೇಸ್ಟೋರ್ ನಲ್ಲಿ ಸಿಗುತ್ತಿತ್ತು. ಇದನ್ನು ಮೂರೇ ತಿಂಗಳಲ್ಲಿ ಒಟ್ಟು 819 ಮಂದಿ ತಮ್ಮ ಮೊಬೈಲ್ ಗಳಿಗೆ ಡೌನ್‌ಲೋಡ್ ಮಾಡಿಕೊಂಡಿದ್ದರು. ಇದರ ಮಾಹಿತಿ ಪಡೆದ ಭೈರಪ್ಪ ಅವರು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ಸಂಕ್ರಾಂತಿ ವಿಶೇಷ ಪುಟ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಅಪರಾಧ ಪತ್ತೆ ವಿಭಾಗಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದರು. ದಾವಣಗೆರೆಯ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ app ರೂಪಿಸಿರುವುದಾಗಿ ಒಪ್ಪಿಕೊಂಡ. ಜೊತೆಗೆ ಹಕ್ಕುಸ್ವಾಮ್ಯ ಉಲ್ಲಂಘನೆ ಕಾಯ್ದೆ ಕುರಿತ ಅರಿವು ಇರಲಿಲ್ಲ. ಜೊತೆಗೆ ಇದರಿಂದ ಲಾಭ ಮಾಡುವ ಉದ್ದೇಶವೂ ಇರಲಿಲ್ಲ ಎಂದು ತಿಳಿಸಿದ. ಸದ್ಯ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ಸೂಚಿಸಿ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Noted novelist S L. Bhairappa's "Uttarkanda" novel was uploaded to the Kannada mobile app and the person who violated the copyright infringement. He was taken into custody.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ