ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಸ್ವಚ್ಛನಗರಿ app ಬಳಸಿ ನಗದು ಬಹುಮಾನ ಗೆಲ್ಲಿ!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಡಿಸೆಂಬರ್ 13: ಮೈಸೂರಿಗೆ ಸ್ವಚ್ಛನಗರಿ ಪಟ್ಟ ಮತ್ತೆ ದೊರಕಬೇಕೆಂಬ ಆಸೆ ನಿಮ್ಮಲ್ಲಿದ್ದರೆ ಮೊದಲು ಸ್ವಚ್ಛತಾ app ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ಸಕ್ರಿಯರಾಗಿ. ಇಲ್ಲವಾದಲ್ಲಿ ಈ ಬಾರಿಯೂ ಈ ಪಟ್ಟ ಕೈ ತಪ್ಪಲಿದೆ!

ನಗರದಲ್ಲಿ ಸ್ವಚ್ಛ ಸರ್ವೇಕ್ಷಣಾ ಕಾರ್ಯ ಆರಂಭಕ್ಕೂ ಮುನ್ನ ಸ್ವಚ್ಛತಾ app ಅತಿ ಹೆಚ್ಚು ಬಳಕೆ ಮಾಡಿದವರಿಗೆ 10 ಸಾವಿರ ರೂ. ನಗದು ಬಹುಮಾನ ನೀಡಲು ಮಹಾ ಮೈಸೂರು ನಗರ ಪಾಲಿಕೆ ತೀರ್ಮಾನಿಸಿದೆ. ಮೈಸೂರು ಮಹಾನಗರ ಪಾಲಿಕೆ ಹೊರ ತಂದಿರುವ ಸ್ವಚ್ಛತಾ app ಅನ್ನು ಈಗಾಗಲೇ 20,600 ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದು, ಕೇವಲ 1,800 ಮಂದಿ ಸಕ್ರಿಯವಾಗಿ ಬಳಕೆ ಮಾಡುತ್ತಿದ್ದಾರೆ.

Use cleancity app and win prize: Mysuru City Corporation's new Shceme

ಮೈಸೂರು ನಗರವನ್ನು ಸ್ವಚ್ಛತೆಯಲ್ಲಿ ಮತ್ತೆ ನಂ.1 ಸ್ಥಾನಕ್ಕೆ ತರಲೇಬೇಕು ಎಂದು ಶ್ರಮಿಸುತ್ತಿರುವ ನಗರಪಾಲಿಕೆ ಅಧಿಕಾರಿಗಳು, ಈ ಸಂಬಂಧ ಹೊಸ ಯೋಜನೆ ರೂಪಿಸಿದ್ದಾರೆ. ನಗರದ ಸ್ವಚ್ಛತೆಗಾಗಿಯೇ ವಿನ್ಯಾಸಗೊಳಿಸಿರುವ ಮೊಬೈಲ್ app ಬಳಕೆಗೆ ಅಂಕ ನಿಗದಿಪಡಿಸಿದ್ದಾರೆ. ನಗರದ ಸ್ವಚ್ಛತೆಯ ವಿಚಾರದಲ್ಲಿ app ಬಳಕೆಗೆ ಸಾರ್ವಜನಿಕರನ್ನು ಉತ್ತೇಜಿಸುವ ಉದ್ದೇಶದಿಂದಲೇ ಪಾಲಿಕೆ ಆಯುಕ್ತರಾದ ಜಿ.ಜಗದೀಶ್, ಈ ವಿನೂತನ ಯೋಜನೆಗೆ ಚಾಲನೆ ನೀಡಲು ಮುಂದಾಗಿದ್ದಾರೆ.

ಈ ಹಿಂದೆ app ಬಳಕೆಗೆ ಸಾರ್ವಜನಿಕರು ನಿರಾಸಕ್ತಿ ತೋರಿದ್ದರಿಂದಲೇ ಕಳೆದ ಬಾರಿಯ ಸರ್ವೇ ವೇಳೆ ನಗರಕ್ಕೆ ಕಡಿಮೆ ಅಂಕಗಳು ಬಂದಿದ್ದವು. ಪರಿಣಾಮ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು 5ನೇ ಸ್ಥಾನಕ್ಕೆ ಕುಸಿಯುವಂತಾಗಿತ್ತು.

ಶಾಲಾ, ಕಾಲೇಜು ರಸಪ್ರಶ್ನೆ:
ಇದೇ ವೇಳೆ ಮಕ್ಕಳಿಗೆ ಸ್ವಚ್ಛತೆ ಕುರಿತು ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ನಗರದ 9 ವಲಯ ಕಚೇರಿ ವ್ಯಾಪ್ತಿಯ ಶಾಲಾ, ಕಾಲೇಜುಗಳಲ್ಲಿ ರಸಪಶ್ನೆ ಸ್ಪರ್ಧೆ ಏರ್ಪಡಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ವಿಜೇತ ಮಕ್ಕಳಿಗೆ 3 ಬಹುಮಾನಗಳ ಜತೆ ನಗದು ಬಹುಮಾನವನ್ನು ನೀಡಲು ಉದ್ದೇಶಿಸಿದೆ. ನಗದು ಬಹುಮಾನಗಳಿಗಾಗಿಯೇ ಪಾಲಿಕೆ ಆಡಳಿತ 80 ಸಾವಿರ ರೂ.ಗಳನ್ನು ಮೀಸಲಿಟ್ಟಿದೆ. ಒಟ್ಟಾರೆ, ನಗರದ ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರನ್ನೂ ಜತೆಗೆ ಕೊಂಡೊಯ್ಯಬೇಕು ಎಂಬ ಚಿಂತನೆ ಪಾಲಿಕೆಯದ್ದಾಗಿದೆ.

app ಬಳಕೆ ಹೇಗೆ ?

ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಪಟ್ಟಂತೆ ಮೈಸೂರು ಪಾಲಿಕೆ ಅಭಿವೃದ್ಧಿಪಡಿಸಿರುವ app ಅನ್ನು ಅಂತರ್ಜಾಲದಿಂದ ಮೊಬೈಲ್ ಫೋನ್‍ಗೆ ಡೌನ್‍ಲೋಡ್ ಮಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ಕಸದ ರಾಶಿ ಕಾಣುತ್ತದೆಯೋ ಅದರ ಚಿತ್ರವನ್ನು ಮೊಬೈಲ್ ಮೂಲಕ ಸೆರೆಹಿಡಿದು app ಮೂಲಕ ಪಾಲಿಕೆಗೆ ಕಳುಹಿಸಬೇಕು. ಹೆಚ್ಚು ಚಿತ ಅಪ್‍ಲೋಡ್ ಮಾಡಿದವರಿಗೆ 10 ಸಾವಿರ ರೂ. ನಗದು ಬಹುಮಾನ ದೊರೆಯಲಿದೆ.

3 app ಮೂಲಕ ಬಂದ ಚಿತ್ರಗಳನ್ನು ಗಮನಿಸುವ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಸ್ವಚ್ಛಗೊಂಡ ಸ್ಥಳದ ಚಿತ್ರವನ್ನು ಮೊದಲು ಚಿತ್ರ ಕಳುಹಿಸಿದ್ದವರ ಮೊಬೈಲ್ ಸಂಖ್ಯೆಗೇ ಕಳುಹಿಸುತ್ತಾರೆ. ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು app ಮೂಲಕವೇ ಫೀಡ್ ಬ್ಯಾಕ್ ನೀಡಬೇಕು. ಯಾರು ಹೆಚ್ಚು ಫೀಡ್ ಬ್ಯಾಕ್ ನೀಡುತ್ತಾರೋ ಅಂತಹವರಿಗೂ 10 ಸಾವಿರ ರೂ. ಬಹುಮಾನ ದೊರಕಲಿದೆ.

English summary
Use cleancity app and win prize! New scheme of Mysuru city corporation to create awareness about cleanliness and to bring cleancity image to Mysuru again. Those who use cleancity app frequently will get cash prize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X