ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಕಟ್ಟಿ ನೋಡು ಗೃಹಪ್ರವೇಶಕ್ಕೆ ಹೀಗೂ ಕರೆದು ನೋಡು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 12 : ಎಲ್ಲರೂ ಮನೆಕಟ್ಟುತ್ತಾರೆ. ಬಳಿಕ ಆಹ್ವಾನಪತ್ರ ನೀಡಿ ಗೃಹಪ್ರವೇಶಕ್ಕೂ ಕರೆಯುತ್ತಾರೆ. ಅದರಲ್ಲೇನು ವಿಶೇಷ ಅಂತೀರಾ? ಆದರೆ ಇಲ್ಲೊಬ್ಬರು ಮನೆಕಟ್ಟಿ ಬಳಿಕ ಗೃಹಪ್ರವೇಶಕ್ಕೆ ಆಹ್ವಾನಿಸಿರುವ ರೀತಿ ಇದೆಯಲ್ವಾ... ಅದು ಮಾತ್ರ ಸ್ವಲ್ಪ ಭಿನ್ನವಾಗಿದೆ. ಕಾರಣ ಅವರು ನೀಡಿರುವ ಆಹ್ವಾನ ಪತ್ರ ಎಲ್ಲರ ಗಮನಸೆಳೆಯುತ್ತಿದೆ.

ಗೃಹಪ್ರವೇಶದ ಆಹ್ವಾನಪತ್ರವನ್ನು ಹೀಗೂ ಮಾಡಬಹುದು ಎಂಬುದನ್ನು ಮೈಸೂರಿನ ಶಿಕ್ಷಕ ಬಿ.ಬಿ.ಸಂತೋಷ್‌ಕುಮಾರ್ ತೋರಿಸಿಕೊಟ್ಟಿದ್ದಾರೆ. ಶಿಕ್ಷಕರು ಮತ್ತು ಮೈಸೂರು ಸೈನ್ಸ್ ಫೌಂಡೇಶನ್‌ನ ಕಾರ್ಯದರ್ಶಿಯೂ ಆಗಿರುವ ಇವರು ಮೈಸೂರಿನಲ್ಲೊಂದು ಮನೆ ಕಟ್ಟಿದ್ದಾರೆ. ಏಪ್ರಿಲ್ 17ಕ್ಕೆ ಗೃಹಪ್ರವೇಶ ಇಟ್ಟುಕೊಂಡಿದ್ದಾರೆ.

ಆದರೆ ಆ ಗೃಹಪ್ರವೇಶಕ್ಕೆ ಎಲ್ಲರೂ ಕರೆದಂತೆ ಕರೆದರೆ ಅದರಲ್ಲೇನು ವಿಶೇಷ ಇರಲ್ಲ ಎಂದರಿತ ಅವರು, ಒಂದಷ್ಟು ಪದಗಳೊಂದಿಗೆ ಆಟವಾಡಿದ್ದಾರೆ. ಅವರು ಹೇಳುತ್ತಾರೆ.... [ಆಯ್ತೆ ಮಾರಾಯ್ತಿ, ಬೆಂಗ್ಳೂರಲ್ಲಿ ಸೈಟ್ ಕೊಂಡೇ ಬರ್ತೀನಿ!]

Unique invitation for house warming ceremony

"ಪ್ರತಿಯೊಂದು ಜೀವಿಗೂ ಗೂಡು ಕಟ್ಟುವ ಹಂಬಲ ಇದ್ದೇ ಇದೆ. ಆದರೆ ಎಲ್ಲ ಜೀವಿಗಳು ಒಂದೇ ಗೂಡಿನಲ್ಲಿ ನಿಲ್ಲುವುದಿಲ್ಲ. ಮಾನವ ಮಾತ್ರ ಗೂಡು ಕಟ್ಟಿ ಅಲ್ಲೇ ನೆಲೆಸುತ್ತಾನೆ. ಗೂಡು ಕಟ್ಟುವುದು ಅವನ ಜೀವಿತಾವಧಿಯ ಅತಿದೊಡ್ಡ ಕನಸು. ಅದರಂತೆ ನಾವೊಂದು ಗೂಡ ಕಟ್ಟಿರುವೆವು. ಅಲ್ಲಿ ಸ್ವರ ಸಂಯೋಜನೆಯ ಏರಿಳಿತದಿಂದ ಸುಖ-ದುಃಖಗಳು ಸಮ್ಮಿಳಿತವಾಗಿರಲಿ ಎಂದು ಅದಕೆ 'ಸಂಗೀತ' ಎಂದು ಹೆಸರಿಟ್ಟಿರುವೆವು. ನಮ್ಮ ಈ ಪುಟ್ಟ ಗೂಡ ನೋಡಿ ಹಾರೈಸಲು ನಿಮ್ಮನ್ನು ತುಂಬು ಹೃದಯದಿಂದ ಆಹ್ವಾನಿಸುತ್ತಿದ್ದೇವೆ..."

ಮನೆಗೆ ಆಗಮಿಸುವಂತೆ ಕರೆಯುವ ಕರೆಯೋಲೆ ಎಷ್ಟೊಂದು ಸುಂದರವಾಗಿದೆ ಅಲ್ವಾ? ಹೀಗೂ ಗೃಹಪ್ರವೇಶಕ್ಕೆ ಕರೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಕ್ಕೆ ಶಿಕ್ಷಕ ಸಂತೋಷ್‌ಕುಮಾರ್‌ಗೆ ಹ್ಯಾಟ್ಸಾಫ್... [ಬುಲ್ ಬುಲ್ ಹಕ್ಕಿ ಗೂಡು ಮತ್ತು ಮನೆ]

English summary
A teacher of Mysuru has created an unique invitation for the house warming ceremony. He says, we all dream of constructing a house to spend rest of our life in it. What has he said in the invitation? Read this story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X