ಭೂಗತ ಪಾತಕಿ ರವಿಪೂಜಾರಿಯಿಂದ ಸಾ.ರಾ. ಮಹೇಶ್ ಗೆ ಬೆದರಿಕೆ?

Posted By:
Subscribe to Oneindia Kannada

ಮೈಸೂರು ನವೆಂಬರ್ 24 : 2018ರ ಚುನಾವಣೆಯಲ್ಲಿ ಕೆ.ಅರ್.ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸದಂತೆ ಶಾಸಕ ಸಾ.ರಾ. ಮಹೇಶ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಶಾಸಕ ಸಾ.ರಾ. ಮಹೇಶ್ ಅವರು ತಮ್ಮ ಶುಕ್ರವಾರ ಮೈಸೂರಿನ ಮನೆಯಲ್ಲಿದ್ದಾಗ ಮೊಬೈಲ್ ಗ ವಿದೇಶದ ಕರೆಬಂದಿದೆ ಅದರಲ್ಲಿ ನಾನು ರವಿ ಪೂಜಾರಿ, ಯಾವುದೇ ಕಾರಣಕ್ಕೂ 2018ರ ಚುನಾವಣೆಯಲ್ಲಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡದಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Underworld Don Ravi Pujari threats MLA Sa Ra Mahesh

ಒಂದು ವೇಳೆ ಸ್ಪರ್ಧೆ ಮಾಡಿದರೆ ನಿಮ್ಮ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಈ ಸಂಬಂಧ ಸಾ.ರಾ. ಮಹೇಶ್ ಅವರು ಮೈಸೂರು ನಗರ ಪೊಲೀಸ್ ಕಮಿಷನರ್ ಅವರನ್ನು ಬೇಟಿ ಮಾಡಿ ದೂರು ದಾಖಲಿಸಿದ್ದಾರೆ.

ರವಿ ಪೂಜಾರಿ ಈಗಾಗಲೇ ಭೂಗತನಾಗಿದ್ದುಕೊಂಡು ಡೀಲ್ ಕುದುರಿಸುತ್ತಿದ್ದು, ಶಿವಮೊಗ್ಗದ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿ 25 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಇದೀಗ ಸಾ.ರಾ.ಮಹೇಶ್ ಅವರಿಗೆ ಬೆದರಿಕೆ ಕರೆ ಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MLA from KR Nagar of Mysuru has filed complaint with commissioner of Mysuru against underworld don Ravi pujari that he threatened him not to contest in the upcoming state assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ