ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂಚನೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ

ನಕಲಿ ಗುರುತಿನ ಪತ್ರಗಳನ್ನು ಮಾಡಲು ಸಹಕರಿಸಿದ ಇಬ್ಬರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 21 : ಮೈಸೂರಿನಲ್ಲಿ ವ್ಯಕ್ತಿಯೋರ್ವರಿಂದ ರೈಲ್ವೆ ಇಲಾಖೆಯಲ್ಲಿ ನಿಮ್ಮ ಮಗನಿಗೆ ಕೆಲಸ ಕೊಡಿಸುವುದಾಗಿ 2.80ಲಕ್ಷ ರೂ. ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಾ.10ರಂದು ಬಂಧಿಸಿದ್ದಾರೆ. ಬಂಧಿತನನ್ನು ಹಾಸನ ಮೂಲದ ಪ್ರೀತಂ ಅಲಿಯಾಸ್ ಸಾಜಿದ್ ಖಾನ್ ಎಂದು ಹೇಳಲಾಗಿತ್ತು. ಇದೀಗ ನಕಲಿ ಗುರುತಿನ ಪತ್ರಗಳನ್ನು ಮಾಡಲು ಸಹಕರಿಸಿದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹಾಸನದ ವಿಜಯ್, ಸಕಲೇಶಪುರದ ಕೀರ್ತಿ ಎಂದು ಗುರುತಿಸಲಾಗಿದೆ. ವಿಜಯ್ ಬಿಬಿಎಂ ಮುಗಿಸಿ ಆಡಿಟರ್ ಹತ್ತಿರ ಕಾರ್ಯನಿರ್ವಹಿಸುತ್ತಿದ್ದ. ಕೀರ್ತಿ ಪದವಿ ಪೂರೈಸಿದ್ದ ಎನ್ನಲಾಗಿದೆ.[ಉದಯಗಿರಿಯಲ್ಲಿ ಯುವಕನ ಬರ್ಬರ ಕೊಲೆ]

Two men arrested in Mysuru in froud case

ಪ್ರೀತಂ ಅಲಿಯಾಸ್ ಸಾಜಿದ್ ಖಾನ್ ಗೆ ಮೂರನೆ ವ್ಯಕ್ತಿಯಿಂದ ಇವರಿಬ್ಬರ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತ್ತು. 2014ರಲ್ಲಿ ಈತನಿಗೆ ಕೀರ್ತಿ ಗುರುತಿನ ಪತ್ರಗಳನ್ನು ತಾನೇ ಮಾಡಿಕೊಡುತ್ತಿದ್ದ. ಬೇರೆ ಯಾರದೋ ಕಾರ್ಡ್ ಗಳಲ್ಲಿರುವ ಆಲೋಗ್ರಾಂಗಳನ್ನು ತೆಗೆದು ಪ್ರೀತಂ ಅಲಿಯಾಸ್ ಸಾಜಿದ್ ಖಾನ್ ಗೆ ಬೇರೆ ಹೆಸರಿನಲ್ಲಿ ಗುರುತಿನ ಪತ್ರ ಮಾಡಿಕೊಡುತ್ತಿದ್ದ. ಆದರೆ ಆಲೋ ಗ್ರಾಂ ಪರೀಕ್ಷಿಸಿದಾಗ ಅದು ಬೇರೆಯವರದ್ದೇ ಆಗಿರುತ್ತಿತ್ತು.[ಮೈಸೂರಿನಲ್ಲಿ ಹೆತ್ತಕೂಸಿನ ಕತ್ತು ಹಿಸುಕಿದಳು ನಿರ್ದಯಿ ತಾಯಿ]

ಈ ಕುರಿತಂತೆ ಬೆಂಗಳೂರಿನ ಹೆಬ್ಬುಗೋಡಿಯಲ್ಲೂ ದೂರು ದಾಖಲಾಗಿತ್ತು. ಪ್ರೀತಂ ಅಲಿಯಾಸ್ ಸಾಜಿದ್ ಖಾನ್ ನೀಡಿದ ಹೇಳಿಕೆಯಂತೆ ಇದೀಗ ಕೆ.ಆರ್.ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪತ್ತೆ ಕಾರ್ಯ ನಡೆದಿದ್ದು, ಲಕ್ಷ್ಮಿನಾರಾಯಣ, ಸಿದ್ದರಾಜು ಪಾಲ್ಗೊಂಡಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಕಂಪ್ಯೂಟರ್, ಲ್ಯಾಪ್ ಟಾಪ್, ಪ್ರಿಂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅತ್ತೆ ಕೊಲೆ ಯತ್ನ ಸೋದರಳಿಯ ಬಂಧನ

ಸೋದರತ್ತೆಯ ಕೊಲೆಗೆ ಯತ್ನಿಸಿದ ಅಳಿಯನಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 7ವರ್ಷ ಕಾರಾಗೃಹವಾಸ ಹಾಗೂ 10ಸಾವಿರ ರೂ. ದಂಡ ವಿಧಿಸಿದೆ.[ತಂದೆಯ ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದ ಮಗನಿಗೆ ಜೀವಾವಧಿ ಶಿಕ್ಷೆ]

ಶಿಕ್ಷೆಗೆ ಒಳಗಾದವನನ್ನು ಪಡುವಾರಹಳ್ಳಿ (ವಿನಾಯಕನಗರ) ಎರಡನೇ ಕ್ರಾಸ್ ನಿವಾಸಿ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

Two men arrested in Mysuru in froud case

ಈತ ತನ್ನ ಸೋದರತ್ತೆ ನಾಗಮ್ಮ ಎಂಬವರ ಕೊಲೆಗೆ ಯತ್ನಿಸಿದ್ದ. ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ಜಿ.ಎಂ ಪಾಟೀಲ ಈ ಆದೇಶ ನೀಡಿದ್ದಾರೆ. ನಾಗಮ್ಮ ಮತ್ತು ಶ್ರೀಕಾಂತ್ ತಂದೆ ಪುಟ್ಟರಾಜು ಅಕ್ಕ-ತಮ್ಮ ಎರಡೂ ಕುಟುಂಬಗಳ ನಡುವಿನ ಆಸ್ತಿಯ ವಿಚಾರವಾಗಿ ವೈಷಮ್ಯವಿತ್ತು ಎನ್ನಲಾಗಿದೆ.[ಮೈಸೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ]

ಟಿಪ್ಪರ್ ಡಿಕ್ಕಿ: ಅಪರಿಚಿತ ವ್ಯಕ್ತಿ ಸಾವು

ಟಿಪ್ಪರ್ ಡಿಕ್ಕಿಯಾದ ಪರಿಣಾಮ ಅಪರಿಚಿತ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಮಂಡ್ಯಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಟೋಲ್ ಬಳಿ ಸುಮಾರು ಮೂವತ್ತು ವರ್ಷದ ವ್ಯಕ್ತಿ.ಯೋರ್ವ ಟಿಪ್ಪರ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಮೃತನ ವಿವರ ತಿಳಿದುಬಂದಿಲ್ಲ. ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ

ಜೀವನದಲ್ಲಿ ಜಿಗುಪ್ಸೆ ಹೊಂದಿದ ವ್ಯಕ್ತಿಯೋರ್ವ ಲಾಡ್ಜ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.[ಮೈಸೂರಿನಲ್ಲಿ ಅಜ್ಜಿ-ತಾತನ ಕೊಲ್ಲಲು ಮನೆಗೆ ಬೆಂಕಿಯಿಟ್ಟ ಮೊಮ್ಮಗಳು!]

ನೇಣಿಗೆ ಶರಣಾದವನನ್ನು ಚಾಮರಾಜನಗರ ಜಿಲ್ಲೆ ಮಳ್ಳಹಳ್ಳಿಯ ಮಹದೇವಸ್ವಾಮಿ ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಪಿಕಾ ಲಾಡ್ಜ್ ನಲ್ಲಿಯೇ ಆತ ನೇಣಿಗೆ ಶರಣಾಗಿದ್ದಾನೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Two men arrested in Mysuru in froud case

ವಾಹನಾಪಘಾತ: ಸೈಕಲ್ ಸವಾರ ಸಾವು

ದಿನಪತ್ರಿಕೆಗಳನ್ನು ಮನೆಮನೆಗೆ ಹಾಕಲು ಸೈಕಲ್ ಮೇಲೆ ತೆರಳುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಮುಂಜಾನೆ ಮೈಸೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಲಷ್ಕರ್ ಮೊಹಲ್ಲಾ ನಿವಾಸಿ ಚಂದ್ರು ಅಲಿಯಾಸ್ ಚಂದ್ರಶೇಖರ್ (61) ಎಂದು ಗುರುತಿಸಲಾಗಿದೆ. ಇವರು ಎಂದಿನಂತೆ ಮನೆಮನೆಗೆ ಹಾಕಲು ಕೆ.ಆರ್.ವೃತ್ತದಿಂದ ದಿನಪತ್ರಿಕೆಗಳನ್ನು ಸೈಕಲ್ ಮೂಲಕ ಕೆ.ಟಿ.ಸ್ಟ್ರೀಟ್ ಕಡೆ ಕೊಂಡೊಯ್ಯುತ್ತಿದ್ದರು.

ಈ ವೇಳೆ ಅಪರಿಚಿತ ವಾಹನವೊಂದು ಅವರ ಸೈಕಲ್ ಗೆ ಗುದ್ದಿದ್ದು, ಅವರು ನೆಲಕ್ಕುರುಳಿದ ಪರಿಣಾಮ ತಲೆಗೆ ಏಟಾಗಿ ತೀವ್ರ ರಕ್ತಸ್ರಾವವುಂಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದೆ.
ಹತ್ತಿರದಲ್ಲಿಯೇ ಅಳವಡಿಸಲಾದ ಸಿಸಿಕ್ಯಾಮರಾ ಫೂಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣಾಧೀನ ಕೈದಿ ಸಾವು

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ವಿಚಾರಣಾಧೀನ ಕೈದಿಯೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತ ಕೈದಿಯನ್ನು ಕುಮಾರ್ (49) ಎಂದು ಗುರುತಿಸಲಾಗಿದೆ. ಈತ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದ ಕೊಲೆ ಕೇಸಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ನ್ಯಾಯಾಂಗ ಬಂಧನದಲ್ಲಿದ್ದ ಎನ್ನಲಾಗಿದೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಈತನ ಸಮಸ್ಯೆ ಕಳೆದ ರಾತ್ರಿ ಉಲ್ಬಣಿಸಿದ ಪರಿಣಾಮ ಜೈಲಿನಲ್ಲೇ ಸಾವನ್ನಪ್ಪಿದ್ದಾನೆ.

ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

English summary
Two men arrested in Mysuru in froud case. Here sre few crime news took place in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X