ಮೈಸೂರು : ರಸ್ತೆ ಅಪಘಾತಕ್ಕೆ ಎರಡು ಬಲಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 23 : ಕೆಎಸ್ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟವರನ್ನು ದೇವನಾಂಪ್ರಿಯ (26), ಅಕ್ಬರ್ (34) ಎಂದು ಗುರುತಿಸಲಾಗಿದೆ. ಎಚ್.ಡಿ.ಕೋಟೆ ರಸ್ತೆಯ ಅಜಾದ್‍ನಗರ ಮತ್ತು ಹಂಚ್ಯಾ ಗ್ರಾಮಗಳ ನಡುವೆ ಶನಿವಾರ ಮಧ್ಯರಾತ್ರಿ ಈ ಅಪಘಾತ ನಡೆದಿದೆ. ಅಕ್ಬರ್ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. [ಕರಾಳ ಶುಕ್ರವಾರ, ಅಪಘಾತಕ್ಕೆ 18 ಜನರು ಬಲಿ]

road accident

ಕೆಎ 45 ಎಂ 4446 ನಂಬರ್‌ನ ಸ್ವಿಫ್ಟ್ ಕಾರಿನಲ್ಲಿ ಅಕ್ಬರ್ ಕೆ.ಆರ್.ನಗರಕ್ಕೆ ಬಂದಿದ್ದರು. ಹುಣಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕೆ.ಆರ್.ನಗರಕ್ಕೆ ಹಿಂತಿರುಗುವಾಗ ಅಪಘಾತ ನಡೆದಿದೆ. ಶುಂಠಿ ತುಂಬಿಕೊಂಡು ಬರುತ್ತಿದ್ದ ಲಾರಿ ಮೊದಲು ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ನಿಯಂತ್ರಣ ತಪ್ಪಿದ ಕಾರಿಗೆ ಎದುರಿನಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದ ದೇವನಾಂಪ್ರಿಯ ಮತ್ತು ಅಕ್ಬರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two persons were killed on the spot when their car collided head-on with a KSRTC bus in Hunusur, Mysuru district on Saturday, midnight. Hunsur rural police registered the case.
Please Wait while comments are loading...