ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ಹೊರೆ ತಾಳಲಾರದೆ ಮೈಸೂರಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 06: ಸಾಲಬಾಧೆಯಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.

ಹಳೇ ಮೈಸೂರು ವ್ಯಾಪ್ತಿಯಲ್ಲಿ ದಿನಕ್ಕೊಂದು ಆತ್ಮಹತ್ಯೆ ಸುದ್ದಿಹಳೇ ಮೈಸೂರು ವ್ಯಾಪ್ತಿಯಲ್ಲಿ ದಿನಕ್ಕೊಂದು ಆತ್ಮಹತ್ಯೆ ಸುದ್ದಿ

ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಪುತ್ರ ದಿನೇಶ್(26), ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ ಗ್ರಾಮದ ಚಲುವರಾಜು ಪುತ್ರ ಚನ್ನಕೇಶವ (26) ಆತ್ಮಹತ್ಯೆ ಮಾಡಿಕೊಂಡ ರೈತರು.

Two farmers commit suicide after consuming insecticide in Mysuru

ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಪುತ್ರ ದಿನೇಶ್ ತನ್ನ ಎರಡು ಎಕರೆ ಜಮೀನಿನಲ್ಲಿ ತಂಬಾಕು ಬೆಳೆಗಾಗಿ ಸಾಲಿಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ತಂಬಾಕು ಬೆಳೆ ಹದ ಮಾಡಲು ಮತ್ತು ತಂಬಾಕು ಬ್ಯಾರಲ್ ಗಾಗಿ 2ಲಕ್ಷ ಸಾಲ, ಕೈಸಾಲ 3 ಲಕ್ಷ ಮಾಡಿದ್ದನು. ಕಳೆದ ವಾರದಿಂದ ತಂಬಾಕು ಬೆಲೆ ಕುಸಿದ ಹಿನ್ನಲೆಯಲ್ಲಿ ಮನನೊಂದು ತನ್ನ ಜಮೀನಿನಲ್ಲಿ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದು, ಹೆಚ್ಚಿನ ಚಿಕ್ಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸಿಎಂ ಸಿದ್ದರಾಮಯ್ಯ ತವರಲ್ಲಿ ನಿಂತಿಲ್ಲ ರೈತರ ಆತ್ಮಹತ್ಯೆಸಿಎಂ ಸಿದ್ದರಾಮಯ್ಯ ತವರಲ್ಲಿ ನಿಂತಿಲ್ಲ ರೈತರ ಆತ್ಮಹತ್ಯೆ

ಇನ್ನೊಬ್ಬ ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ ಗ್ರಾಮದ ಚಲುವರಾಜು ಎಂಬುವರ ಪುತ್ರ ಚನ್ನಕೇಶವ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ರೇಷ್ಮೆ ಬೆಳಗಾಗಿ ಕೊಳವೆ ಬಾವಿ ಕೊರೆಯಿಸಿದ್ದು, ನೀರು ಬರದ ಕಾರಣ ಮತ್ತೆರಡು ಕೊಳವೆ ಬಾವಿ ಕೊರೆಯಿಸಿದ್ದಾರೆ.

ಕೈಕೊಟ್ಟ ಶುಂಠಿ ಬೆಳೆ, ಕಂಗಾಲದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಕೈಕೊಟ್ಟ ಶುಂಠಿ ಬೆಳೆ, ಕಂಗಾಲದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

ಆದರೆ ಅದರಲ್ಲೂ ನೀರು ಬಂದಿರಲಿಲ್ಲ, ಕೊಳವೆ ಬಾವಿ ಕೊರೆಯಿಸಲು ಕೈಸಾಲವಾಗಿ ಮೂರು ಲಕ್ಷ ರೂ ಸಾಲ ಮಾಡಿದ್ದನು. ಅಲ್ಲದೆ, ರೇಷ್ಮೆ ನಾಟಿಗಾಗಿ ಹೊಸಅಗ್ರಹಾರ ಸಹಕಾರ ಸಂಘದಲ್ಲಿ 50 ಸಾವಿರ ಸಾಲ ಮಾಡಿದ್ದನು. ಆದರೆ ಕೊಳವೆಬಾವಿಗೆ ಮಾಡಿದ ಸಾಲದಿಂದ ಚಿಂತೆಗೀಡಾದ ಈತ ಮನನೊಂದು ಜಮೀನಿನಲ್ಲಿ ಟೊಮೇಟೋ ಬೆಳೆಗೆ ಕ್ರೀಮಿನಾಶಕ ಔಷಧಿ ಸಿಂಪಡಿಸುವಾಗ ಅದೇ ಔಷಧಿಯನ್ನು ತಾನು ಸೇವಿಸಿದ್ದಾನೆ.

ಸಾಲ ಮನ್ನಾಕ್ಕೆ ಮೋದಿ, ಬಿಎಸ್‌ವೈಗೆ ಪತ್ರ ಬರೆದು ರೈತ ಆತ್ಮಹತ್ಯೆಸಾಲ ಮನ್ನಾಕ್ಕೆ ಮೋದಿ, ಬಿಎಸ್‌ವೈಗೆ ಪತ್ರ ಬರೆದು ರೈತ ಆತ್ಮಹತ್ಯೆ

ಇದರಿಂದ ಅಸ್ವಸ್ಥಗೊಂಡು ಒದ್ದಾಡುತ್ತಿದ್ದುದನ್ನು ಪಕ್ಕದ ಜಮೀನಿನವರು ನೋಡಿ ಕುಟುಂಬದವರಿಗೆ ತಿಳಿಸಿದ್ದು, ಕೂಡಲೇ ಹೆಚ್ಚಿನ ಚಿಕ್ಕಿತ್ಸೆಗಾಗಿ ಕೆ.ಆರ್.ನಗರ ತಾಲೂಕು ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕ್ಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮೃತಪಟ್ಟಿದ್ದಾನೆ. ಮೃತ ಚನ್ನಕೇಶವನ ತಾಯಿ ಶಾಂತಮ್ಮ ನೀಡಿದ ದೂರಿನ ಮೇರೆಗೆ ಸಾಲಿಗ್ರಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Two farmers commit suicide after consuming insecticide. The incident took place in KR Nagar, Mysuru. Both farmers were suffering by financial burden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X