ರಸ್ತೆ ಪಕ್ಕ ಟೀ ಕುಡಿಯುತ್ತಿದ್ದವರ ಪ್ರಾಣ ತೆಗೆದ ಮರ

Posted By:
Subscribe to Oneindia Kannada

ಮೈಸೂರು, ಏಪ್ರಿಲ್ 11 : ಟೀ ಕುಡಿಯಲು ನಿಂತಿದ್ದ ಇಬ್ಬರು ವ್ಯಾಪಾರಿಗಳ ಮೇಲೆ ಅರಳಿ ಮರವೊಂದು ಬಿದ್ದ ಪರಿಣಾಮ ಸ್ಥಳದಲ್ಲೇ ಅವರು ಸಾವನ್ನಪ್ಪಿದ ಘಟನೆ ಘಟನೆ ಹುಣಸೂರಿನ ಹೆಚ್.ಡಿ ಕೋಟೆ ರಸ್ತೆಯಲ್ಲಿರುವ ಆಜಾದ್ ನಗರದಲ್ಲಿ ನಡೆದಿದೆ.

ಹುಣಸೂರು ಪಟ್ಟಣದ ಕೊಯಮತ್ತೂರು ಕಾಲೋನಿಯ ಮೂವರು ದ್ವಿಚಕ್ರ ವಾಹನಗಳಲ್ಲಿ ಹಳ್ಳಿಗಳ ಮೇಲೆ ಬಟ್ಟೆ ವ್ಯಾಪಾರಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯ ಟೀ ಕುಡಿಯಲು ನಿಂತಿದ್ದರು. ಆಗ ಜೋರಾದ ಗಾಳಿಗೆ ಒಣಗಿದ ಅರಳಿ ಮರ ಬುಡ ಸಮೇತ ಬಟ್ಟೆ ವ್ಯಾಪಾರಿಗಳ ಮೇಲೆ ಬಿದ್ದಿದೆ.

Two dies as tree fell on them at road side in Hunasur

ಮರ ಮೈಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ನಜೀಬ್‌ ಎಂಬಾನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನ ಮಹೇಶ(40), ಪ್ರಕಾಶ(38) ಎಂದು ಗುರುತಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two cloth merchants died on spot when a Pipale tree fell on them while they were having tea together at a road side tea shop on Tuesday (11th April, 2017). The incident happend in Azad Nagar of Hunasur.
Please Wait while comments are loading...