ಮೈಸೂರಿನಲ್ಲಿ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 4: ಮೈಸೂರು-ಬೆಂಗಳೂರು ಮಾರ್ಗದ ಬೆಳವಾಡಿ ಬಳಿ ಅಪರಿಚಿತ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಯುವಕನ ವಯಸ್ಸು ಸುಮಾರು 25 ರಿಂದ 30 ಎಂದು ಅಂದಾಜಿಸಲಾಗಿದೆ. ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ಕಾರಣ ತಲೆ ಛಿದ್ರವಾಗಿದೆ. ಈತನ ಕುರಿತು ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈತನ ಎತ್ತರ 5.6 ಇದ್ದು, ಬ್ಲಾಕ್ ಟ್ರ್ಯಾಕ್ ಪ್ಯಾಂಟ್ ಮತ್ತು ಬಿಳಿಯ ಬಣ್ಣದ ಟೀ ಶರ್ಟ್ ಧರಿಸಿದ್ದಾನೆ. ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಾರಸುದಾರರಿದ್ದಲ್ಲಿ ಮೈಸೂರು ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದು.[ಪ್ರೀತಿಸಿದ ಯುವತಿಯನ್ನು ಕೊಂದು, ಯುವಕ ಆತ್ಮಹತ್ಯೆ]

Two crime suicide and death of a civil contract

ಸಿವಿಲ್ ಕಂಟ್ರಾಕ್ಟರ್ ಸಾವು

ಮೈಸೂರು: ಸಿವಿಲ್ ಕಂಟ್ರಾಕ್ಟರ್ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋಬ್ಬರು ತನ್ನ ರೂಮಿನಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.[ಕೆಆರ್ ಪೇಟೆ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆ]

ಬೆಂಗಳೂರು ಮೂಲದ ಶಿವಕುಮಾರ್(45) ಎಂಬವರೇ ಸಾವಿಗೀಡಾದ ವ್ಯಕ್ತಿ. ಮೈಸೂರಿನ ವಿದ್ಯಾವರ್ಧಕ ಬಳಿ ಬಾಡಿಗೆ ರೂಮಿನಲ್ಲಿ ವಾಸವಿದ್ದ ಇವರು ತನ್ನ ಮನೆಯವರಿಗೆ ಜನವರಿ 1 ರಂದು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದರು. ಜನವರಿ 2 ರಂದು ಇವರಿಂದ ಯಾವುದೇ ಕರೆಯೂ ಬಂದಿರಲಿಲ್ಲ. ಮನೆಯಿಂದ ಬಂದಿರುವ ಕರೆಯನ್ನೂ ಇವರು ಸ್ವೀಕರಿಸದ ಕಾರಣ ಅನುಮಾನಗೊಂಡು ಇವರು ವಾಸಿಸುತ್ತಿದ್ದ ರೂಮಿನ ಬಳಿ ಧಾವಿಸಿ ಬಂದು ನೋಡಿದಾಗ ಕೈಯ್ಯಲ್ಲಿ ಸಿಗರೇಟ್ ಹಿಡಿದ ಸ್ಥಿತಿಯಲ್ಲಿಯೇ ಇವರು ಸಾವನ್ನಪ್ಪಿದ್ದಾರೆ.

ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two crime are there, one is Man caught the train to commit suicide other one is The death of a civil contract
Please Wait while comments are loading...