ಹೈದರಾಬಾದ್-ಮೈಸೂರು ನಡುವೆ ಟ್ರೂ ಜೆಟ್ ವಿಮಾನ ಹಾರಾಟ

Posted By: Gururaj
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 12 : ಹೈದರಾಬಾದ್-ಮೈಸೂರು ನಡುವೆ ಟ್ರೂ ಜೆಟ್ ವಿಮಾನ ಹಾರಾಟ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ಸೆ.20ರಿಂದ ಎರಡು ನಗರಗಳ ನಡುವೆ ವಿಮಾನ ಸಂಪರ್ಕ ಕಲ್ಪಿಸಲಾಗುತ್ತದೆ.

ಸೆ. 15 ರಿಂದ ಮೈಸೂರಿನಿಂದ ವಿಮಾನಗಳ ಹಾರಾಟ: ಪ್ರತಾಪ್ ಸಿಂಹ

ಟ್ರೂ ಜೆಟ್ ಮೊದಲು ಮೈಸೂರ-ಚೆನ್ನೈ ನಡುವೆ ವಿಮಾನ ಸಂಪರ್ಕ ಕಲ್ಪಿಸಲು ಮುಂದಾಗಿತ್ತು. ಆದರೆ, ಈಗ ಆ ಯೋಜನೆಯನ್ನು ಹೈದರಾಬಾದ್ ತನಕ ವಿಸ್ತರಣೆ ಮಾಡಲಾಗಿದೆ.

Trujet will connect Mysuru-Hyderabad from September 20, 2017

72 ಸೀಟುಗಳ ವಿಮಾನ ಸೆ.20ರಿಂದ ಹೈದರಾಬಾದ್-ಚೆನ್ನೈ-ಮೈಸೂರು ನಡುವೆ ಹಾರಾಟ ನಡೆಸಲಿದೆ. ಉಡಾನ್ ಯೋಜನೆಯಡಿ ಈ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ. ನವೆಂಬರ್ ವೇಳೆಗೆ ಇಂಡಿಗೋ ಸಂಸ್ಥೆ ಪುಣೆ-ಮೈಸೂರು ನಡುವೆ ವಿಮಾನ ಸಂಪರ್ಕ ಕಲ್ಪಿಸಲಿದೆ.

ವೇಳಾಪಟ್ಟಿ : ಮಧ್ಯಾಹ್ನ 3.30ಕ್ಕೆ ಹೈದರಾಬಾದ್‌ನಿಂದ ಹೊರಡುವ ವಿಮಾನ ಚೆನ್ನೈ ಮಾರ್ಗವಾಗಿ ಸಂಜೆ 6.40ಕ್ಕೆ ಮೈಸೂರು ತಲುಪಲಿದೆ. ಸಂಜೆ 7.05ಕ್ಕೆ ಮೈಸೂರಿನಿಂದ ಹೊರಡುವ ವಿಮಾನ ಚೆನ್ನೈ ಮೂಲಕ ರಾತ್ರಿ 10.15ಕ್ಕೆ ಹೈದರಾಬಾದ್ ತಲುಪಲಿದೆ.

ಮೈಸೂರಲ್ಲಿ ವಿಮಾನ ಹಾರಾಟ... ಮತ್ತೆ ಚಿಗುರಿದ ಕನಸು!

ದರ ವಿವರ : ಹೈದರಾಬಾದ್-ಚೆನ್ನೈ-ಮೈಸೂರು ನಡುವೆ ಪ್ರಯಾಣಿಸುವವರು 3,838 ರೂ. ಪಾವತಿ ಮಾಡಬೇಕು. ಮೈಸೂರು-ಚೆನ್ನೈ-ಹೈದರಾಬಾದ್ ಮಾರ್ಗಕ್ಕೆ 3,816 ರೂ. ದರ ನಿಗದಿ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hyderabad based Trujet will connect Mysuru-Hyderabad from September 20, 2017. Flight will connecting Chennai on the way of Hyderabad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ