ದಸರೆಯಲ್ಲಿ ಟ್ರಿಣ್ – ಟ್ರೀಣ್ ತಂಡದಿಂದ ಹೊಸ ಪ್ಯಾಕೇಜ್

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 16: ಟ್ರಿಣ್- ಟ್ರಿಣ್ ಸಾರ್ವಜನಿಕ ಸೈಕಲ್ ಸೇವೆ ದಸರಾ ಮಹೊತ್ಸವದಲ್ಲಿ ಹೆಚ್ಚಿನ ಪ್ರವಾಸಿಗರಿಗೆ ಹತ್ತಿರವಾಗಲಿದೆ.

ಪ್ರವಾಸಿಗರಿಗಾಗಿ ದಸರೆಗೆ ಟ್ರಿಣ್ -ಟ್ರಿಣ್ ಟೀಂನಿಂದ ಹೊಸ ಪ್ಲಾನ್!

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಿ. ರಂದೀಪ್, ದಸರೆ ವೇಳೆ ಮೈಸೂರಿನ ಕೆಲವು ಪ್ರಮುಖ ಪ್ರವಾಸಿತಾಣಗಳ ಬಳಿ ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಪ್ರವಾಸಿ ಸ್ನೇಹಿ ವಾತಾವರಣ ನಿರ್ಮಿಸಲು ವಾಹನ ಸಂಚಾರ ಮುಕ್ತ ವಲಯ ಮಾಡಲು ಪ್ರಯತ್ನ ನಡೆಸಲಾಗಿದೆ.

Trin Trin service in Mysuru Dasara

ಇದರ ಭಾಗವಾಗಿ ಟ್ರಣ್-ಟ್ರಿಣ್ ಪ್ರವಾಸಿಗರಿಗೆ ನೆರವಾಗಲಿದೆ, ಸರಳ ಹಾಗೂ ಅಲ್ಪಾವಧಿ ನೊಂದಣಿ ವ್ಯವಸ್ಥೆ ಮಾಡಲಾಗಿದೆ, ಒಂದು ದಿನ, ಮೂರು ದಿನ ಮತ್ತು ಒಂದು ವಾರದ ನೊಂದಣಿ ಕಾರ್ಡ್ ಪ್ರವಾಸಿಗರಿಗೆ ದೊರಯಲಿದೆ. ಹೆಚ್ಚಿನ ಸೈಕಲ್ ಸೇವೆ ಒದಗಿಸಲು ಅರಮನೆ ಬಲರಾಮ, ವರಾಹಾ ಮತ್ತು ಇತರ ಪ್ರಮುಖ ಸೈಕಲ್ ನಿಲ್ದಾಣಗಳ ಬಳಿ ಹೆಚ್ಚುವರಿ ಸೈಕಲ್ ಇಡಲಾಗುವುದು ಎಂದು ತಿಳಿಸಿದರು.

ಸೈಕಲ್ ಪಡೆಯಲು ಗುರುತಿನ ಚೀಟಿ ಕಡ್ಡಾಯ ಇರಲಿದೆ, ಒಂದು ದಿನದ ಅಲ್ಪಾವಧಿ ಪಾಸಿಗಾಗಿ ರೂ 50 ನಿಗದಿಪಡಿಸಲಾಗಿದೆ, ಮೂರು ದಿನದ ಪಾಸಿಗಾಗಿ ರೂ. 150 ನಿಗದಿಪಡಿಸಲಾಗಿದೆ ಮತ್ತು ಒಂದು ವಾರದ ಪಾಸಿಗಾಗಿ ರೂ 150 ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಟ್ರಿಣ್ -ಟ್ರಿಣ್ ಸೈಕಲ್ ಪ್ರೋತ್ಸಾಹಿಸಲು ಹೋಟೇಲ್ ಗಳಿಗೆ ನಿಗದಿತ ದರದಲ್ಲಿ ಸ್ಮಾರ್ಟ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಅವರು ತಕ್ಷಣವೇ ಅದನ್ನು ಪ್ರವಾಸಿಗರಿಗೆ ಒದಗಿಸಬಹುದಾಗಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dasara festival being the biggest public event in the state which draws huge crowd and tourists to the city, the Mysuru district administration has come up with few new initiatives for ‘Trin-Trin’ services during the Dasara celebrations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ