ಪ್ರವಾಸಿಗರಿಗಾಗಿ ದಸರೆಗೆ ಟ್ರಿಣ್ –ಟ್ರಿಣ್ ಟೀಂನಿಂದ ಹೊಸ ಪ್ಲಾನ್!

Posted By:
Subscribe to Oneindia Kannada

ಮೈಸೂರು, ಜುಲೈ 28 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ಯ ಟ್ರಿಣ್ - ಟ್ರಿಣ್ ಶಬ್ದ ಕೇಳುತ್ತಿದ್ದು, ಜನರಲ್ಲಿಯೂ ಬಳಕೆಯ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ದಸರಾ ಸಂದರ್ಭ ಸಾಂಸ್ಕೃತಿಕ ನಗರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಟ್ರಿಣ್ -ಟ್ರಿಣ್ ಸಾರ್ವಜನಿಕ ಬೈಸಿಕಲ್ ಹಂಚಿಕೆ ಯೋಜನೆ ಕೆಲವೊಂದು ಹೊಸ ಸೌಲಭ್ಯಗಳನ್ನು ನೀಡಲು ಚಿಂತನೆ ನಡೆಸಿದೆ.

ಸಾಂಪ್ರದಾಯಿಕ ದಸರಾಕ್ಕೆ ಸಿದ್ಧವಾಯ್ತು ಸಾಂಸ್ಕೃತಿಕ ನಗರಿ

ಒಂದು ವಾರ ಅಥವಾ ಎರಡು ದಿನಗಳಿಗೆ ಮೈಸೂರಿಗೆ ಭೇಟಿ ಕೊಡುವವರಿಗೆ ಸೈಕಲ್ ಬಳಕೆಗೆ ಅವಕಾಶ ಕಲ್ಪಸಲು ಅಲ್ಪಾವಧಿ ಸದಸ್ಯತ್ವ ನೀಡಲು ನಿರ್ಧರಿಸಿದೆ. ಈಗ ಇರುವ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯಂತೆ ಆರಂಭದಲ್ಲಿ 250 ರೂ ಠೇವಣಿ ಸೇರಿದಂತೆ ಒಟ್ಟು 350 ರೂ ಪಾವತಿಸಿ ಸದಸ್ಯತ್ವ ಪಡೆದುಕೊಳ್ಳಬಹುದು.

Trin Trin scheme introducing some more facilities for Mysuru Dasara

ನಗರದಲ್ಲಿ ಒಂದೆರಡು ದಿನ ತಂಗುವವರು 350 ರೂ ಪಾವತಿಸಿ ಸೈಕಲ್ ಬಳಕೆಗೆ ಮುಂದಾಗುವ ಸಾಧ್ಯತೆ ಕಡಿಮೆ. ಆದ್ದರಿಂದ ರೂ 50 ಠೇವಣಿ ಪಾವತಿಸಿ ಕೆಲವು ದಿನಗಳಿಗೆ ಸೈಕಲ್ ಬಳಕೆಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ ಎಂದು ಟ್ರಿಣ್ ಟ್ರಿಣ್ ಯೋಜನೆಗೆ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಸಾಗರ್ ತಿಳಿಸಿದ್ದಾರೆ.

ಅಲ್ಪಾವಧಿ ಸದಸ್ಯತ್ವ ಪಡೆದವರು ಎಷ್ಟು ಗಂಟೆ ಸೈಕಲ್ ಬಳಸುವರೋ ಅದಕ್ಕೆ ಅನುಗುಣವಾಗಿ ಶುಲ್ಕ ಪಡೆದು ಉಳಿದು ಮೊತ್ತ ಹಿಂತಿರುಗಿಸಲಾಗುದು. ಸ್ಮಾರ್ಟ್ ಕಾರ್ಡ್ ಇಲ್ಲದೆಯೂ ಸೈಕಲ್ ಬಳಕೆಗೆ ಅವಕಾಶ ಮಾಡಿಕೊಡುವ ಯೋಜನೆಗೆ ಪಾಲಿಕೆ ಮತ್ತು ಜಿಲ್ಲಾಡಳಿತ ಜತೆ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು. ಪ್ರವಾಸಿಗರು ಟ್ರಿಣ್ -ಟ್ರಿಣ್ ಸೈಕಲ್ ಬಳಸುವಂತೆ ಪ್ರೋತ್ಸಾಹಿಸುವುದು ನಮ್ಮಉದ್ದೇಶ ಎಂದರು.
ದಸರಾ ವೇಳೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಕೇಂದ್ರಗಳನ್ನು ತೆರೆದು ಅಲ್ಪಾವಧಿ ಸದಸ್ಯತ್ವಕ್ಕೆ ಹೆಸರು ನೋಂದಾಯಿಸಲು ಅವಕಾಶ ಮಾಡಿಕೊಡಲಾಗುವುದು. ಈ ಕೇಂದ್ರಗಳನ್ನು ಎಲ್ಲೆಲ್ಲಿ ತೆರಯಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು.

ತಾತ್ಕಾಲಿಕ ಕೇಂದ್ರಗಳ ಸ್ಥಾಪನೆ: ನಗರದಲ್ಲಿ ಪ್ರಸ್ತುತ 49 ಡಾಕಿಂಗ್ ಕೇಂದ್ರಗಳಲ್ಲಿ ( ಸೈಕಲ್ ನಿಲುಗಡೆ ಕೇಂದ್ರ) ಸೈಕಲ್ ಗಳು ಸವಾರಿಗೆ ಲಭ್ಯ ಇವೆ. ದಸರಾ ವೇಳೆಗೆ ಬೇಡಿಕೆಗೆ ಅನುಗುಣವಾಗಿ ತಾತ್ಕಾಲಿಕ ಡಾಕಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ದಸರಾ ಬಳಿಕ ಟ್ರಿಣ್ - ಟ್ರಿಣ್ ಯೋಜನೆಯನ್ನು ನಗರದ ಇನ್ನಷ್ಟು ಕಡೆಗಳಿಗೆ ವಿಸ್ತರಿಸುವಂತೆ ಜಿಲ್ಲಾಡಳಿತ ಈಗಾಗಲೇ ಸೂಚಿಸಿದೆ. ಅಕ್ಟೋಬರ್ ಬಳಿಕ ಡಾಕಿಂಗ್ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದರು.

ಹೆಚ್ಚಾಯ್ತು ಬಳಕೆದಾರರ ಸಂಖ್ಯೆ:
ಇನ್ನು ಜಿಲ್ಲಾಡಳಿತ ಮತ್ತು ಮೈಸೂರು ಮಹಾನಗರ ಸಹಭಾಗಿತ್ವದಲ್ಲಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಇದುವರೆಗೆ 4100 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜೂನ್ 4 ರಂದು ಯೋಜನೆಗೆ ಚಾಲನೆ ನೀಡಿದ್ದರು. ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡ ಒಂದೇ ಒಂದು ಪ್ರಕರಣ ವರದಿಯಾಗದೇ ಇರುವುದು ಸಂತಸದ ಸಂಗತಿ. ಯೋಜನೆಯ ಯಶಸ್ಸಿಗೆ ಸಾರ್ವಜನಿಕರ ನೆರವು ಕೂಡ ಅಗತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Trin Trin, a public bicycle facility scheme in Mysuru district will introduce some more new facilities to the tourists on the occassion of Mysuru Dasara.
Please Wait while comments are loading...