ಮೈಸೂರಿನ ಟ್ರಿಣ್ ಟ್ರಿಣ್ ಗೆ ಮತ್ತೊಂದು ಪ್ರಶಸ್ತಿಯ ಮುಕುಟ

Posted By:
Subscribe to Oneindia Kannada

ಮೈಸೂರು, ನವೆಂಬರ್ , 2 : ಸ್ವಚ್ಛ ನಗರಿ ಕೀರ್ತಿಗೆ 2 ಬಾರಿ ಪಾತ್ರವಾಗಿರುವ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಮೈಸೂರು ಮಹಾನಗರ ಪಾಲಿಕೆ ಕಿರೀಟಕ್ಕೆ ಈಗ ಮತ್ತೊಂದು ಪ್ರಶಸ್ತಿಯ ಗರಿ ಸೇರಿದೆ.
ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಬಳಕೆ (ಪಿಬಿಎಸ್) ಯೋಜನೆ 'ಟ್ರಿಣ್ ಟ್ರಿಣ್'ಗೆ ದೇಶದಲ್ಲೇ ಅತ್ಯುತ್ತಮ 'ಪಬ್ಲಿಕ್ ಬೈಸಿಕಲ್ ಶೇರಿಂಗ್' ವ್ಯವಸ್ಥೆ ಎಂಬ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಈ ಪ್ರಶಸ್ತಿ ಪ್ರಕಟಿಸಿದೆ. ಮೈಸೂರಿನ ಪಿಬಿಎಸ್ ಅತ್ಯುತ್ತಮ ಎನ್‍ಎಂಟಿ ಯೋಜನೆ ಎಂದು ಮನ್ನಣೆ ಗಳಿಸಿದೆ. ತೆಲಂಗಾಣದ ಹೈದರಾಬಾದ್ ನಲ್ಲಿನ ಅಂತಾರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ನ.6ರಂದು ನಡೆಯಲಿರುವ 10ನೇ 'ಭಾರತದಲ್ಲಿ ನಗರ ಚಲನಶೀಲತೆ' ಸಮಾವೇಶ ಮತ್ತು ವಸ್ತು ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎಂಆರ್ ಟಿಎಸ್ ಉಪ ಕಾರ್ಯದರ್ಶಿ ವಿ.ಎಸ್.ಪಾಂಡೆ ತಿಳಿಸಿದ್ದಾರೆ.

ಬೆಂಗಳೂರಿಗೂ ಬರಲಿದೆ ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆ

ಕೇಂದ್ರದ ನಗರ ರಸ್ತೆ ಸಾರಿಗೆ ಇಲಾಖೆ ಪರಿಸರ ಸ್ನೇಹಿ ಯೋಜನೆಯನ್ನು ಮೈಸೂರಿನಲ್ಲಿ ಮೊದಲ ಬಾರಿಗೆ ಆರಂಭಿಸಲು ಉತ್ಸಾಹ ತೋರಿದ್ದರಿಂದ ಮೈಸೂರು ಜಿಲ್ಲಾಡಳಿತ ಮತ್ತು ಪಾಲಿಕೆ ಜಂಟಿಯಾಗಿ ಟ್ರಿಣ್ ಟ್ರಿಣ್ ಯೋಜನೆ ರೂಪಿಸಿ ನಗರ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿವೆ.

Tri Trin of Mysuru, the best public bicycle sharing system in India.

ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಮತ್ತು ತಪ್ಪಲು, ರೈಲ್ವೆ ನಿಲ್ದಾಣ, ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣ, ರಾಮಸ್ವಾಮಿ ವೃತ್ತ, ಆರ್‍ಟಿಓ ವೃತ್ತ, ಒಂಟಿಕೊಪ್ಪಲ್ ಆಕಾಶವಾಣಿ, ಸರಸ್ವತಿಪುರಂ ಅಗ್ನಿಶಾಮಕ ದಳ, ಬಲ್ಲಾಳ್ ವೃತ್ತ, ಮಿನಿ ವಿಧಾನಸೌಧ, ನಜರಬಾದ್ ಸೇರಿದಂತೆ ನಗರದ ಒಟ್ಟು 52 ಡಾಕಿಂಗ್ ಸೆಂಟರ್‍ ಗಳು ಸಾರ್ವಜನಿಕರ ಬಳಕೆಯಲ್ಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Trin Trin' a public bicycle sharing facility in Mysuru got new title. It has become the best public bicycle sharing system in India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ