ಮೈಸೂರು: ಅರಣ್ಯಾಧಿಕಾರಿಗಳ ಅನುಮತಿಯಿಲ್ಲದೆ ಮರ ಕತ್ತರಿಸಿದ ಪೊಲೀಸರು

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 13: ಅರಣ್ಯ ಅಧಿಕಾರಿಗಳ ಅನುಮತಿ ಪಡೆಯದೆಯೇ ಪೊಲೀಸರು ಮರಗಳನ್ನು ಕಟಾವು ಮಾಡಿದ ಘಟನೆ ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಸಿಆರ್ ಗ್ರೌಂಡ್ ನಲ್ಲಿ ನಡೆದಿದೆ.

ಮೈಸೂರಿಗೆ ಕಳೆನೀಡಿದ Rally for Rivers ಅಭಿಯಾನ

ಹಚ್ಚ ಹಸಿರ ಮರಗಳನ್ನು ಕಡಿದು ಲಾರಿಯಲ್ಲಿ ಸಾಗಿಸುತ್ತಿರುವುದನ್ನು ನೋಡಿದ ಪರಿಸರವಾದಿಗಳು, ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಈಗಾಗಲೇ ಸರಿಯಾಗಿ ಮಳೆ ಇಲ್ಲದೇ ಬಿಸಿಲಿನ ತಾಪಮಾನ ಜಾಸ್ತಿಯಾಗುತ್ತಿದೆ. ಅದು ಗೊತ್ತಿದ್ದರೂ ಮರಗಳನ್ನು ಕಡಿದು ಸಾಗಿಸಲು ಮುಂದಾಗುತ್ತಿರುವ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

Trees cut down by police dept without permission in Mysuru

ಪೊಲೀಸರಿಗೆ ಫೈರಿಂಗ್ ರೇಂಜ್ ನ್ನು ಮಾಡಿಕೊಡಲಾಗಿದ್ದು, ಅದರಲ್ಲಿರುವ ಮರಗಳನ್ನು ಕಟಾವು ಮಾಡಿಸಿದ್ದರು. ಆದರೆ ಕಾಡುಮರಗಳನ್ನು ಕಟಾವು ಮಾಡಿಸಲು ಅರಣ್ಯ ಇಲಾಖೆಯ ಅನುಮತಿ ಬೇಕು. ಯಾವುದೇ ಅನುಮತಿಯಿಲ್ಲದೇ ಮರಗಳನ್ನು ಕಡಿಯಲಾಗಿದ್ದು ಬುಧವಾರ ಮರ ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಪರಿಸರವಾದಿಗಳು ತಡೆದು ಹಿಡಿದಿದ್ದಾರೆ.ಅಲ್ಲದೇ ಈ ಸಂಬಂಧ ಪೋಲಿಸರ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Environmentalists have filed a complaint with the forest department against the police department for allegedly cutting down trees at the foot of Chamundi Hills, without prior permission from the officials of forest department.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ