ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಷಾಢ ಶುಕ್ರವಾರ : ಚಾಮುಂಡಿ ಬೆಟ್ಟಕ್ಕೆ ಸಂಚಾರ ನಿರ್ಬಂಧ

|
Google Oneindia Kannada News

ಮೈಸೂರು, ಜು. 2 : ಆಷಾಢ ಶುಕ್ರವಾರಗಳಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಉಂಟಾಗುವ ಸಂಚಾರ ದಟ್ಟಣೆ ಹಿನ್ನಲೆಯಲ್ಲಿ ಬೆಟ್ಟಕ್ಕೆ ವಾಹನಗಳ ಮಾರ್ಗಗಳನ್ನು ಬದಲಾವಣೆ ಮಾಡಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ನಗರ ಸಾರಿಗೆ ಬಸ್ಸುಗಳನ್ನು ಹೊರತು ಪಡಿಸಿ ಉಳಿದ ವಾಹನಗಳನ್ನು ಬೆಟ್ಟಕ್ಕೆ ಆಗಮಿಸುವುದನ್ನು ನಿರ್ಬಂಧಿಸಲಾಗಿದೆ.

ಚಾಮುಂಡೇಶ್ವರಿ ದೇವಾಲಯದಲ್ಲಿ ಜುಲೈ 4, 11, 18 ಹಾಗೂ 25ರಂದು ಆಷಾಢ ಶುಕ್ರವಾರದ ವಿಶೇಷ ಪೂಜೆ, ಜುಲೈ 18ರಂದು ಚಾಮುಂಡೇಶ್ವರಿ ದೇವಿ ಜನ್ಮದಿನೋತ್ಸವ (ವರ್ಧಂತಿ) ನೆರವೇರಲಿದೆ. ಈ ದಿನಗಳಂದು ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

Mysore

ಆಷಾಢ ಶ್ರುಕವಾರ ಹಾಗೂ ಚಾಮುಂಡೇಶ್ವರಿ ದೇವಿಯ ಜನ್ಮದಿನೋತ್ಸವವನ್ನು ಶಾಂತ ರೀತಿಯಲ್ಲಿ ಆಚರಿಸಲು, ಕೋಮು ಸೌಹಾರ್ದತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಮನವಿ ಮಾಡಿದ್ದಾರೆ. [ಆಷಾಢ ಶುಕ್ರವಾರಕ್ಕೆ ಸಕಲ ಸಿದ್ಧತೆ]

ಮಾರ್ಗ ಬದಲಾವಣೆ ಹೀಗಿದೆ

* ತಾವರೆಕಟ್ಟೆ, ನಂದಿ ಮಾರ್ಗದ ರಸ್ತೆ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಇಂಡಸ್‌ವ್ಯಾಲಿ ರಸ್ತೆ ಮೂಲಕ ಚಾಮುಂಡಿಬೆಟ್ಟಕ್ಕೆ ಹೋಗುವ (ಸಾರಿಗೆ ಸಂಸ್ಥೆ ವಾಹನಗಳನ್ನು ಹೊರತುಪಡಿಸಿ) ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

* ಭಕ್ತರು ತಮ್ಮ ವಾಹನಗಳನ್ನು ಕುರುಬಾರಳ್ಳಿ ವೃತ್ತದಿಂದ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸಾಗಿ ಕೆ.ಸಿ.ಲೇಔಟ್ ಮುಖ್ಯರಸ್ತೆಗೆ ಪೂರ್ವಕ್ಕೆ ತಿರುಗಿ ಹೆಲಿಪ್ಯಾಡ್ ರಸ್ತೆ ತಲುಪಿ ಲಲಿತಮಹಲ್ ಹೆಲಿಪ್ಯಾಡ್‌ ನ ನೈರುತ್ಯ (ಸೌತ್‌ವೆಸ್ಟ್) ಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ಪೊಲೀಸರು ನೀಡುವ ಸೂಚನೆ ಅನುಸಾರ ನಿಲ್ಲಿಸಬೇಕು.

Chamundi Hills

* ಲಲಿತಾದ್ರಿಪುರದ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರು ವಾಹನಗಳನ್ನು ಲಲಿತಾದ್ರಿಪುರದ ರಸ್ತೆ ಮೂಲಕ ಲಲಿತಮಹಲ್ ಹೆಲಿಪ್ಯಾಡ್ ಬಳಿ ತಲುಪಿ ಹೆಲಿಪ್ಯಾಡ್ ಬಳಿ ನಿಗಪಡಿಸಿದ ಸ್ಥಳದಲ್ಲಿ ನಿಲ್ಲಿಸಬೇಕು. ಭಕ್ತರು ವಾಹನಗಳನ್ನು ನಿಲುಗಡೆ ಮಾಡಿದ ಸ್ಥಳದಿಂದ ಚಾಮುಂಡಿಬೆಟ್ಟಕ್ಕೆ ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಬಹುದು ಹಾಗೂ ಬಸ್ಸುಗಳಲ್ಲಿಯೇ ವಾಹನಗಳ ನಿಲುಗಡೆ ಸ್ಥಳಕ್ಕೆ ಮರಳಬೇಕು.

* ಭಕ್ತರನ್ನು ಕರೆದುಕೊಂಡು ಹೋಗುವ ನಗರ ಸಾರಿಗೆ ಬಸ್ಸುಗಳು, ಅವುಗಳು ನಿಲುಗಡೆಯಾದ ಸ್ಥಳದಿಂದ ಲಲಿತಾದ್ರಿಪುರದ ರಸ್ತೆ-ಇಂಡಸ್‌ ವ್ಯಾಲಿ ಮೂಲಕ ಚಾಮುಂಡಿಬೆಟ್ಟ ರಸ್ತೆ ತಲುಪಿ ಚಾಮುಂಡಿಬೆಟ್ಟದ ಮೇಲೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು.

* ಭಕ್ತರನ್ನು ವಾಪಸ್ ಕರೆದುಕೊಂಡು ಹೋಗುವ ಬಸ್ಸುಗಳು ಚಾಮುಂಡಿಬೆಟ್ಟದ ಮೇಲಿನ ನಗರ ಸಾರಿಗೆ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟದ ರಸ್ತೆಯಲ್ಲಿ ತಾವರೆಕಟ್ಟೆ ತಲುಪಿ ಕೆಎಸ್‌ಆರ್‌ಪಿ ಕ್ವಾಟ್ರಸ್ ಬಳಿ ಕೆ.ಸಿ. ಲೇಔಟ್‌ಗೆ ಬಲ ತಿರುವು ಪಡೆದು ಕೆ.ಸಿ.ಲೇಔಟ್ ಮುಖ್ಯ ರಸ್ತೆ ಮೂಲಕ ಹೆಲಿಪ್ಯಾಡ್ ರಸ್ತೆ ಸೇರಿ ಹೆಲಿಪ್ಯಾಡ್ ತಲುಪಬಹುದು.

English summary
To avoid inconvenience to thousands of devotees, who visit Chamundi Hill in Mysore on Ashada Fridays on July 4, 11, 18 and 25 and also on July 18 which coincides with Chamundeshwari Vardhanthi, the City Police have announced various traffic regulations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X