ಚನ್ನಪಟ್ಟಣದಲ್ಲಿ ಅಕ್ರಮ ತಂಬಾಕು ಪುಡಿ ವಶ

Posted By:
Subscribe to Oneindia Kannada

ಮೈಸೂರು, ನವೆಂಬರ್, 12: ಯಾವುದೇ ರೀತಿಯ ಅನುಮತಿ ಪಡೆಯದೆ ತಂಬಾಕು ಪುಡಿಯನ್ನು ಅಕ್ರಮವಾಗಿ ಲಾರಿಗಳಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ತಂಬಾಕು ಮಂಡಳಿಯ ಜಾಗೃತ ದಳದ ಅಧಿಕಾರಿಗಳು ಎರಡು ಲಾರಿಗಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಎರಡು ಐಷರ್ ಕ್ಯಾಂಟರ್ (ಕೆಎ-12 ಬಿ, 0194 ಹಾಗೂ ಕೆಎ-15, 7454) ಲಾರಿಯಲ್ಲಿ ತಂಬಾಕು ಪುಡಿಯನ್ನು ತುಂಬಿಸಿ ಆಂಧ್ರಕ್ಕೆ ಕೊಂಡೊಯ್ಯಲಾಗುತ್ತಿತ್ತು. ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ.

Tobacco products seized in Channapattana

ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪಿರಿಯಾಪಟ್ಟಣ ತಂಬಾಕು ಮಂಡಳಿಯ ಜಾಗೃತ ದಳ ಲಾರಿಯನ್ನು ಹಿಂಬಾಲಿಸಿ ಚನ್ನಪಟ್ಟಣ ಬಳಿ ಶನಿವಾರ ಮುಂಜಾನೆ 5 ಗಂಟೆ ವೇಳೆಗೆ ಲಾರಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಶಪಡಿಸಿಕೊಂಡ ಮಾಲನ್ನು ಕಟ್ಟೆಮಳಲವಾಡಿ ಪ್ಲಾಟ್ ಫಾರಂ ನಂ.2ರ ಗೋಡನ್‍ನಲ್ಲಿಡಲಾಗಿದ್ದು,

ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಜಾಗೃತ ದಳದ ಅಧಿಕಾರಿಗಳಾದ ಸವಿನಯ್, ದೇವರಾಜ್, ನಾಗಸುಂದರ್ ಇನ್ನಿತರರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The tobacco board officials seized Tobacco raw product near Channapattana. Which exporting to Andhraparadesh from Mysuru. officials raid the tobacco exporting vehicles on Saturday near channapattana. Department take step for further investigation.
Please Wait while comments are loading...