ಮೈಸೂರು: ಬಿರುಸುಗೊಂಡ ತಂಬಾಕು ಕೃಷಿ ಚಟುವಟಿಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 17: ಕಳೆದ ಕೆಲವು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿರುವುದರಿಂದ ತಂಬಾಕು ಬೆಳೆಗೆ ಫಲವತ್ತಾದ ಭೂಮಿಯನ್ನು ಹೊಂದಿರುವ ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ರೈತರು ತಂಬಾಕು ನಾಟಿ ಕಾರ್ಯದಲ್ಲಿ ನಿರತರಾಗಿದ್ದಾರೆ.[ಸಿಗರೇಟು ಶಾಶ್ವತವಾಗಿ ಸುಟ್ಟಾಕಿ : ಸೆಲೆಬ್ರಿಟಿಗಳ ಕೂಗು]

ಮಾರ್ಚ್ ನಲ್ಲಿ ಮಳೆ ಬಿದ್ದಿದ್ದರೆ ಇಷ್ಟರಲ್ಲೇ ನಾಟಿ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಆದರೆ ಈಗ ತಡವಾಗಿ ತಂಬಾಕು ನಾಟಿ ಮಾಡುವುದು ರೈತರಿಗೆ ಅನಿವಾರ್ಯವಾಗಿದೆ. ಮಾರ್ಚ್ ನಲ್ಲಿ ಕೆಲವರು ಸಸಿಮಡಿಗಳನ್ನು ತಯಾರಿ ಮಾಡಿದ್ದರಾದರೂ ಅದು ಬಿಸಿಲಿಗೆ ಒಣಗಿ ಹೋಗಿ ರೈತರಿಗೆ ನಷ್ಟವುಂಟಾಗಿತ್ತು. [ಮೈಸೂರು : ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಭಾರೀ ಮಳೆ]

ಆದರೆ ಇದೀಗ ಮಳೆ ಬಿದ್ದು ಭೂಮಿ ಹದವಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮಿನುಗಿದೆ. ಕಳೆದ ಬಾರಿ ಪ್ರಾರಂಭದಲ್ಲಿ ಮಳೆಯಾಗಿ ಕಟಾವಿಗೆ ಸಮೀಪಿಸುತ್ತಿದ್ದಂತೆ ಮಳೆ ಕೈಕೊಟ್ಟಿದ್ದರಿಂದ ತಂಬಾಕು ಬೆಳೆ ಕುಂಠಿತವಾಗಿ ಇಳುವರಿ ಕೈಕೊಟ್ಟಿತ್ತು.[ತಂಬಾಕು ಬೇಕಿದ್ರೆ ಸೇವಿಸಿ, ದುಷ್ಪರಿಣಾಮ ನೀವೇ ಅನುಭವಿಸಿ!]

ಕಳೆದ ವರ್ಷ ಮಾರುಕಟ್ಟೆಯಲ್ಲಿ 100 ಮಿಲಿಯನ್ ಕೆಜಿ ತಂಬಾಕು ಬೆಳೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಕೇವಲ 65-70 ಮಿಲಿಯನ್ ತಂಬಾಕು ಮಾತ್ರ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ. 2016-17ನೇ ಸಾಲಿನಲ್ಲಿ 120 ಮಿಲಿಯನ್ ತಂಬಾಕಿಗೆ ಬೇಡಿಕೆಯಿದೆ ಎನ್ನಲಾಗುತ್ತಿದ್ದು, ಅಷ್ಟೊಂದು ಇಳುವರಿ ಪಡೆಯಲು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ.[ತಂಬಾಕಿನಿಂದಾಗುವ ಹಾನಿಯ ಜಾಗೃತಿಗಾಗಿ ಕಿದ್ವಾಯಿಯಲ್ಲಿ ಜಾದೂ]

Tobacco cultivation in full swing Hunsur, Piriyapatna

ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದ ರೈತ : ಕಳೆದ ಕೆಲ ವರ್ಷಗಳಿಂದ ತಂಬಾಕು ಬೆಳೆಯುವ ರೈತರು ಮಳೆಯಿಲ್ಲದೆ ಮತ್ತು ಸಮರ್ಪಕ ದರ ಸಿಗದೆ ನಷ್ಟ ಅನುಭವಿಸುತ್ತಿದ್ದು, ಬಹಳಷ್ಟು ಜನ ತಂಬಾಕು ಬಿಟ್ಟು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಪಿರಿಯಾಪಟ್ಟಣ, ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ತಂಬಾಕು ಬೆಳೆಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದವರು ಇದ್ದಾರೆ. [ವರುಣ ಈ ಬಾರಿ ಬೇಗನೆ ಬರುತ್ತಿದ್ದಾನೆ, ಸ್ವಾಗತ ಕೋರಿರಿ]

ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ರೈತರನ್ನು ಕೈಹಿಡಿದಿದೆಯಾದರೂ ಕೆಲ ವರ್ಷಗಳಿಂದ ಮಾರಕವಾಗಿ ಪರಿಣಮಿಸಿದೆ. ಇದರಿಂದ ಎಚ್ಚೆತ್ತುಕೊಂಡ ರೈತರು ಬದಲಿ ಬೆಳೆಗಳತ್ತ ಗಮನಹರಿಸಿದ್ದಾರೆ. ಹಿಂದೆ ರೈತರಿಗೆ ತಂಬಾಕು ಮಾರಾಟ ಮಾಡಲು ನೀಡಿರುವ ಪ್ರತಿ ಸಿಂಗಲ್ ಬ್ಯಾರನ್ ಗೆ 1,800 ಕಿಲೋ ನೀಡಿದ್ದರು. ಆದರೆ ಈ ಬಾರಿ 2016-17 ನೇ ಸಾಲಿಗೆ ಕೇವಲ 1,650 ಕಿಲೋ ತಂಬಾಕು ಬೆಳೆಯುವಂತೆ ಲೈಸನ್ಸ್ ನವೀಕರಿಸಲಾಗಿದೆ ಎಂದು ರೈತರು ಹೇಳುತ್ತಿದ್ದಾರೆ.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]

ತಂಬಾಕು ಮಂಡಳಿ ಕಳೆದ ಬಾರಿ ಚಿಲ್ಲರೆಯಾಗಿ ರಸಗೊಬ್ಬರವನ್ನು ನೀಡಿತ್ತು. ಈ ಬಾರಿ ಏಕಕಾಲದಲ್ಲಿ ಗೊಬ್ಬರ ನೀಡುತ್ತಿರುವುದು ರೈತರಿಗೆ ಸಂತಸ ತಂದಿದೆ. ಒಟ್ಟಾರೆ ತಂಬಾಕು ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tobacco cultivation in full swing Hunsur, Piriyapatna in Mysuru.Periyapatna Taluk received Heavy and widespread rain reducing the temperature and drop in mercury rising this weekend witnessed.
Please Wait while comments are loading...