ಶ್ರೀನಿವಾಸ್ ಪ್ರಸಾದ್ ಸೋಲಿಗೆ ಟಿಎನ್ ಸೀತಾರಾಂ ಬೇಸರ

By: ಟಿಎನ್ ಸೀತಾರಾಂ
Subscribe to Oneindia Kannada

ಶ್ರೀನಿವಾಸ ಪ್ರಸಾದ್ ರವರು 30 ವರ್ಷಗಳಿಂದ ನನ್ನ ಆತ್ಮೀಯ ಮಿತ್ರರು... ಹೃದಯವಂತ.... ನನ್ನ ಎಲ್ಲಾ ಧಾರಾವಾಹಿಗಳ ಮೊದಲ ದಿನದ ಚಾಲನೆ ನೀಡಿದ್ದು ಮಾತ್ರವಲ್ಲ ತಾವು ಯಾವುದೇ ಸ್ಥಾನದಲ್ಲಿದ್ದರೂ ಸ್ನೇಹ ಮರೆತವರಲ್ಲ...

ನಂತರ ಅವರು ಅನಾರೋಗ್ಯದಿಂದ ಅನೇಕ ಬಗೆಯ ಕಷ್ಟಗಳಿಗೆ ಈಡಾದರು.... ಅನಾರೋಗ್ಯದಿಂದಾಗಿ ಅವರ ಕೆಲಸದ ಕ್ಷಮತೆ ಕಡಿಮೆ ಆಯಿತು ಅನ್ನಿಸುತ್ತದೆ...‌ ಸೂಕ್ಷ್ಮ ಮನಸ್ಸಿನವರು.. ಅವರು ಸೋಲುತ್ತಿರುವುದ ಬೇಸರದ ಸಂಗತಿ..

TN Seetharam feels sorry for Srinivasa Prasad's defeat

ಹಾಗೆಯೇ ಮಹದೇವ ಪ್ರಸಾದ್ ಅವರು ದಿವಂಗತ ಎಂ.ಪಿ.ಪ್ರಕಾಶ್ ರವರ ಮೂಲಕ ಸ್ನೇಹಿತರಾಗಿದ್ದವರು... ಸರಳ ಮತ್ತು ಸೌಜನ್ಯದ ನಡವಳಿಕೆಯ ವ್ಯಕ್ತಿಯಾಗಿದ್ದರು... ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಲೇಖಕರು, ಅಪಾರ ಜ್ಞಾನ ಉಳ್ಳವರು.. ಸೂಕ್ಷ್ಮ ಮನಸಿನ ಕವಿ... ಒಳ್ಳೆಯ ಮನಸ್ಸಿನ ಹೆಣ್ಣುಮಗಳು...

ಅವರು ಗೆಲ್ಲುವ ಸೂಚನೆ ಕಾಣುತ್ತಿರುವುದು ಸಮಾಧಾನದ ವಿಚಾರ... ಮಹದೇವ್ ಪ್ರಸಾದ್ ಅವರ ಪತ್ನಿ ಎಂಬ ವಿಚಾರಕ್ಕೆ ಮಾತ್ರವಲ್ಲ... ಕವಿಯ ಮನಸ್ಸಿನ ಈ ಹೆಣ್ಣುಮಗಳು ಗೆದ್ದರೆ ಒಳ್ಳೆಯ ಜನಪ್ರತಿನಿಧಿಯಾಗುವ ಸಂಭವ ಇದೆ...

ಇದು ನನ್ನ ಖಾಸಗಿ ಸ್ನೇಹಿತರಿಬ್ಬರ ಬಗೆಗಿನ ಮಾತು ಮಾತ್ರ..... ಇದು ರಾಜಕೀಯದ ಮಾತು ಅಲ್ಲ.‌

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
TN Seetharam, Kannada tv serial director, has said that his good friend V Srinivasa Prasad should not have lost the by election in Nanjangud. He has also congratulated his another friend Mahadev Prasad's wife Geeta Mahadev Prasad, who has won from Gundlupet.
Please Wait while comments are loading...