ಬಿಗಿ ಭದ್ರತೆ ನಡುವೆ ಮೈಸೂರಿನಲ್ಲಿ ಟಿಪ್ಪು ಜಯಂತಿ ಆಚರಣೆ

Posted By:
Subscribe to Oneindia Kannada

ಮೈಸೂರು, ನವೆಂಬರ್ 10:ಟಿಪ್ಪು ಸುಲ್ತಾನ್ ಓರ್ವ ಹಿಂದೂ ಮತ್ತು ಮುಸಲ್ಮಾನರ ನಡುವಿನ ಸಾಮರಸ್ಯದ ಕೊಂಡಿಯಂತಿದ್ದರು ಎಂಬ ಮಹಾತ್ಮಗಾಂಧಿ ಅವರ ಹೇಳಿಕೆಯನ್ನು ಕೋಮುವಾದಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಪಿತ, ಮಹಾತ್ಮ ಗಾಂಧೀ ಅವರು ತಮ್ಮ ಯಂಗ್ ಇಂಡಿಯಾ ಪುಸ್ತಕದಲ್ಲಿ ಟಿಪ್ಪು ಕುರಿತು ಬರೆಯುವಾಗ ಹಿಂದೂ-ಮುಸಲ್ಮಾನಮರ ಸಾಮರಸ್ಯದ ಕೊಂಡಿಯಾಗಿದ್ದರು ಟಿಪ್ಪು ಸುಲ್ತಾನ್ ಎಂದು ಉಲ್ಲೇಖಿಸಿದ್ದಾರೆ. ಆದ್ದರಿಂದ ಇದನ್ನು ಓದಿಯಾದರೂ ಟಿಪ್ಪು ಜಯಂತಿ ವಿರೋಧಿಸುತ್ತಿರುವ ಕೋಮುವಾದಿ ಶಕ್ತಿಗಳು ಸತ್ಯಾಂಶವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದರು.

Tipu Jayanti celebrated amidst thick security blanket in Mysuru

ಟಿಪ್ಪು ಜಯಂತಿ ಆಚರಣೆ ಯಾವುದೋ ಒಂದು ವರ್ಗದ ಜನರ ಓಲೈಕೆಗಾಗಿಯಾಗಲಿ ಅಥವಾ ರಾಜಕೀಯ ಲಾಭಕ್ಕಾಗಿಯಾಗಲಿ ಮಾಡುತ್ತಿಲ್ಲ. ಬದಲಿಗೆ ಬ್ರಿಟಿಷರ ವಿರುದ್ಧ ದನಿ ಎತ್ತಿದ್ದ, ಮೊಟ್ಟ ಮೊದಲ ಭಾರತೀಯ ಎಂಬ ಕಾರಣಕ್ಕಾಗಿ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಆದರೆ ಬಿಜೆಪಿಯವರು ಇದರಲ್ಲೂ ಕೋಮು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ.

Tipu Jayanti celebrated amidst thick security blanket in Mysuru

ದಕ್ಷಿಣ ಭಾರತದ ಉದ್ದಕ್ಕೂ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದು ಟಿಪ್ಪು ಸುಲ್ತಾನ್, ಆತ ಅದ್ಹೇಗೆ ಕನ್ನಡ ವಿರೋಧಿಯಾಗಲು ಸಾಧ್ಯ..? ಆತ ವಾಸಿಸುತ್ತಿದ್ದ ಸ್ಥಳದಲ್ಲಿ ಹಿಂದೂ ದೇವಾಲಯಗಳಿವೆ. ಆತನ ಅಳ್ವಿಕೆಯ ವ್ಯಾಪ್ತಿಯಲ್ಲಿದ್ದ ದೇವಾಲಯಗಳಲ್ಲಿದ್ದ ಅಪಾರ ಸಂಪತ್ತು ಈಗಲೂ ದೇವಾಲಯದ ಸುಪರ್ದಿಯಲ್ಲೇ ಇದೆ. ಹಾಗಾಗಿ ಅದ್ಹೇಗೆ ಆತ ಹಿಂದೂ ವಿರೋಧಿಯಾಗಲು ಸಾಧ್ಯ..? ಎಂದು ಪ್ರಶ್ನಿಸಿದರು.

Tipu Jayanti celebrated amidst thick security blanket in Mysuru

ಸಮಾಜದಲ್ಲಿ ದ್ವೇಷ ಹಾಗೂ ಕೋಮು ಭಾವನೆ ಉಂಟು ಮಾಡುವ ಸಲುವಾಗಿ ಬಿಜೆಪಿ ಮುಖಂಡರು ಟಿಪ್ಪು ಜಯಂತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಮಹಾದೇವಪ್ಪ ಕಿಡಿಕಾರಿದರು.
ವ್ಯವಸಾಯ ಮಾಡಲು ಸ್ವಂತ ಭೂಮಿ ಇಲ್ಲದೆ ವಂಚಿತರಾಗಿದ್ದ ಶೋಷಿತ ಸಮುದಾಯದ ರೈತರಿಗೆ ಉಳುವವನೆ ಭೂಮಿ ಒಡೆಯ ಎಂಬ ಭೂ ಸುಧಾರಣೆ ಪರಿಕಲ್ಪನೆಯನ್ನು ಶತಮಾನಗಳ ಹಿಂದೆಯೇ ಜಾರಿಗೊಳಿಸಿದ ಕೀರ್ತಿ ಟಿಪ್ಪು ಸುಲ್ತಾನ್ ರದ್ದು ಎಂದು ಸಚಿವ ಮಹಾದೇವಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tipu Sultan Jayanti was celebrated in Mysuru in a thick security blanket and all kinds of public procession was completely restricted to prevent any untoward incidents..Mysuru tippu jayanti inaugurated by District Minister H.C Mahadevappa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ