ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ.ಕೋಟೆಯಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷ

|
Google Oneindia Kannada News

ಮೈಸೂರು, ಡಿ. 10 : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಬರಗಿ ಗ್ರಾಮಸ್ಥರು ಮತ್ತೊಮ್ಮೆ ಹುಲಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಐದು ದಿನಗಳ ಹಿಂದೆ ಇದೇ ಗ್ರಾಮದ ಅರಣ್ಯದ ಅಂಚಿಯನಲ್ಲಿ ನರಭಕ್ಷರ ಹುಲಿಯನ್ನು ಜೀವಂತವಾಗಿ ಸರೆರೆ ಹಿಡಿಯಲಾಗಿತ್ತು. ಸೋಮವಾರ ರಾತ್ರಿ ಗ್ರಾಮದಲ್ಲಿ ಮತ್ತೊಂದು ಹುಲಿ ಕಾಣಿಸಿಕೊಂಡಿದೆ.

ಸೋಮವಾರ ರಾತ್ರಿ ಚಿಕ್ಕಬರಗಿ ಗ್ರಾಮದ ಪ್ರಭುಸ್ವಾಮಿ ಅವರ ಮನೆಯ ಬಳಿ ಹುಲಿ ಕಾಣಿಸಿಕೊಂಡಿದೆ. ದನದ ಕೊಟ್ಟಿಗೆಗೆ ಬಂದಿರುವ ಹುಲಿ, ಅವುಗಳ ಮೇಲೆ ದಾಳಿ ಮಾಡುವ ಯತ್ನ ನಡೆಸಿದೆ. ಆದೆರೆ, ಗ್ರಾಮಸ್ಥರು ಕೂಗಿಕೊಂಡಿದ್ದರಿಂದ ಸ್ಥಳದಿಂದ ಪರಾರಿಯಾಗಿದೆ. ಕೇವಲ ಐದು ದಿನಗಳ ಅಂತರದಲ್ಲಿ ಗ್ರಾಮಕ್ಕೆ ಮತ್ತೊಂದು ಹುಲಿ ಬಂದಿದ್ದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.

tiger

ಗ್ರಾಮಕ್ಕೆ ಪುನಃ ಹುಲಿ ಆಗಮಿಸಿರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಗ್ರಾಮಸ್ಥರು ಕಾಡಿನಂಚಿನಲ್ಲಿರುವ ಕಬ್ಬಿನ ತೋಟದಲ್ಲಿ ಹುಲಿ ಅವಿತಿರಬಹುದು ಎಂದು ತಿಳಿಸಿದ್ದಾರೆ. ಅಧಿಕಾರಿಗಳು ಹುಲಿಗಾಗಿ ಹುಟುಕಾಟ ಆರಂಭಿಸಿದ್ದಾರೆ. (ಥ್ಯಾಂಕ್ ಗಾಡ್, ನರಭಕ್ಷಕ ಹುಲಿ ಸಿಕ್ಕಿತು)

ಕಳೆದ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಚಿಕ್ಕಬರಗಿ ಗ್ರಾಮದಲ್ಲಿ ದನ ಕಾಯುತ್ತಿದ್ದ ಬಸಪ್ಪ (55) ಅವರ ಮೇಲೆ ದಾಳಿ ನಡೆಸಿದ್ದ ಹುಲಿ ಅವರನ್ನು ತಿಂದು ಹಾಕಿತ್ತು. ನಂತರ ನರಭಕ್ಷರ ಹುಲಿ ಹಿಡಿಯಲು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಹುಲಿಯನ್ನು ಜೀವಂತವಾಗಿ ಸೆರೆಹಿಡಿದಿದ್ದರು. ಸದ್ಯ ಹುಲಿ ಮೈಸೂರು ಮೃಗಾಲಯದಲ್ಲಿದೆ. (ವ್ಯಾಘ್ರನ ಬಗ್ಗೆ ಮತ್ತೊಂದಿಷ್ಟು ಮಾಹಿತಿ)

ನಾಲ್ವರನ್ನು ಬಲಿತೆಗೆದುಕೊಂಡ ನರಭಕ್ಷಕ ಹುಲಿಯನ್ನು ಚಿಕ್ಕಬರಗಿ ಗ್ರಾಮದ ಕಾಡಿನಂಚಿನಲ್ಲಿಯೇ ಸರೆ ಹಿಡಿಯಲಾಗಿತ್ತು. ಇದರಿಂದ ನಿಟ್ಟುಸಿರು ಬಿಟ್ಟಿದ್ದ ಗ್ರಾಮಸ್ಥರು ಹುಲಿ ಕಾಟ ತಪ್ಪಿತು ಎಂದು ನಿರಾಳರಾಗಿದ್ದರು. ಆದರೆ, ಪುನಃ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

English summary
Again tiger found in Mysore district HD Kote taluk Chikkabaragi village. On Monday, December 9 midnight tiger found near villager Prabhu Swamy house. On December 5 man eater tiger caught alive in this village. Villagers said tiger, is hiding in sugarcane and cotton fields.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X