ಗುಂಡ್ರೆ ಅರಣ್ಯದಲ್ಲಿ ಹಸಿವು ತಾಳಲಾರದೆ ಹುಲಿ ಸಾವು

Posted By:
Subscribe to Oneindia Kannada

ಎಚ್.ಡಿ.ಕೋಟೆ, ಮೇ 29: ಬಂಡೀಪುರ ರಾಷ್ಟ್ರೀಯ ಉದ್ಯಾನವದ ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ 10 ವರ್ಷದ ಗಂಡು ಹುಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಹಸಿವು ತಾಳಲಾರದೆ, ಸರಿಯಾದ ಬೇಟೆ ಸಿಗದ ಕಾರಣ ಕೃಶವಾಗಿ ಹುಲಿ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ.

ತಾಲ್ಲೂಕಿನ ಗುಂಡ್ರೆ ಅರಣ್ಯ ವಲಯದ ಚಲುವರಾಯನಕೆರೆ ಗಸ್ತಿನಲ್ಲಿ ಸಿಬ್ಬಂದಿಗೆ ಹುಲಿಯು ಸತ್ತಿರುವುದು ಗೋಚರಿಸಿದ್ದು ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

Tiger dies of starvation at Gundre Bandipur forest

ಹುಲಿಯು ಸುಮಾರು ಎರಡ್ಮೂರು ತಿಂಗಳ ಹಿಂದೆ ಮತ್ತೊಂದು ಹುಲಿ ಜೊತೆ ಕಾದಾಟ ನಡೆಸಿದ್ದು ಬಲದ ಕಾಲಿನ ಮೂಳೆ ಮುರಿದಿರುವ ಕಾರಣದಿಂದ ಬೇಟೆಯಾಡಿ ಆಹಾರ ತಿನ್ನಲು ಸಾಧ್ಯವಾಗದೆ ಬಳಲಿ ಅಲ್ಲದೆ ವಯಸ್ಸಾದ ಕಾರಣದಿಂದ ಸ್ವಾಭಾವಿಕವಾಗಿ ಮೃತ ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಖಾ ವೈದ್ಯರಾದ ಡಾ.ನಾಗರಾಜು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹುಲಿಯ ಕಳೆಬರವನ್ನು ಸ್ಥಳದಲ್ಲಿ ಸುಡಲಾಯಿತು. ಸ್ಥಳಕ್ಕೆ ಪಿಸಿಸಿಫ್ ಜಗತ್ ರಾಂ, ಅರಣ್ಯ ವಲಯ ಸಂರಕ್ಷಣಾಧಿಕಾರಿ ಬಿ.ಬಿ.ಮಲ್ಲೇಶ್, ಎಸಿಫ್ ಪೂವಯ್ಯ, ಡ್ರೆ ಅರಣ್ಯ ವಲಯದ ಸತೀಶ್ ಭೇಟಿ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A tiger was found dead due to starvation inside Gundre, Bandipur Tiger Sanctuary on Saturday.
Please Wait while comments are loading...