ನಾಗರಹೊಳೆ ಅಭಯಾರಣ್ಯದಲ್ಲಿ ಶುರುವಾಗಿದೆ ಹುಲಿ ಗಣತಿ

Posted By:
Subscribe to Oneindia Kannada

ಮೈಸೂರು, ನವೆಂಬರ್ 17 : ಭಾರತದಲ್ಲೇ ಅತೀ ಹೆಚ್ಚು ಹುಲಿಗಳ ಸಂತತಿ ಹೊಂದಿರುವ ದೇಶದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ 4ನೇ ಹಂತದ ಹುಲಿ ಗಣತಿ ಕಾರ್ಯ ಪ್ರಗತಿಯಲ್ಲಿದೆ.

ಕ್ಯಾಮೆರಾ ಬಳಸಿ 60 ದಿನಗಳ ಕಾಲ ಸತತ ಗಣತಿ ನಡೆಸಲಾಗುತ್ತದೆ. ಹುಲಿಗಳ ತಲೆ ಎಣಿಕೆಯ ಮಾಹಿತಿ ಮೂಲಕ ವೈಜ್ಞಾನಿಕವಾಗಿ ಹುಲಿಗಳ ಸಂಖ್ಯೆಯನ್ನು ಗುರುತಿಸಲಾಗುತ್ತದೆ. 20014-15ರವರೆಗೆ ಉಲ್ಲಾಸ ಕಾರಂತರ ಎನ್‌ಜಿಒ ಸೇರಿದಂತೆ ಇತರರ ಸಹಕಾರದಿಂದ ಹುಲಿ ಗಣತಿ ನಡೆಯುತ್ತಿತ್ತು. 2015-16ರಿಂದ ಇಲಾಖೆಯ ಅಧಿಕಾರಿಗಳು ಹಾಗೂ ಆಯ್ದ ಸಿಬ್ಬಂದಿಗೆ ಪ್ರಾಧಿಕಾರದ ವತಿಯಿಂದ ತರಬೇತಿ ನೀಡಿದ್ದು, ಅಂದಿನಿಂದಲೂ ಇಲಾಖೆ ವತಿಯಿಂದಲೇ ಕ್ಯಾಮೆರಾ ಟ್ರ್ಯಾಪ್ ಗಣತಿ ನಡೆಸಲಾಗುತ್ತಿರುವುದು ವಿಶೇಷ.

Tiger census begins at Nagarahole National Park

ಹುಲಿ ಸಂರಕ್ಷಿತ ಈ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳಿಂದ ಸಿಬ್ಬಂದಿ ಈ ಕಾರ‍್ಯ ಮಾಡಿದ್ದಾರೆ. ಎರಡು ವರ್ಷಕ್ಕಿಂತ ಕಡಿಮೆ ಇರುವ ಹುಲಿಗಳನ್ನು ಎಣಿಕೆಕೆ ತೆಗೆದುಕೊಳ್ಳದೆ ಉಳಿದಂತೆ ಎಲ್ಲ ಹುಲಿಗಳನ್ನು ಎಣಿಕೆ ಮಾಡಲಾಗುತ್ತಿದೆ.

ಟ್ಯ್ರಾಪಿಂಗ್ ಹೇಗೆ?:
ಆಯಾ ವಲಯದಲ್ಲಿನ ವಿಸ್ತೀರ್ಣ ಹಾಗೂ ಹುಲಿಗಳ ಓಡಾಟ ಅವಲಂಬಿಸಿ ಸ್ಥಳ ಗುರುತಿಸಿ, ಎರಡೂ ಬದಿ ಕ್ಯಾಮೆರಾ ಅಳವಡಿಸುತ್ತಾರೆ, ಅಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಪ್ರತಿ ಪ್ರಾಣಿಯ ಓಡಾಟದ ನಿಖರ ಸಮಯ, ಸೆಕೆಂಡ್‌ ಸೇರಿದಂತೆ ದಾಖಲಾಗಲಿದೆ.

ಮೂರು ದಿನಕ್ಕೊಮ್ಮೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕ್ಯಾಮೆರಾದಿಂದ ಚಿಪ್‌ ಹೊರತೆಗೆದು ಸ್ಥಳದಲ್ಲೇ ಲ್ಯಾಪ್‌ ಟಾಪ್ ನಲ್ಲೇ ಡಾಟಾವನ್ನು ಸಂಗ್ರಹಿಸಿಕೊಂಡು ಮತ್ತೆ ಅಳವಡಿಸುತ್ತಾರೆ. ಡಾಟಾವನ್ನು ಪರಿಶೀಲಿಸಿ ಹುಲಿಯ ಓಡಾಟ, ಇತರೆಡೆಯೂ ಇದೇ ಹುಲಿಯು ಟ್ರಾಪ್‌ ಆಗಿದ್ದರೆ ಗುರುತಿಸಿ ದಾಖಲಿಸುವ ನಿರ್ಧಾರ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The fourth phase of tiger census commenced at Nagarahole National Park in Kodagu and Mysuru districts. As per the national Project Tiger scheme, the census was launched.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ