ಮೈಸೂರು ವಿವಿಯ 3 ಚಿತ್ರಗಳು ಪ್ರಕೃತಿ ಸಾಕ್ಷ್ಯ ಚಲನಚಿತ್ರೋತ್ಸವಕ್ಕೆ ಆಯ್ಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್. 19 : ರಾಷ್ಟ್ರೀಯ ಪ್ರಕೃತಿ ಸಾಕ್ಷ್ಯ ಚಿತ್ರಗಳ 2016 ಚಲನಚಿತ್ರೋತ್ಸವಕ್ಕೆ ಮೈಸೂರು ವಿವಿಯ 3 ಪ್ರಕೃತಿ ಸಾಕ್ಷ್ಯ ಚಿತ್ರಗಳು ಆಯ್ಕೆಯಾಗಿವೆ.

ಇದೆ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾಲಯದ ಮೂರು ಚಿತ್ರಗಳು ಕರ್ನಾಟಕದಿಂದ ಆಯ್ಕೆಯಾಗಿವೆ. ಮೈಸೂರು ವಿವಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಿಂದ ಈ ಮೂರು ಚಿತ್ರಗಳು ಸಾಕ್ಷ್ಯ ಚಿತ್ರಗಳು ನಿರ್ಮಿಸಲ್ಪಟ್ಟಿವೆ.

ಇದೆ ಡಿಸೆಂಬರ್ 28 ರಿಂದ 30ರವರೆಗೆ ಚಂಡೀಗಡದ ನ್ಯಾಷನಲ್ ಇನ್‍ಸ್ಟಿಟೂಟ್ ಆಫ್ ಟೆಕ್ನಿಕಲ್ ಟೀಚರ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್‍ ಅಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.

Three documentary Films of mysore university EMRC selected for 2016 environmental Film Festival

ಮೈಸೂರು ವಿವಿಯ ಪರಿಸರ ವಿಭಾಗದಿಂದ ನಿರ್ಮಿಸಲ್ಪಟ್ಟ 'ಡಿಜಿಡಬ್ಲ್ಯೂಟಿ-ಎ ಕಾಸ್ ಫಾರ್ ಕನ್ಸರ್ನ್', 'ಗುರುಕಾಕ್ - ದಿ ಗ್ರೀನ್ ಮ್ಯಾನ್' ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಹೆಜ್ಜೆ ಟೆಕ್ನಾಲಜಿ ಮೀಟ್ಸ್ ಬಂಡಿಪುರ ವೈಲ್ಡ್‍ಲೈಫ್ ಸಾಕ್ಷ್ಯ ಚಿತ್ರಗಳೇ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three documentary films produced by the Educational Multimedia Research Centre (EMRC) of the University of Mysore have been selected for environmental Film Festival to be held in Chandigarh on December 28 to 30.
Please Wait while comments are loading...