ಮೈಸೂರಿನ ನಿಗೂಢ ಸಾವು ಪ್ರಕರಣ : ದೂರು ದಾಖಲು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 20: ತನ್ನ ಮಗನ ಕೊಲೆಯನ್ನು ಆತನ ಪ್ರೇಯಸಿಯ ಪೋಷಕರೇ ಮಾಡಿಸಿದ್ದಾರೆ ಎಂದು ಆರೋಪಿಸಿ ಬನ್ನೂರು ಠಾಣೆಯಲ್ಲಿ ದೂರು ದಾಖಲಾದ ಘಟನೆ ಮೈಸೂರಿನಲ್ಲಿ ಜರುಗಿದೆ.

ಮಂಗಳಮ್ಮ ಎಂಬುವವರ ಎಕೈಕ ಪುತ್ರ ಶಶಿಧರ್ ಕೊಲೆಯಾದ ವ್ಯಕ್ತಿ. ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದು ಸುಮಾರು ನಾಲ್ಕು ವರ್ಷಗಳಿಂದ ಮೈಸೂರಿನಲ್ಲಿ ಎಂ.ಟೆಕ್ ಮಾಡಿದ್ದ ಅಕ್ಷತಾಳನ್ನು ಪ್ರೀತಿಸುತ್ತಿದ್ದ. ಆಕೆ ತಮ್ಮ ಓದು ಮುಗಿದ ತಕ್ಷನ ವಿವಾಹವಾಗುವುದಾಗಿ ಹೇಳಿದ್ದಾಳೆ ಎಂದು ಶಶಿಧರ್ ತನ್ನ ತಾಯಿಯ ಬಳಿಯೂ ಹೇಳಿದ್ದ ಎನ್ನಲಾಗಿದೆ. ಆದರೆ ಕಳೆದ ಸೆಪ್ಟಂಬರ್ 8ರಂದು ಬೆಳಗ್ಗೆ ಶಶಿಧರ್ ಅಕ್ಷತಾಳನ್ನು ನೋಡಿಕೊಂಡು ಬರುವುದಾಗಿಳಿ ತೆರಳಿದವನು ಮನೆಗೆ ಬಂದದ್ದು ಮಾತ್ರ ಹೆಣವಾಗಿ ಇದು ನಿಗೂಢಸಾವು ಎಂದು ಮಂಗಳಮ್ಮ ದೂರಿನಲ್ಲಿ ತಿಳಿಸಿದ್ದಾರೆ.[ರವಿ ಸಾವು ನಿಗೂಢ, ಮರಣೋತ್ತರ ಪರೀಕ್ಷೆಯೂ ನಿಗೂಢ]

Three crime happan in mysuru, rape attempt,suicide, mysterious death

ಶಶಿಧರ್ ಸ್ನೇಹಿತರು ನಿಮ್ಮ ಮಗ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿ ಆತನ ಶವವನ್ನು ಊರಿಗೆ ತಂದು, ಮರಣೋತ್ತರ ಪರೀಕ್ಷೆಯನ್ನು ಮಾಡಿಸದೆ ಅಂತ್ಯಕ್ರಿಯೆ ಮಾಡಿಸಿದ್ದಾರೆ.

ಇನ್ನು ಆತನ ಮೊಬೈಲಿನಲ್ಲಿ ಯಾವುದೇ ಮಾಹಿತಿ ಇಲ್ಲದೆ ಎಲ್ಲ ದೂರವಾಣಿಗಳು ಡಿಲೀಟ್ ಆಗಿವೆ. ಅದರೆ ಶಶಿಧರ್ ಮತ್ತು ಅಕ್ಷತಾ ಚಿತ್ರಗಳು ಫೇಸ್ ಬುಕ್ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದೇ ಈ ನಿಗೂಢಸಾವಿಗೆ ಕಾರಣ ಎಂಬ ಅನುಮಾನಗಳು ಹೆಚ್ಚಾಗಿವೆ. ಈ ವೇಳೆ ಅಕ್ಷತಾ ಕೂಡ ಕರೆಮಾಡಿ ಶಶಿಧರ್ ತಂಗಿಯನ್ನು ಎಚ್ಚರಿಸಿದ್ದಳು ಎನ್ನಲಾಗಿದೆ.

ಸೊಸೆಯ ಮೇಲೆ ಮಾವನಿಂದ ಅತ್ಯಾಚಾರಕ್ಕೆ ಯತ್ನ

ಮೈಸೂರು: ಸೊಸೆ ಮನೆಯಲ್ಲಿ ಒಬ್ಬಳೇ ಇರುವಾಗ ಆಕೆಯ ಮಾವ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಜಾಗನಕೋಟೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Three crime happan in mysuru, rape attempt,suicide, mysterious death

ಜಾಗನಕೋಟೆ ಗ್ರಾಮದ ಮಹೇಶ ಅವರ ಪತ್ನಿ ಪಲ್ಲವಿ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ಮನೆಗೆ ಬಂದ ಮಾವ ನಾಗರಾಜು ಜನವರಿ 17 ರ ಮಧ್ಯಾಹ್ನ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇದರಿಂದ ಹೆದರಿದ ಪಲ್ಲವಿ ಜೋರಾಗಿ ಕಿರುಚಿಕೊಂಡಿದ್ದು, ಗಾಬರಿಗೊಂಡ ಮಾವ ಮನೆಯಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ತೀವ್ರ ಮನನೊಂದ ಪಲ್ಲವಿ ಬೀಚನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಗರಾಜು ಪತ್ತೆಗಾಗಿ ಬಲೆ ಬೀಸಿದ್ದಾರೆ.

ವಿದ್ಯಾರ್ಥಿನಿ ನೇಣಿಗೆ ಶರಣು

ಮೈಸೂರು: ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೋಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

Three crime happan in mysuru, rape attempt,suicide, mysterious death

ಮೃತ ವಿದ್ಯಾರ್ಥಿನಿಯನ್ನು ರಮ್ಮನಹಳ್ಳಿ ನಿವಾಸಿ ಪಲ್ಲವಿ(19)ಎಂದು ಗುರುತಿಸಲಾಗಿದೆ. ಈಕೆ ಶನಿವಾರ ಸಂಜೆ ಊಟ ಮುಗಿಸಿ ತನ್ನ ರೂಮಿಗೆ ತೆರಳಿದ್ದಳು. ಅಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three crime happan in mysuru. One is shshidhar mysterious death: his mother The complaint filed by the mother another one is father-in-law rape attempt his Daughter-in-law. Other one is Student, committed suicide by hanging herself
Please Wait while comments are loading...