ಮೈಸೂರು: ವಾಹನ ನಾಲೆಗೆ ಉರುಳಿ ಮೂವರು ಮಕ್ಕಳ ದುರ್ಮರಣ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 26 : ಆಪೇ ಆಟೋ ನಾಲೆಗೆ ಉರುಳಿ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ವಾಟಾಳ್ ಸಮೀಪ ನಡೆದಿದೆ. ಪುಟ್ಟಿ (೧೩), ರಾಜೇಂದ್ರ (೫), ಮಹದೇವಪ್ರಸಾದ್ (೫) ಮೃತ ಮಕ್ಕಳು.

ತಾಲ್ಲೂಕಿನ ವಾಟಾಳು ಗ್ರಾಮದ ಬಳಿ ಇರುವ ಮಹಾಬಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಕನ್ನಮ್ಮ ದೇವಸ್ಥಾನಕ್ಕೆ ತೆರಳುವಾಗ ಈ ಘಟನೆ ನಡೆದಿದೆ.

Three children died in accident in Mysuru

ಕಬಿನಿ ನಾಲಾ ರಸ್ತೆಯ ಏರಿ ಮೇಲೆ ಆಯತಪ್ಪಿ ಅಟೋ ನಾಲೆಯ ಮೇಲೆ ಮಗುಚಿ ಬಿದ್ದು ದುರ್ಘಟನೆ ಸಂಭವಿಸಿದೆ. ಇದರಲ್ಲಿ ಬಾಲಕಿ ಪುಟ್ಟಿ ಶವ ದೊರೆತಿದ್ದು, ಇನ್ನಿಬ್ಬರು ಮಕ್ಕಳ ಶವಕ್ಕಾಗಿ ಹುಡುಕಾಟ ನಡೆಸಲಾಗಿದೆ.

Three children died in accident in Mysuru

ಇನ್ನು 10 ಜನ ಈ ಆಟೋದಲ್ಲಿ ತೆರಳುತ್ತಿದ್ದ ವೇಳೆ ಮುಳುಗಿದ್ದು, ಸ್ಥಳೀಯರು ರಕ್ಷಣೆಯಲ್ಲಿ ತೊಡಗಿದ್ದಾರೆ. ನಾಪತ್ತೆಯಾದವರ ಹುಡುಕಾಟ ನಡೆಸಲಾಗಿದೆ. ಸ್ಥಳಕ್ಕೆ ಟಿ. ನರಸೀಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three children killed when Appe auto in which they were travelling fell inverted on the road in Mysuru. Incident happened at Vatal in T. Narasipura Taluk.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X