ಕೆ.ಆರ್ ನಗರ ಜಾತ್ರೆ, ತೋಪಮ್ಮನಿಗೆ ನಮೋ ಎಂದ ಭಕ್ತರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,16: ಈಗ ಎಲ್ಲೆಡೆ ಜಾತ್ರಾ ಸಂಭ್ರಮ..ಚಾಮುಂಡೇಶ್ವರಿಯ ಅವತಾರವಾಗಿರುವ ವಿವಿಧ ಅಮ್ಮನವರ ದೇಗುಲಗಳಲ್ಲಿ ಜಾತ್ರೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಅಮ್ಮನವರ ಸಿಂಗಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕೆ.ಆರ್.ನಗರದ ಶ್ರೀ ಆದಿ ಶಕ್ತಿ ತೋಪಮ್ಮನವರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಂಗಳವಾರ ರಾತ್ರಿವರೆಗೂ ನಡೆದಿದೆ. ಜಾತ್ರೆಯಲ್ಲಿ ಹರ್ಷದಿಂದ ಪಾಲ್ಗೊಂಡಿದ್ದ ಭಕ್ತರು ತಮ್ಮ ಭಕ್ತಿಭಾವ ಮೆರೆದರು.[ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಗೊರವಯ್ಯ ನುಡಿದ ಭವಿಷ್ಯವಾಣಿ]

Thousands of devotees paricipated to Thopamma jaatre at KR Nagar, Mysuru

ಮೈಸೂರು-ಹಾಸನ ಮುಖ್ಯ ರಸ್ತೆಯಲ್ಲಿರುವ ತೋಪಮ್ಮನ ದೇವಾಲಯವು ಪಟ್ಟಣ ಸೇರಿದಂತೆ ಸುತ್ತಮುತ್ತಲ ಏಳು ಗ್ರಾಮದ ಗ್ರಾಮ ದೇವತೆ. ಈ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವೂ ಏಳು ಗ್ರಾಮದ ಮುಖಂಡರು ಮತ್ತು ಭಕ್ತಾಧಿಗಳ ಸಮ್ಮುಖದಲ್ಲಿ ಅಮ್ಮನ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿಶೇಷ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ಮಹೋತ್ಸವದ ಅಂಗವಾಗಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಭಾಗವಹಿಸಿದ್ದ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿಕೊಂಡರು.[ಜನಪದ ಸೊಗಡಿನಿಂದ ಮಿಂಚಿದ ಸುತ್ತೂರು ರಥೋತ್ಸವ]

Thousands of devotees paricipated to Thopamma jaatre at KR Nagar, Mysuru

ಮಹೋತ್ಸವದ ಅಂಗವಾಗಿ ಚೌಕಹಳ್ಳಿ ಗ್ರಾಮದ ಶ್ರೀ ರಾಘವೇಂದ್ರ ಶಾಮಿಲ್ ಮತ್ತು ದಿ. ಸಿ.ಬಿ. ಗೆಳೆಯ ಬಳಗದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ಕೆ.ಆರ್.ನಗರ ವೃತ್ತ ನಿರೀಕ್ಷಕ ಹೆಚ್.ಎನ್.ಸಿದ್ದಯ್ಯ ಅವರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.[ಸುತ್ತೂರು ಪುಣ್ಯಕ್ಷೇತ್ರದ ಮಹಿಮೆಯ ಕಥೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Thopamma jaatre is very famous jaatre at KR Nagar, Mysuru. This jaatre held at every year. Thousands of devotees were participated.
Please Wait while comments are loading...