ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಆಹಾರ ಮೇಳದಲ್ಲಿ ವಿದೇಶಿ ತಿನಿಸುಗಳನ್ನೂ ಸವಿಯಲು ಸಿದ್ಧರಾಗಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 17: ಈ ಬಾರಿಯ ದಸರಾ ಹಬ್ಬದಲ್ಲಿ ವಿದೇಶಿ ತಿನಿಸುಗಳ ರುಚಿಯನ್ನು ಕೂಡ ಸವಿಯಬಹುದು. ಹೌದು, ಇಟಲಿ, ಶ್ರೀಲಂಕಾ, ಯೂರೋಪ್ ರಾಷ್ಟ್ರಗಳ ತಿನಿಸುಗಳನ್ನು ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೂಲಕ ತಯಾರಿಸಿ ಜನರಿಗೆ ಉಣಬಡಿಸುವ ಕೆಲಸಕ್ಕೆ ದಸರಾ ಸಮಿತಿ ಮುಂದಾಗಿದೆ.

10 ದಿನಗಳ ಕಾಲ ನಡೆಯುವ ದಸರಾ ಸಂಭ್ರಮದಲ್ಲಿ ಜನರ ನೆನಪಿನಲ್ಲಿ ಉಳಿಯುವ ಅನೇಕ ಕಾರ್ಯಕ್ರಮಗಳಲ್ಲಿ ಆಹಾರ ಮೇಳ' ಕೂಡ ಒಂದು.

ಉಡುಪಿಯಲ್ಲಿ 60 ಲಕ್ಷ ವೆಚ್ಚದಲ್ಲಿ 'ಅಡ್ವೆಂಚರ್ ಫೆಸ್ಟ್'ಉಡುಪಿಯಲ್ಲಿ 60 ಲಕ್ಷ ವೆಚ್ಚದಲ್ಲಿ 'ಅಡ್ವೆಂಚರ್ ಫೆಸ್ಟ್'

ರಾಜ್ಯದ ಉತ್ತರ ಕರ್ನಾಟಕದ ಎಣ್ಣೆಗಾಯಿ ರೊಟ್ಟಿ, ದಾವಣಗೆರೆಯ ಬೆಣ್ಣೆ ದೋಸೆ, ಧಾರವಾಡ ಪೇಡ, ಬಂಗಾರಪೇಟೆ ಚುರುಮುರಿ, ಮೈಸೂರು ಪಾಕ್, ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ, ಮಂಗಳೂರಿನ ನೀರು ದೋಸೆ, ಮೀನಿನ ಖಾದ್ಯ, ಇದರ ಜೊತೆಗೆ ಆಂಧ್ರದ ಧಂ ಬಿರಿಯಾನಿ, ಚಿಕನ್ ಕಬಾಬ್, ಉತ್ತರ ಭಾರತದ ರೋಟಿ, ದಾಲ್... ಹೀಗೆ ದೇಶದ ನಾನಾ ಭಾಗಗಳ ತಿನಿಸುಗಳನ್ನು ಆಹಾರ ಮೇಳದ ಮೂಲಕ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಕಡಿಮೆ ದರದ ಮೂಲಕ ಉಣಬಡಿಸಲಾಗುತ್ತದೆ.

This time in Dasara Festival can also taste the foreign dishes

ಈ ಬಾರಿಯ ಆಹಾರ ಮೇಳ ಉಪ ಸಮಿತಿ ಹೊಸದೊಂದು ಯೋಜನೆ ರೂಪಿಸಿದ್ದು, ಮೇಳದ ಮೂಲಕ ವಿದೇಶಿ ತಿನಿಸುಗಳನ್ನೂ ಕೂಡ ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯಕ್ರಮಕ್ಕೆ ಕೈ ಹಾಕಿದೆ. ಇದಕ್ಕಾಗಿ ವ್ಯಾಸಂಗಕ್ಕೆಂದು ಮೈಸೂರಿಗೆ ಆಗಮಿಸಿರುವ ವಿದೇಶಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಚಿಂತನೆಯನ್ನು ನಡೆಸುತ್ತಿದೆ.

 ದಸರಾ ಆಹಾರ ಮೇಳದಲ್ಲಿ ನೀರೂರಿಸಲಿದೆ ಬಂಬೂ ಬಿರಿಯಾನಿ ದಸರಾ ಆಹಾರ ಮೇಳದಲ್ಲಿ ನೀರೂರಿಸಲಿದೆ ಬಂಬೂ ಬಿರಿಯಾನಿ

ಇಟಲಿ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಕಾಂಬೋಡಿಯಾ ಮುಂತಾದ ದೇಶಗಳ ವಿದ್ಯಾರ್ಥಿಗಳ ಮೂಲಕ ಅಲ್ಲಿನ ಪಾರಂಪರಿಕ ತಿನಿಸುಗಳನ್ನು ಮೇಳದ ಮೂಲಕ ಜನರಿಗೆ ಪರಿಚಯಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ನಗರದ ಜೆಎಸ್ ಎಸ್, ಮಾನಸ ಗಂಗೋತ್ರಿ, ಎನ್‍ಐಇ ಹಾಗೂ ಇನ್ನಿತರ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲಾಗಿದೆ.

 ಆಹಾರ ಪ್ರಿಯರಿಗೆ ದಸರೆಯಲ್ಲಿ ಬಂಬೂ ಬಿರಿಯಾನಿ ಭಾಗ್ಯ! ಆಹಾರ ಪ್ರಿಯರಿಗೆ ದಸರೆಯಲ್ಲಿ ಬಂಬೂ ಬಿರಿಯಾನಿ ಭಾಗ್ಯ!

ದಸರಾ ಹಬ್ಬದ ವೇಳೆ ಅವರ ದೇಶಗಳ ಪಾರಂಪರಿಕ ಹಾಗೂ ಪ್ರಖ್ಯಾತ ತಿನಿಸುಗಳನ್ನು ಪ್ರವಾಸಿಗರಿಗೆ ಪರಿಚಯಿಸಿ ಕೊಡುವಂತೆ ಮನವಿ ಮಾಡಿಕೊಳ್ಳಲು ಸಮಿತಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಅ.10ರಿಂದ 19ರವರೆಗೆ 10 ದಿನಗಳ ಕಾಲ ನಡೆಯಲಿರುವ ಆಹಾರ ಮೇಳದಲ್ಲಿ ವಿದೇಶಿ ಆಹಾರಗಳ ರುಚಿಯನ್ನೂ ಸವಿಯಬಹುದಾಗಿದೆ.

ಪ್ರತಿ ಬಾರಿಯಂತೆ ಈ ಬಾರಿ ಕೂಡ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಪ್ಯಾಲೆಸ್ ಬಳಿ ಮೈದಾನದಲ್ಲಿ ಆಹಾರ ಮೇಳ ನಡೆಯಲಿದೆ.

English summary
This time in Dasara Festival can also taste the foreign dishes. Yes this time Food Festival Sub-Committee has launched a new scheme. In this new project is planned for making foreign dishes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X