ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್. 11 ರ ವಿವಿಧ ವೇದಿಕೆಗಳ ಮೈಸೂರು ದಸರಾ ಕಾರ್ಯಕ್ರಮಗಳ ವಿವರ

|
Google Oneindia Kannada News

ಮೈಸೂರು, ಅಕ್ಟೋಬರ್. 11 : ನಾಡಹಬ್ಬ ಮೈಸೂರು ದಸರಾ-2018 ರ ಪ್ರಯುಕ್ತ ಅಕ್ಟೋಬರ್ 11 ರಂದು ನಡೆಯುವ ವಿವಿಧ ವೇದಿಕೆಗಳ ದಸರಾ ಕಾರ್ಯಕ್ರಮಗಳ ವಿವರ ಇಂತಿದೆ.

ಬೆಳಗ್ಗೆ 11-00 ಗಂಟೆಗೆ ಜೆ.ಕೆ. ಮೈದಾನದಲ್ಲಿ ಮಹಿಳಾ ದಸರಾವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸತಿ ಸಚಿವೆ ಡಾ. ಜಯಮಾಲ ಉದ್ಘಾಟಿಸುವರು.

ಬೆಳಗ್ಗೆ 11-30 ಕ್ಕೆ ಜೆ.ಕೆ. ಮೈದಾನದಲ್ಲಿ ಉದ್ಯಮ ಸಂಭ್ರಮ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆಯನ್ನು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಸಕ್ಕರೆ ಸಚಿವರಾದ ಕೆ.ಜೆ. ಜಾರ್ಜ್ ನೆರವೇರಿಸುವರು.

ಬೊಂಬೆಗಳ ದರ್ಬಾರ್ ನೋಡಲು ಅರಮನೆ ನಗರಿಗೆ ಇಂದೇ ಬನ್ನಿ...ಬೊಂಬೆಗಳ ದರ್ಬಾರ್ ನೋಡಲು ಅರಮನೆ ನಗರಿಗೆ ಇಂದೇ ಬನ್ನಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಇಂದು ಬೆಳಗ್ಗೆ 11.30ಕ್ಕೆ ಅತ್ತೆ ಸೊಸೆ ವಿಭಾಗದಲ್ಲಿ ಅಕ್ಕಿ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ ತಯಾರಿಕೆ ಸ್ಪರ್ಧೆ, ಮಧ್ಯಾಹ್ನ 3ಕ್ಕೆ ಮಹಿಳೆಯರಿಗೆ ಸವಿಭೋಜನ ಸ್ಪರ್ಧೆ ಇಡ್ಲಿ ತಿನ್ನುವ ಸ್ಪರ್ಧೆ, ಸಂಜೆ 4ಕ್ಕೆ ಸಾವಯವ ಧಾನ್ಯ ಆಹಾರ ಪದ್ಧತಿ ಬಗ್ಗೆ ಪ್ರವಚನ ಮತ್ತು ಆಹಾರ ತಯಾರಿಕೆಯು ಫುಡ್ ಆರ್ಟ್ ಕ್ರಾಫ್ಟ್ ಇನ್ಸ್ ಸ್ಟಿಟ್ಯೂಟ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ನಡೆಯಲಿದೆ.

This is the details of Dasara programs held on October 11

ಸಂಜೆ 5ಕ್ಕೆ ನಾದಸ್ವರ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಜಿ.ಚೇತನ್ ಕುಮಾರ್, ಸಂಜೆ 6ಕ್ಕೆ ಸ್ಯಾಕ್ಸೋಫೋನ್ ಕಾರ್ಯಕ್ರಮವನ್ನು ಸಾತಗಳ್ಳಿ ಬಡಾವಣೆ ಯದುಕುಮಾರ್, ಸಂಜೆ 7ಕ್ಕೆ ಸುಗಮ ಸಂಗೀತ ಕಾರ್ಯಕ್ರಮವನ್ನು ರಾಮಕೃಷ್ಣನಗರ ಹಂಸಿನಿ ಎಸ್.ಕುಮಾರ್, ರಾತ್ರಿ ನೃತ್ಯ ಪ್ರದರ್ಶನವನ್ನು ಮೈಸೂರಿನ ವಿ.ಆದರ್ಶ ಮತ್ತು ರಿವೈಬ್ ಡ್ಯಾನ್ ಅನ್ನು ಸುಪ್ರಿಯ
ನಡೆಸಿಕೊಡುವರು.

ಶ್ರೀಮುರಳಿಯವರಿಂದ ಸಂಜೆ 5ಕ್ಕೆ ಒಗ್ಗರಣೆ ಡಬ್ಬಿ ಅಡುಗೆ ತಯಾರಿಕಾ ನೇರ ಪ್ರಸಾರ, ಸಂಜೆ 7ಕ್ಕೆ ಕುಶಾಲನಗರದ ಸಾಗರ್ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

 ಕಾಂಗ್ರೆಸ್ ನಾಯಕರು ಅ.11ರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ: ಕುಮಾರಸ್ವಾಮಿ ಕಾಂಗ್ರೆಸ್ ನಾಯಕರು ಅ.11ರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ: ಕುಮಾರಸ್ವಾಮಿ

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಅರಮನೆ ಆವರಣದಲ್ಲಿ ಸಂಜೆ 5 ರಿಂದ 6-45 ರವರೆಗೆ ಶೃತಿ ವಿದ್ಯಾ ಸಂಗೀತ ಪಾಠ ಶಾಲೆಯ ವಿದ್ವಾನ್ ಎ.ವಿ.ದತ್ತಾತ್ರೇಯ ಅವರಿಂದ ಶಾಸ್ತ್ರೀಯ ಮ್ಯಾಂಡೋಲಿನ್ ವಾದನ ನಡೆಯಲಿದೆ.

ಸಂಜೆ 6-45 ರಿಂದ 7-30 ರವರೆಗೆ ಸಮೀರ್ ರಾವ್ ಮತ್ತು ವಂಶಿಧರ್ ಅವರಿಂದ ಕೊಳಲು ವಾದನ ಜುಗಲ್ ಬಂದಿ, ಸಂಜೆ 7 -30 ರಿಂದ 8-30 ರವರೆಗೆ ಬೆಂಗಳೂರಿನ ನಾಗಚಂದ್ರಿಕ ಭಟ್, ರವಿಮೂರುರು ತಂಡದವರಿಂದ ಗೀತಗಾಯನ ಜುಗಲ್ ಬಂದಿ, ರಾತ್ರಿ 8-30 ರಿಂದ 10 ರವರೆಗೆ ಪ್ರಸಿದ್ಧ ನೃತ್ಯ ಕಲಾವಿದರಾದ ಲಕ್ಷ್ಮಿಗೋಪಾಲಸ್ವಾಮಿ ಅವರಿಂದ ನೃತ್ಯ ವೈಭವ ನಡೆಯಲಿದೆ.

 ದಸರಾ ವಿಚಾರದಲ್ಲಿ ರಾಜಕೀಯ ಬೇಡ: ಪರಮೇಶ್ವರ ಮನವಿ ದಸರಾ ವಿಚಾರದಲ್ಲಿ ರಾಜಕೀಯ ಬೇಡ: ಪರಮೇಶ್ವರ ಮನವಿ

ಕಲಾಮಂದಿರದಲ್ಲಿ ಸಂಜೆ 5.30 ರಿಂದ 6 ರ ರವರೆಗೆ ಕೇರಳದ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದಿಂದ ಮೋಹಿನಿ ಅಟ್ಟಂ, ಸಂಜೆ 6 ರಿಂದ 7 ರ ವರೆಗೆ ಕಲ್ಬುರ್ಗಿಯ ಶಂಕರಪ್ಪ ಹೂಗಾರರಿಂದ ವಚನ ಗಾಯನ, ಸಂಜೆ 7 ರಿಂದ 8 ರವರೆಗೆ ಕೋಲಾರದ ಜನಘಟ್ಟ ಕೃಷ್ಣಮೂರ್ತಿಯವರಿಂದ ಜನಪದ ಗಾಯನ, ರಾತ್ರಿ 8 ರಿಂದ 9 ರವರೆಗೆ ಮೈಸೂರಿನ ರಾಜೇಂದ್ರ ಮತ್ತು ಲೋಕೇಶ್ ಎಸ್, ಹಂಸಲೇಖಾ ಮ್ಯೂಸಿಕಲ್ ಟ್ರಸ್ಟ್ ನಿಂದ ಜುಗಲ್ಬಂದಿ ಸಂಗೀತ ನಡೆಯಲಿದೆ.

ಗಾನ ಭಾರತಿ ವೇದಿಕೆಯಲ್ಲಿ ಸಂಜೆ 5.30 ರಿಂದ 6 ರವರೆಗೆ ಹಿಮಾಚಲ ಪ್ರದೇಶದ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದಿಂದ ಸಿರಿಮೌರಿನಟಿ ನೃತ್ಯ, ಸಂಜೆ 6 ರಿಂದ 7 ರವರೆಗೆ ಕೊಳ್ಳೇಗಾಲದ ಬ್ರಹ್ಮೇಶ್ ಪಿ.ಎಂ. ಮತ್ತು ತಂಡದಿಂದ ಸುಗಮ ಸಂಗೀತ ನಡೆಯಲಿದೆ.

ಸಂಜೆ 7 ರಿಂದ 8ರವರೆಗೆ ಮೈಸೂರಿನ ಸುಮಾರಾಜಕುಮಾರ್ ರಿಂದ ಮಾತನಾಡುವ ಬೊಂಬೆ ಕಾರ್ಯಕ್ರಮ, ರಾತ್ರಿ 8 ರಿಂದ 9 ರವರೆಗೆ ಶ್ರೀದೇವಿ ಕುಳೇನೂರಿನಿಂದ ಸುಗಮ ಸಂಗೀತ, ಚಿಕ್ಕ ಗಡಿಯಾರ ವೇದಿಕೆಯಲ್ಲಿ ಸಂಜೆ 5.30 ರಿಂದ 6 ರ ರವರೆಗೆ ಅಂಡಮಾನ್-ನಿಕೋಬಾರ್ ನ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದಿಂದ ನಿಕೋಬಾರಿ ನೃತ್ಯ,

ಸಂಜೆ 6 ರಿಂದ 7 ರ ವರೆಗೆ ಮೈಸೂರಿನ ಮಲ್ಲಿಗೆ ಕಲಾ ತಂಡದ ಎಂ.ಸಿ.ಜಗದೀಶ್ ಅವರಿಂದ ಸುಗಮ ಸಂಗೀತ, ಸಂಜೆ 7 ರಿಂದ 8 ರವರೆಗೆ ನಂಜನಗೂಡಿನ ಸುಗಮ ಸಂಗೀತ ಮತ್ತು ಜನಪದ ಗಾಯನ ತಂಡದಿಂದ ಜುಗಲ್ ಬಂದಿ, ರಾತ್ರಿ 8 ರಿಂದ 9 ರವರೆಗೆ ಮೋಹನ್ ಸುಮುಖ್ ಗ್ರೂಪ್ ನಿಂದ ಕ್ಲಾರಿಯೋನೆಟ್ ಫ್ಯೂಷನ್ ವಾದನ ನಡೆಯಲಿದೆ.

English summary
This is the details of Dasara programs of various platforms held on October 11 in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X