ಗ್ರಾ ಪಂಚಾಯಿತಿಗೆ ಕನ್ನ ಹಾಕಿ ಕಂಪ್ಯೂಟರ್ ದೋಚಿದ ಕಳ್ಳರು

Posted By:
Subscribe to Oneindia Kannada

ಪಿರಿಯಾಪಟ್ಟ, ನವೆಂಬರ್ 07 : ತಾಲ್ಲೂಕಿನ ಚಿಟ್ಟೇನಹಳ್ಳಿ ಗ್ರಾಮದ ಗ್ರಾಪಂ ಕಚೇರಿ ಹಾಗೂ ಸಹಕಾರ ಸಂಘದ ಕಚೇರಿಗೆ ನವೆಂಬರ್ 6 ರ ಸೋಮವಾರ ರಾತ್ರಿ ಕನ್ನ ಹಾಕಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ ಉಪಕರಣಗಳನ್ನು ಹೊತ್ತೊಯ್ದಿದ್ದಾರೆ.

ನವೆಂಬರ್ 7ರ ಮಂಗಳವಾರ ಬೆಳಗ್ಗೆ ಎಂದಿನಂತೆ ಚಿಟ್ಟೇನಹಳ್ಳಿ ಗ್ರಾಪಂಗೆ ನೌಕರರು ಆಗಮಿಸಿದ ವೇಳೆ ಕಚೇರಿಯ ಬಾಗಿಲು ತೆರೆದಿರುವುದನ್ನು ನೋಡಿ ಅಚ್ಚರಿ ಪಟ್ಟು ಒಳ ಹೋದಾಗ ನಿಜ ಸಂಗತಿ ಬಯಲಾಗಿದೆ.

Thieves broke into Panchayat Office and stoles Computer

ಗ್ರಾಪಂನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ ಉಪಕರಣಗಳು, ಲ್ಯಾಪ್‍ಟಾಪ್, ಪ್ರಿಂಟರ್ ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಇದಲ್ಲದೆ ಪಂಚಾಯಿತಿಯ ಅನೇಕ ದಾಖಲಾತಿಗಳನ್ನು ಜಾಲಾಡಿ ಅಸ್ಥವ್ಯಸ್ಥ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿ ಕಳ್ಳತನ ಮುಗಿಸಿ ಪಕ್ಕದಲ್ಲೇ ಇದ್ದ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಹಿಂದಿನ ಬಾಗಿಲಿನಿಂದ ಒಳನುಗ್ಗಿ ಅಲ್ಲಿಯೂ ಸಹ ಹಣಕ್ಕೆ ಜಾಲಾಡಿ ಕೊನೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ ಗಳನ್ನು ಹೊತ್ತೊಯ್ದಿದ್ದಾರೆ. ಕಳ್ಳರು ಕಳವು ಮಾಡುವ ಮುನ್ನ ಸಿಸಿ ಟಿವಿಯನ್ನು ಮುರಿದು ಹಾಕಿ ನಿಷ್ಕ್ರಿಯಗೊಳಿಸಿ ಬಳಿಕ ಕನ್ನ ಹಾಕಿರುವ ಕಾರಣ ಕಳ್ಳರ ಗುರುತು ಸಿಕ್ಕಿಲ್ಲ.

ಚಿಟ್ಟೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧ್ದಿ ಅಧಿಕಾರಿ ಕುಮಾರ್ ಪಿರಿಯಾಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Thieves broke into Panchayat bulding on November 6th night and Robbed computers, Printers and some Electronic machines in Mysore district, Piriyapattan talluks Chittenahalli. same gang broke into the a co-operative bank witch is very next to Panchayat Office and their also thives stolen some Computers. Piriyapatana police have started Investigation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ