ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ ಸಡಗರ ಹೆಚ್ಚಿಸಲು ಮಾರುಕಟ್ಟೆಗೆ ಬಂದ ಆಕರ್ಷಕ ಆಕಾಶಬುಟ್ಟಿಗಳು

|
Google Oneindia Kannada News

ಮೈಸೂರು, ನವೆಂಬರ್‌. 7: ದೀಪಾವಳಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಪಟ ಪಟನೆ ಸಿಡಿಯುವ ಪಟಾಕಿ. ನಂತರ ನೆನಪಾಗುವುದು ಬೆಳಕನೀಯುವ ಹಣತೆ. ಹೊಸಬಟ್ಟೆ, ಬಗೆಬಗೆ ತಿನಿಸು, ಸಾಲು ಸಾಲು ರಜೆ...

ದೀಪಾವಳಿ ವಿಶೇಷ ಪುರವಣಿ

ಇತ್ತೀಚೆಗೆ ಈ ಸಾಲಿನಲ್ಲಿ ಆಕಾಶಬುಟ್ಟಿಯೂ ಸೇರಿಕೊಂಡಿದೆ. ಬಲು ಹಿಂದಿನಿಂದಲೂ ಈ ಆಕಾಶಬುಟ್ಟಿ ಇತ್ತು. ಇದನ್ನು ಹೊತ್ತಿಸಿ ಆಕಾಶಕ್ಕೆ ಬಿಟ್ಟರೆ ಅದು ಆಗಸದಲ್ಲಿ ಮಿನುಗುತ್ತಾ ತೇಲುತ್ತಿತ್ತು. ಹಲವು ಆಕಾಶಬುಟ್ಟಿಗಳನ್ನು ಏಕಕಾಲಕ್ಕೆ ಬಿಟ್ಟರೆ ಕತ್ತಲ ಆಗಸದಲ್ಲಿ ತೇಲುವ ಇವುಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಅಪರೂಪದ ಸಂಗತಿಯಾಗಿತ್ತು.

ಈಗ ಆಕಾಶದಲ್ಲಿ ಹಾರಿಬಿಡುವ ಆಕಾಶಬುಟ್ಟಿಗಳ ಬದಲಿಗೆ ಮನೆಯ ಮುಂದೆ ತೂಗು ಹಾಕುವ ಆಕಾಶಬುಟ್ಟಿಗಳಿಗೆ ಹೆಚ್ಚಿನ ಪ್ರಾಧಾನ್ಯ ಬಂದಿದೆ. ಇವುಗಳಲ್ಲಿ ಚೀನಿ ನಿರ್ಮಿತ ಆಕಾಶಬುಟ್ಟಿಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇವುಗಳಲ್ಲಿ ಪ್ಲಾಸ್ಟಿಕ್, ಹಾನಿಕಾರಕ ಬಣ್ಣಗಳಿದ್ದು, ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತವೆ ಎಂಬುದು ನಿಮ್ಮ ಗಮನದಲ್ಲಿರಲಿ.

 ಚೀನಾ ಮೇಡ್ ಪಟಾಕಿಗಳನ್ನು ಬಳಸಬೇಡಿ, ಹಿಂದೂ ಸಂಘಟನೆ ಆಗ್ರಹ ಚೀನಾ ಮೇಡ್ ಪಟಾಕಿಗಳನ್ನು ಬಳಸಬೇಡಿ, ಹಿಂದೂ ಸಂಘಟನೆ ಆಗ್ರಹ

ಮಾರುಕಟ್ಟೆಯಲ್ಲಿ ಬಗೆಬಗೆ ವಿನ್ಯಾಸಗಳ ಆಕಾಶಬುಟ್ಟಿಗಳು ಕಣ್ಮನ ಸೆಳೆಯುತ್ತವೆ. ಬೆಳಗುತ್ತಿರುವ ದೀಪ, ವಿಮಾನ, ಪಕ್ಷಿಗೂಡು, ಕುಂಬಳಕಾಯಿ, ಡ್ರಮ್ ಸೇರಿದಂತೆ ಅನೇಕ ಮಾದರಿಯ ಆಕಾಶಬುಟ್ಟಿಗಳು ಲಭ್ಯವಿದೆ. ಅವುಗಳ ಗಾತ್ರ ಹಾಗೂ ವಿನ್ಯಾಸಗಳಿಗೆ ತಕ್ಕಂತೆ ಬೆಲೆ ನಿಗದಿಯಾಗಿದೆ. ಮುಂದೆ ಓದಿ....

ಮನೆಯಲ್ಲಿಯೇ ತಯಾರಿಸಬಹುದು

ಮನೆಯಲ್ಲಿಯೇ ತಯಾರಿಸಬಹುದು

ಪ್ಲಾಸ್ಟಿಕ್ ನಿಂದ ತಯಾರಿಸಿದ, ವಿದ್ಯುತ್ ದೀಪಗಳಿಂದ ಅಲಂಕಾರಗೊಳ್ಳುವ ಆಕಾಶಬುಟ್ಟಿಗಳಿಗಿಂತ ದೀಪಗಳನ್ನು ಉರಿಸುವ ಆಕಾಶಬುಟ್ಟಿಗಳೇ ಮಿಗಿಲೆನಿಸುತ್ತವೆ. ಆದರೆ, ಇವುಗಳನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕಾಗುತ್ತದೆ. ಸ್ವಲ್ಪ ಶ್ರಮವಹಿಸಿದರೆ ಮನೆಯಲ್ಲಿಯೇ ಇರುವ ಸರಕಗಳನ್ನು ಉಪಯೋಗಿಸಿಕೊಂಡು ಆಕಾಶ ಬುಟ್ಟಿಗಳನ್ನು ತಯಾರಿಸಬಹುದು.

 ಜಿಯೋ ದೀಪಾವಳಿ ಹಬ್ಬದ ಧಮಾಕ, ಕ್ಯಾಶ್ ಬ್ಯಾಕ್ ಜಿಯೋ ದೀಪಾವಳಿ ಹಬ್ಬದ ಧಮಾಕ, ಕ್ಯಾಶ್ ಬ್ಯಾಕ್

ಗಾತ್ರಗಳಿಗೆ ಅನುಗುಣವಾಗಿ ಬೆಲೆ ನಿಗದಿ

ಗಾತ್ರಗಳಿಗೆ ಅನುಗುಣವಾಗಿ ಬೆಲೆ ನಿಗದಿ

ಮಾರುಕಟ್ಟೆಯಲ್ಲಿ ವಿವಿಧ ಗಾತ್ರಗಳ ಆಕಾಶ ಬುಟ್ಟಿಗಳು ಮಾರಾಟಕ್ಕಿದ್ದು, ಗಾತ್ರಗಳಿಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದೆ. ಅದರಲ್ಲೂ ಹೆಚ್ಚಾಗಿ ಕೋಮಲ್‌ ಡಿಸೈನ್‌, ಗುಲಾಬ್ ರಂಗೀಲಾ, ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು ಖರೀದಿದಾರರನ್ನು ಆಕರ್ಷಿಸುತ್ತಿವೆ.

ಹೆಚ್ಚು ಆಕಾಶಬುಟ್ಟಿಗಳು ಮಾರಾಟ

ಹೆಚ್ಚು ಆಕಾಶಬುಟ್ಟಿಗಳು ಮಾರಾಟ

ವ್ಯಾಪಾರಿಗಳು ಈ ಆಕಾಶ ಬುಟ್ಟಿಗಳನ್ನು ಮುಂಬೈ, ದೆಹಲಿ ಮತ್ತು ಕಲ್ಕತ್ತಾ ನಗರಗಳಿಂದ ತಂದು ಮಾರಾಟ ಮಾಡುತ್ತಾರೆ. ಕೆಲವು ವ್ಯಾಪಾರಿಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಆಕಾಶಬುಟ್ಟಿಗಳು ಮಾರಾಟವಾಗಿವೆಯಂತೆ!

ಕಣ್ಮನ ಸೆಳೆಯುತ್ತಿವೆ

ಕಣ್ಮನ ಸೆಳೆಯುತ್ತಿವೆ

ಕೇವಲ ರಂಗು ರಂಗಿನ ಹಾಳೆಗಳಿಗಷ್ಟೇ ಸೀಮಿತವಾಗಿದ್ದ ಆಕಾಶ ಬುಟ್ಟಿಗಳು ಈಗ ರಟ್ಟು, ಫೈಬರ್, ಪ್ಲಾಸ್ಟಿಕ್ ಬಟ್ಟೆಗಳಲ್ಲಿ ತಯಾರಾಗುತ್ತವೆ. ಜೊತೆಗೆ ಗೋಲಾಕಾರ, ಯೂ ಆಕಾರ, ಚೌಕಾಕಾರ, ನಕ್ಷತ್ರಾಕಾರ, ಪಿರಾಮಿಡ್ ಆಕಾರಗಳಲ್ಲಿ ಬಂದಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ.

English summary
There are various design Akasha Butti came to the market. There are several types of Akasha Butti available, including aircraft, bird, pumpkin and drum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X