ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ ಥೀಮ್ ಸಾಂಗ್

Posted By:
Subscribe to Oneindia Kannada

ಮೈಸೂರು, ನವೆಂಬರ್ 18 : ಮಲ್ಲಿಗೆ ನಗರಿ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಾಹಿತ್ಯಾಸಕ್ತರಿಗೆ ಸ್ವಾಗತ ಕೋರುವ ಸಮ್ಮೇಳನದ ಥೀಮ್ ಸಾಂಗ್ 'ಸ್ವಾಗತ, ಸುಸ್ವಾಗತ' ಸೋಮವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಲಿದೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರೇ ಸ್ವಯಂ ಸೇವಕರು

ಅದ್ಧೂರಿಯಾಗಿ ಸಮ್ಮೇಳನವನ್ನು ಆಯೋಜನೆ ಮಾಡಲು ನಿರ್ಧರಿಸಲಾಗಿದ್ದು, ಸಮ್ಮೇಳನದ ಪ್ರಚಾರ ಸಮಿತಿ 'ಸ್ವಾಗತ, ಸುಸ್ವಾಗತ' ಥೀಮ್ ಸಾಂಗ್ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರನ್ನು ಸೆಳೆಯುವ ಯತ್ನ ಮಾಡಿದೆ.

Theme Song is ready for 83rd Kannada Sahitya Sammelana

ನಾಗೇಶ್ ಕಂದೇಗಾಲ ತಂಡದ ಯತ್ನ:
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಹಕಾರ ದೊಂದಿಗೆ ರಚಿಸಲಾಗಿರುವ 'ಸ್ವಾಗತ, ಸುಸ್ವಾಗತ' ಥೀಮ್ ಸಾಂಗ್‌ನ್ನು ನಾಗೇಶ್ ಕಂದೇಗಾಲ ತಂಡದವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಥೀಮ್ ಸಾಂಗ್‌ನ ಆಡಿಯೋ ಈಗಾಗಲೇ ವಾಟ್ಸಾಪ್‌ನಲ್ಲಿ ಓಡಾಡುತ್ತಿದೆ. ಸಮ್ಮೇಳನದ ಪ್ರಚಾರ ಸಮಿತಿ ಥೀಮ್ ಸಾಂಗ್‌ನ ವಿಡಿಯೋವನ್ನು ಯೂ ಟ್ಯೂಬ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್‌ನ್ನು ಸ್ಥಾಪಿಸಿದ ಕಾರಣ ಅವರನ್ನು ಸ್ಮರಿಸುವ, ಮೈಸೂರು ಎಂದರೆ ನೆನಪಾ ಗುವ ರಾಷ್ಟ್ರಕವಿ ಕುವೆಂಪು ಅವರನ್ನು ಇಲ್ಲಿ ನೆನೆಯುವ ಯತ್ನ ಮಾಡಲಾಗಿದೆ. ಇದರ ಜೊತೆಗೆ ಇತರ ಕವಿಗಳನ್ನು ಸ್ಮರಿಸಲಾಗಿದೆ.

''ಶ್ರೀ ನಾಲ್ವಡಿಯ ಅವರ ಸ್ಮರಿಸುತಾ
ಕುವೆಂಪು ಅವರ ನೆನೆಯುತಾ
ನುಡಿ ದೀವಿಗೆಯ ಬೆಳಗಿಸಿದ
ಕವಿಪುಂಗವರಿಹೆ ನಮಿಸುತಾ...
ಒಳನಾಡು ಗಡಿನಾಡು ಎಲ್ಲ ಕಡೆ
ಮೊಳಗಲಿ ಕನ್ನಡದ ಕಹಳೆ....
ಕನ್ನಡ ನೆಲ ಜಲ ಭಾಷೆಯ

ಸಂಕೋಲೆಗಳ ಬಿಡಿಸುವಂಥ
ಕಲೆ ಸಂಗೀತ ಜನಪದದ
ವಿಶ್ವದಾದ್ಯಂತ ಪಸರಿಸುತಾ
ಹಳೆ ಬೇರು ಹೊಸ ಚಿಗುರು ಜೊತೆಯಾಗಿ

ಸಾಹಿತ್ಯದ ರಥವ ಎಳೆಯೋಣ...'' ಎನ್ನುವ ಆಶಯವನ್ನು ಥೀಮ್ ಸಾಂಗ್ ಸಾರುವ ಯತ್ನ ಮಾಡಿದೆ. ಉತ್ತಮ ಸಂಗೀತ ಸಂಯೋಜನೆಯೊಂದಿಗೆ ಮೂಡಿ ಬಂದಿರುವ ಥೀಮ್ ಸಾಂಗ್ ಸಾಹಿತ್ಯಾಸಕ್ತರಿಗೆ ಸ್ವಾಗತ ಕೋರುವ ಜೊತೆಗೆ ಮತ್ತೆ ಮತ್ತೆ ಗುನುಗುವಂತೆ ಮಾಡುತ್ತಿದೆ.

ಇನ್ನು ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಅರಮನೆಯೇ ಉಡುಗೊರೆ !
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಅರಮನೆ ಪ್ರತಿಕೃತಿ ಉಡುಗೊರೆಯಾಗಿ ಲಭಿಸಲಿದೆ. ಮೂರುವರೆ ಅಡಿ ಎತ್ತರದ ಅರಮನೆ ಪ್ರತಿಕೃತಿಯ ಪಕ್ಕದಲ್ಲಿ ಮಹಿಷಾಸುರ ವಿಗ್ರಹ ಹಾಗೂ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು ಇರಲಿವೆ.

ಉದ್ಘಾಟನೆ, ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು ಗಣ್ಯರು ಸಾಹಿತಿಗಳು ಹಾಗೂ ಸನ್ಮಾನಿತರಿಗೆ ಈ ಸ್ಮರಣಿಕೆ ನೀಡಲಾಗುತ್ತದೆ. ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಸುಮಾರು 300 ಆಹ್ವಾನಿತರಿಗೆ ಸಮ್ಮೇಳನಾಧ್ಯಕ್ಷ ಹಾಗೂ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ಇರುವ ಸ್ಮರಣಿಕೆ ನೀಡಲು ವೇದಿಕೆ ನಿರ್ವಹಣಾ ಸಮಿತಿ ನಿರ್ಧರಿಸಿದೆ .

ಮೈಸೂರಿನಲ್ಲಿ ನಡೆಯುವ ಸಮ್ಮೇಳನ ಸದಾಕಾಲ ನೆನಪಿನಲ್ಲಿ ಉಳಿಯಬೇಕು. ಹೀಗಾಗಿ ಇಲ್ಲಿನ ಅರಮನೆಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ಸ್ಮರಣಿಕೆಗಳ ವಿನ್ಯಾಸ ಅಂತಿಮ ಹಂತದಲ್ಲಿದೆ ಎಂದು ಪಾಲಿಕೆ ಆಯುಕ್ತ ಜಿ ಜಗದೀಶ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The 83rd kannada sahithya sammelana was promoted In a grand way, in the sence welcome committee promoted Theme song for invites.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ