ಮದುವೆಯಾದ ಆರೇ ತಿಂಗಳಲ್ಲಿ ಮಹಿಳೆ ನೇಣಿಗೆ ಶರಣು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 24 : ಮದುವೆಯಾದ ಆರೇ ತಿಂಗಳಲ್ಲಿ ಮಹಿಳೆ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ನೇಣಿಗೆ ಶರಣಾದಾಕೆಯನ್ನು ಕುಂಬಾರಕೊಪ್ಪಲಿನ ನಿವಾಸಿ ಅಂಬಿಕ (28) ಎಂದು ಗುರುತಿಸಲಾಗಿದೆ. ಹೆಚ್.ಡಿ ಕೋಟೆಯ ಅಂಬಿಕಳನ್ನು 6ತಿಂಗಳ ಹಿಂದೆ ಮೈಸೂರಿನ ಗುರುನಾಥ ಎಂಬವನಿಗೆ ವಿವಾಹ ಮಾಡಿ ಕೊಡಲಾಗಿತ್ತು. ಗುರುನಾಥನಿಗೆ ಅಂಬಿಕ ಮೂರನೇಪತ್ನಿಯಾಗಿದ್ದಳು ಎಂದು ತಿಳಿದು ಬಂದಿದೆ.[ಮೈಸೂರಿನಲ್ಲಿ ವರದಕ್ಷಿಣೆ ಕಿರುಕುಳ: ಬೆಂಕಿಹಚ್ಚಿಕೊಂಡ ಮಹಿಳೆ]

The third wife who committed suicide by hanging himself in mysuru

ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಚಿನ್ನದ ಸರ ನೀಡಿ ವಂಚನೆ: ಬಂಧನ

ಮೈಸೂರು: ಅಸಲಿ ಚಿನ್ನವೆಂದು ನಂಬಿಸಿ ನಕಲಿ ಚಿನ್ನದ ಸರ ನೀಡಿ ಮಹಿಳೆಯೊಬ್ಬರಿಗೆ ವಂಚಿಸಿದ್ದ ವಂಚಕನನ್ನು ಹೆಬ್ಬಾಳು ಠಾಣಾ ಪೊಲೀಸರು ಬಂಧಿಸಿ, ರು.74,500 ಗಳನ್ನು ವಶಪಡಿಸಿಕೊಂಡಿದ್ದಾರೆ.[ಪೋಷಕರನ್ನು ಹೆದರಿಸಲು ಹೋಗಿ ಪ್ರಾಣತೆತ್ತ ವಿದ್ಯಾರ್ಥಿನಿ]

The third wife who committed suicide by hanging himself in mysuru

ಬಂಧಿತನನ್ನು ಶ್ರೀರಂಗಪಟ್ಟಣ ತಾಲೂಕು ಹೊಸ ಉಂಡವಾಡಿ ಗ್ರಾಮದ ನಿವಾಸಿ ರಾಜ್ ಚುನ್ನಿಲಾಲ್ ವಾಘೇಲಾ(45) ಎನ್ನಲಾಗಿದೆ. ಈತ ಕಿಡಗಣ್ಣಮ್ಮ ಬಡಾವನೆಯ ಟೀ ಅಂಗಡಿಯನ್ನಿಟ್ಟುಕೊಂಡಿರುವ ನಿವಾಸಿ ನೀಲಮ್ಮ ಅವರನ್ನು ಜನವರಿ 20ರಂದು ಭೇಟಿ ಮಾಡಿ ನನ್ನ ಮಗನನ್ನು ಕೆಆರ್ ಎಸ್ ಪೊಲೀಸರು ಬಂಧಿಸಿದ್ದಾರೆ ಆತನನ್ನು ಬಿಡಿಸಿಕೊಳ್ಳಲು ಹಣದ ಅವಶ್ಯಕತೆಯಿದೆ. ಹೀಗಾಗಿ ನನ್ನ ಬಳಿಯಿರುವ ಚಿನ್ನದ ಸರವನ್ನು ಕಡಿಮೆ ಬೆಲೆಗೆ ಮಾರುತ್ತಿದ್ದೇನೆ ಬೇಕಿದ್ದರೆ ಪರೀಕ್ಷಿಸಿ ಕೊಳ್ಳಿ ಎಂದು ಚಿಕ್ಕ ಚಿನ್ನದ ಸರವನ್ನು ನೀಡಿದ್ದು, ಆಕೆ ನಂಬಿ ತಾನು ಕೂಡಿಟ್ಟಿದ್ದ ರು 1 ಲಕ್ಷ ಹಣವನ್ನು ಅವನಿಗೆ ಪಾವತಿಸಿದ್ದಾಳೆ.

ಆದರೆ ಆತ ನಕಲಿ ಚಿನ್ನ ಸರ ನೀಡಿದ್ದಾನೆಂದು ನಂತರ ತಿಳಿದು ಬಂದಿದ್ದು, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜ.22ರಂದು ರಾತ್ರಿ ಪೊಲೀಸರು ಕೆ.ಆರ್.ಎಸ್ ನಲ್ಲಿ ಆರೋಪಿಯನ್ನು ಪತ್ತೆ ಮಾಡಿ, ಆತನನ್ನು ಬಂಧಿಸಿ ಮಹಿಳೆಗೆ ಮೋಸ ಒಂದು ಲಕ್ಷ ಹಣದಲ್ಲಿ ರು. 74,500 ವಶಪಡಿಸಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The women committed suicide by hanging himself in Mysore.person Cheating the women give fake gold chain and take the money to escape in mysuru.
Please Wait while comments are loading...