ಅಪನಗದೀಕರಣದ ಹಿಂದೆ ಯಾರ ಹುನ್ನಾರವಿದೆ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 4 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ 'ನೋಟು ಅಮಾನ್ಯೀಕರಣದ ಹಿಂದೆ ಹುನ್ನಾರವಿದೆಯೇ' ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಸಂಚಾಲಕ ಮಲ್ಲೇಶ ಚಿಂಚನಹಳ್ಳಿ ಅವರು ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಜ.7 ರಂದು ಬೆಳಿಗ್ಗೆ 11:30ಕ್ಕೆ ಬೆಂಗಳೂರಿನ, ಕಬ್ಬನ್ ಪಾರ್ಕ್‍ನ ಎನ್.ಜಿ.ಓ. ಸಭಾಂಗಣದಲ್ಲಿ ವಿಚಾರಸಂಕಿರಣವನ್ನು ಹಮ್ಮಿಕೊಂಡಿದ್ದು, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸುವರು ಎಂದರು.[ಅಪನಗದೀಕರಣದಿಂದ ಅಮೆರಿಕ ಚುನಾವಣೆವರೆಗೆ ಇನ್ಫಿ ಸಿಇಒ ಸಿಕ್ಕಾ ಪತ್ರ]

The state-level seminar on January 7 about the Note invalidation

ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ವೈ.ಎಸ್.ವಿ. ದತ್ತಾ, ರಾಜು ಅಲಗೂರ, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ, ಪ್ರಗತಿಪರ ಚಿಂತಕ ಮಂಗ್ಳೂರ ವಿಜಯ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಬಂಬೂ ಬಜಾರ್, ಹಿಟ್ನ ರಾಜಣ್ಣ, ಹನುಮಂತ ಬೆಳವತ್ತಾ ಇತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The state-level seminar on January 7 about the Note invalidation in Bangalore
Please Wait while comments are loading...